Asianet Suvarna News Asianet Suvarna News

ಕರ್ನಾಟಕ ಸಿಇಟಿ ಫಲಿತಾಂಶ ಪ್ರಕಟ: ಇಲ್ಲಿದೆ ಟಾಪರ್ಸ್‌ ಪಟ್ಟಿ!

2019-20ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟ| ಮಲ್ಲೇಶ್ವರಂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಪ್ರಕಟ| ಡಿಸಿಎಂ ಅಶ್ವಥ್ ನಾರಾಯಣ ಸುದ್ದಿಗೋಷ್ಟಿ ಮೂಲಕ ಫಲಿತಾಂಶ ಪ್ರಕಟ| ಕೊರೋನಾದಿಂದ ಸಿಇಟಿ ಪರೀಕ್ಷೆ ವಿಳಂಬವಾಗಿ ನಡೆದಿತ್ತು

Karnataka CET Result 2020 Announced
Author
Bangalore, First Published Aug 21, 2020, 12:53 PM IST

ಬೆಂಗಳೂರು(ಆ.21): 2019-20ನೇ ಸಾಲಿನ ಸಿಇಟಿ ಫಲಿತಾಂಶ ಪ್ರಕಟಗೊಂಡಿದೆ. ಮಲ್ಲೇಶ್ವರಂ ಕರ್ನಾಟಕ ಪರೀಕ್ಷಾ ಪ್ರಾಧಿಕಾರದಲ್ಲಿ ಡಿಸಿಎಂ ಅಶ್ವಥ್ ನಾರಾಯಣ ಸುದ್ದಿಗೋಷ್ಟಿ ಮೂಲಕ ಫಲಿತಾಂಶ ಪ್ರಕಟಗೊಳಿಸಿದ್ದಾರೆ. ಇನ್ನು ಕೊರೋನಾದಿಂದ ಸಿಇಟಿ ಪರೀಕ್ಷೆ ವಿಳಂಬವಾಗಿತ್ತಾದರೂ ಇದೇ ಮೊದಲ ಬಾರಿ ಕೇವಲ 20 ದಿನಗಳಲ್ಲಿ ಸಿಇಟಿ ಫಲಿತಾಂಶ ಪ್ರಕಟಗೊಳಿಸಲಾಗಿದೆ. 

"

https://www.karresults.nic.in ಜಾಲಾತಾಣದಲ್ಲಿ ಮಧ್ಯಾಹ್ನ 1ಗಂಟೆಯಿಂದ ಫಲಿತಾಂಶ ಲಭ್ಯವಾಗಲಿದೆ. ಇಲ್ಲಿನ CET- 2020 ಎಂಬ ಲಿಂಕ್ ಕ್ಲಿಕ್ ಮಾಡಿ ನೋಂದವಣಿ ಸಂಖ್ಯೆ ನಮೂದಿಸಿ ಫಲಿತಾಂಶ ಪಡೆಯಬಹುದಾಗಿದೆ.

ಸುದ್ದಿಗೋಷ್ಠಿಯಲ್ಲಿ ಡಿಸಿಎಂ ಅಶ್ವಥ್ ನಾರಾಯಣ್ ಉಲ್ಲೇಖಿಸಿದ ಪ್ರಮುಖ ಅಂಶಗಳು

'ಕೊರೋನಾ ಸೋಂಕಿತ ವಿದ್ಯಾರ್ಥಿಗಳು ಯಶಸ್ವಿಯಾಗಿ ಪರೀಕ್ಷೆ ಬರೆದಿದ್ದಾರೆ. ಒಟ್ಟು 63 ಸೋಂಕಿತ ವಿದ್ಯಾರ್ಥಿಗಳು ಸಿಇಟಿ ಪರೀಕ್ಷೆ ಬರೆದಿದ್ದು, ರೋಗದ ಲಕ್ಷಣಗಳು ಇದ್ದ ವಿದ್ಯಾರ್ಥಿಗಳಿಗೆ ಪ್ರತ್ಯೇಕ ಪರೀಕ್ಷಾ ಕೇಂದ್ರ ಮಾಡಲಾಗಿತ್ತು.

ಪರೀಕ್ಷೆ ನಡೆಯಲು ಸಾರಿಗೆ, ಪೊಲೀಸ್ ಹಾಗೂ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಸೇರಿದಂತೆ ವೈದ್ಯರು ಸಹ ಕೆಲಸ ಮಾಡಿದ್ದಾರೆ.

ಈ ಬಾರಿ 127 ಸ್ಥಳದಲ್ಲಿ ಪರೀಕ್ಷೆ ನಡೆದಿದೆ. 497 ಪರೀಕ್ಷಾ ಕೇಂದ್ರಗಳಲ್ಲಿ ಸಿಇಟಿ ಪರೀಕ್ಷೆ ನಡೆಸಲಾಯ್ತು

ಇಂಜಿನಿಯರಿಂಗ್ ಕೋರ್ಸ್: 1,94,419 ತೆಗೆದುಕೊಂಡ ವಿದ್ಯಾರ್ಥಿಗಳು| ಪರೀಕ್ಷೆಗೆ ಹಾಜರದಾವರು 1,75,349 ವಿದ್ಯಾರ್ಥಿಗಳು| 1,53,470 ವಿದ್ಯಾರ್ಥಿಗಳಿಗೆ ಇಂಜಿನಿಯರಿಂಗ್ ರ್ಯಾಂಕ್ ನೀಡಲಾಗಿದೆ.

