ಬೆಂಗಳೂರು, (ಮೇ.27) : 2019ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೊಂದು ಅವಕಾಶ ಇದ್ದು, ಸಪ್ಲೀಮೆಂಟರಿ ಪರೀಕ್ಷೆ (ಪೂರಕ ಪರೀಕ್ಷೆ) ವೇಳಾಪಟ್ಟಿಯನ್ನು ಪದವಿ ಪೂರ್ವ ಶಿಕ್ಷಣ ಇಲಾಖೆ ಇಂದು (ಸೋಮವಾರ) ಪ್ರಕಟಿಸಿದೆ.

PUC ನಂತರ ಮುಂದೇನು? ಇಲ್ಲಿದೆ ಸಿಂಪಲ್ ಟಿಪ್ಸ್

ಇದೇ ಜೂನ್ 11 ರಿಂದ ಜೂನ್  20ರ ವರೆಗೆ ಸತತ 8 ದಿನಗಳ ವರೆಗೆ ಪೂರಕ ಪರೀಕ್ಷೆಗಳು ನಡೆಯಲಿವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿದೆ. 

ಪಿಯುಸಿ First Rank ಸರದಾರರು

ಈ ಮೊದಲು ಜೂನ್ 7 ರಿಂದ 18 ರವರೆಗೆ ಪಿಯು ಪೂರಕ ಪರೀಕ್ಷೆಗಳು ನಡೆಯತ್ತವೆ ಎಂದು ಪದವಿ ಪೂರ್ವ ಶಿಕ್ಷಣ ಇಲಾಖೆ ತಿಳಿಸಿತ್ತು. ಆದ್ರೆ ಕಾರಣಾಂತರಗಳಿಂದ ಪರೀಕ್ಷೆ ದಿನಾಂಕವನ್ನು ಜೂನ್ 11 ರಿಂದ ಜೂನ್  20ರ ವರೆಗೆ ಮುಂದೂಡಿದೆ.  ಹೊಸ ವೇಳಾಪಟ್ಟಿ ಈ ಕೆಳಗಿನಂತಿದೆ.

ಪೂರಕ ಪರೀಕ್ಷೆ ವೇಳಾಪಟ್ಟಿ
* ಜೂನ್ 11ಕ್ಕೆ ಸಮಾಜಶಾಸ್ತ್ರ, ಅಕೌಂಟೆಂನ್ಸಿ, ಸಾಮಾನ್ಯ ಗಣಿತ
* ಜೂನ್ 12ಕ್ಕೆ -ಇಂಗ್ಲೀಶ್
* ಜೂನ್ 13ಕ್ಕೆ -ಅರ್ಥಶಾಸ್ತ್ರ,ಭೌತಶಾಸ್ತ್ರ
* ಜೂನ್ 14- ಐಶ್ಚಿಕ ಕನ್ನಡ,ಎಲೆಕ್ಟ್ರಾನಿಕ್ಸ್ ,ಕಂಪ್ಯೂಟರ್ ಸೈನ್ಸ್
* ಜೂನ್ 15 -ಕನ್ನಡ
* ಜೂನ್ 17 -ಬಿಸಿನೆಸ್ ಸ್ಟಡೀಸ್,ರಾಸಾಯನಿಕ ಶಾಸ್ತ್ರ,ಎಜುಕೇಶನ್
* ಜೂನ್ 18- ಇತಿಹಾಸ,
* ಜೂನ್ 19 - ರಾಜ್ಯಶಾಸ್ತ್ರ ,ಗಣಿತ
* ಜೂನ್ 20 - ಹಿಂದಿ