ಬೆಂಗಳೂರು, (ಜುಲೈ.13):  ಕರ್ನಾಟಕ ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ನಾಳೆ (ಜುಲೈ 14) ಬೆಳಗ್ಗೆ 11.30ಕ್ಕೆ ಪ್ರಕಟಗೊಳ್ಳಲಿದೆ. ಮಂಗಳವಾರ ಬೆಳಗ್ಗೆ 11.30ಕ್ಕೆ ಎಲ್ಲ ವಿದ್ಯಾರ್ಥಿಗಳ ಮೊಬೈಲ್​ಗೆ ಎಸ್​ಎಂಎಸ್​ ಮುಖಾಂತರ ಫಲಿತಾಂಶ ರವಾನೆಯಾಗಲಿದೆ. ಮಧ್ಯಾಹ್ನ 12 ಗಂಟೆಯ ನಂತರ ಇಲಾಖೆಯ ಅಧಿಕೃತ ವೆಬ್​ಸೈಟ್​ನಲ್ಲಿ ರಿಸಲ್ಟ್​ ವೀಕ್ಷಿಸಬಹುದು.

"

 ಈ ಬಗ್ಗೆ ಫೇಸ್​ಬುಕ್​ ಲೈವ್​ನಲ್ಲಿ ಮಾತನಾಡಿದ ಸಚಿವ ಸುರೇಶ್​ ಕುಮಾರ್, ನಾಳೆ (ಮಂಗಳವಾರ) ಮಧ್ಯಾಹ್ನ 12 ಗಂಟೆ ನಂತರ ಇಲಾಖೆ ವೆಬ್​ಸೈಟ್​ www.karresults.nic.in ನಲ್ಲಿ ಫಲಿತಾಂಶ ವೀಕ್ಷಿಸಬಹುದು ಎಂದು ಮಾಹಿತಿ ನೀಡಿದರು.

ಪ್ರಥಮ ಪಿಯು ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್ ಕೊಟ್ಟ ರಾಜ್ಯ ಸರ್ಕಾರ

ಕಳೆದ ಮಾರ್ಚ್​ 4ರಿಂದ 21ನೇ ತಾರೀಖಿನವರೆಗೂ ದ್ವೀತಿಯ ಪಿಯು ಎಕ್ಸಾಂ ನಡೆದಿತ್ತು. ಮಾರ್ಚ್ 23ರಂದು ಕೊನೆಯದಾಗಿ ಇಂಗ್ಲಿಷ್​ ಪರೀಕ್ಷೆ ನಡೆಯಬೇಕಿತ್ತು. ಅಷ್ಟರಲ್ಲಿ ಕರೊನಾ ಭೀತಿ ಆವರಿಸಿದ್ದರಿಂದ ಈ ಪರೀಕ್ಷೆಯನ್ನು ಮುಂದೂಡಲಾಗಿತ್ತು. ಕಳೆದ ತಿಂಗಳು ಅಂದರೆ ಜೂನ್​ 18ರಂದು ಇಂಗ್ಲಿಷ್​ ಎಕ್ಸಾಂ ನಡೆದಿತ್ತು.

ಇದಾದ ಬಳಿಕ ಫಲಿತಾಂಶ ಯಾವಾಗ ಎಂಬ ಪ್ರಶ್ನೆ ಪದೇಪದೆ ಉದ್ಭವಿಸುತ್ತಲೇ ಇತ್ತು. ಜುಲೈ 20ರೊಳಗೆ ರಿಸಲ್ಟ್ ಬರಲಿದೆ ಎಂದು ಸಚಿವ ಸುರೇಶ್​ ಕುಮಾರ್​ ಇತ್ತೀಚಿಗಷ್ಟೇ ಹೇಳಿದ್ದರು. ಇಂದು (ಸೋಮವಾರ) ಅಧಿಕೃತವಾಗಿ ದಿನಾಂಕ ಘೋಷಿಸಿದ ಸಚಿವರು, ನಾಳೆಯೇ ಫಲಿತಾಂಶ ಪ್ರಕಟ ಆಗಲಿದೆ ಎಂದು ತಿಳಿಸಿದ್ದು, ಒಟ್ಟು6.75 ಲಕ್ಷ ವಿದ್ಯಾರ್ಥಿಗಳು  ಭವಿಷ್ಯ ಜುಲೈ 14ಕ್ಕೆ ನಿರ್ಧಾರವಾಗಲಿದೆ.