ಕೃಷಿ ಕೋರ್ಸ್ ಗೆ 1,27,627 ರ್ಯಾಂಕ್ ಘೋಷಣೆ ಮಾಡಲಾಗಿದೆ

ಪಶುವೈದ್ಯಕೀಯ ಕೋರ್ಸ್ ಗಳಿಗೆ- 1,29,666 ರ್ಯಾಂಕ್ ನೀಡಲಾಗಿದೆ

ಬಿಫಾರ್ಮ ಡಿಫಾರ್ಮಾ 1,55,552 ವಿದ್ಯಾರ್ಥಿಗಳು ರ್ಯಾಂಕ್ ಗೆ ಅರ್ಹ

ಟಾಪರ್ಸ್ ಲಿಸ್ಟ್

ಇಂಜಿನಿಯರಿಂಗ್ ಟಾಪ್ 3 ರ್ಯಾಂಕ್

1. ರಕ್ಷಿತ್ ಎಂ, ಆರ್ ವಿ ಕಾಲೇಜು, ಬೆಂಗಳೂರು
2. ಶುಭಾನ್ ಆರ್ - ಶ್ರೀ ಚೈತನ್ಯ ಇ ಟೆಕ್ನೋ ಶಾಲೆ, ಬೆಂಗಳೂರು
3. ಎಂ ಶಶಾಂಕ್ ಬಾಲಾಜಿ, ಬೇಸ್ ಪಿಯು ಕಾಲೇಜು, ಹುಬ್ಬಳ್ಳಿ

ಬಿ ಎಸ್ಸಿ ಅಗ್ರಿ ಟಾಪ್ 3 ರ್ಯಾಂಕ್

1. ವರುಣ್ ಗೌಡ ಎ ಬಿ, ಎಕ್ಸ್ ಪರ್ಟ್ ಕಾಲೇಜು, ಮಂಗಳೂರು
2. ಸಂಜನಾ ಕೆ, ಬೇಸ್ ಪಿಯು ಕಾಲೇಜು, ಮೈಸೂರು
3. ಲೋಕೇಶ್ ವಿ ಜೋಗಿ, ಶ್ರೀ ರಾಮಕೃಷ್ಣ ವಿದ್ಯಾಶಾಲಾ ಪಿಯು ಕಾಲೇಜು, ಮೈಸೂರು

ಪಶುವೈದ್ಯಕೀಯ ಟಾಪ್ 3 ರ್ಯಾಂಕ್

1. ಸಾಯಿ ವಿವೇಕ್ ಪಿ, ನಾರಾಯಣ ಇ ಟೆಕ್ನೋ ಶಾಲೆ, ಬೆಂಗಳೂರು
2. ಆರ್ಯನ್ ಮಹಲಿಂಗಪ್ಪ ಚನ್ನಾಳ್, ಪ್ರಗತಿ ಪಬ್ಲಿಕ್ ಸೆಕೆಂಡರಿ ಶಾಲೆ, ಕೋಟ
3. ಸಂಜನಾ ಕೆ, ಬೇಸ್ ಪಿಯು ಕಾಲೇಜು, ಮೈಸೂರು

ಬಿ ಫಾರ್ಮಾ, ಡಿ ಫಾರ್ಮಾ

1. ಸಾಯಿ ವಿವೇಕ್ ಪಿ, ನಾರಾಯಣ ಇ ಟೆಕ್ನೋ ಶಾಲೆ, ಬೆಂಗಳೂರು
2. ಸಂದೀಪನ್ ನಸ್ಕರ್, ಹೊರನಾಡ ಕನ್ನಡಿಗ
3. ಪವನ್ ಎಸ್ ಗೌಡ, ನಾರಾಯಣ ಪಿಯು ಕಾಲೇಜು, ಬೆಂಗಳೂರು

ಇನ್ನುಳಿದಂತೆ ಇದೇ ಮೊದಲ ಭಾರಿಗೆ ವಿದ್ಯಾರ್ಥಿಗಳಿಗೆ ಆನ್ ಲೈನ್ ‌ಮೂಲಕ ಕೌನ್ಸಿಲಿಂಗ್ ನಡೆಯಲಿದ್ದು, ದಾಖಲಾತಿ ದೃಢೀಕರಣ ಹಾಗೂ ಕೌನ್ಸಿಲಿಂಗ್ ದಿನಾಂಕ ಸಧ್ಯದಲ್ಲೇ ಪ್ರಕಟವಾಗಲಿದೆ.

"

 

Follow Us:
Download App:
  • android
  • ios