ಉದ್ಯೋಗ ಸೃಷ್ಟಿಸಲು ವಿಫಲವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ನಿರಂತರ ಆಪಾದನೆಗಳನ್ನು ಮಾಡುತ್ತಿರುವಾಗಲೇ, ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಲ್ಲಿ ಕರ್ನಾಟಕದ ಸಾಧನೆ ಉಲ್ಲೇಖವಾಗಿದೆ.

ನವದೆಹಲಿ, [ಡಿ.04]: ಕಳೆದೊಂದು ವರ್ಷದ ಅವಧಿಯಲ್ಲಿ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವ ಮೂಲಕ ಕರ್ನಾಟಕ ದೇಶದಲ್ಲೇ ನಂ.2 ಸ್ಥಾನಕ್ಕೇರಿದೆ. 

Add Asianetnews Kannada as a Preferred SourcegooglePreferred

ಉದ್ಯೋಗ ಸೃಷ್ಟಿಸಲು ವಿಫಲವಾಗಿದೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ನಿರಂತರ ಆಪಾದನೆಗಳನ್ನು ಮಾಡುತ್ತಿರುವಾಗಲೇ, ಕೇಂದ್ರ ಸಾಂಖ್ಯಿಕ ಮತ್ತು ಕಾರ್ಯಕ್ರಮ ಅನುಷ್ಠಾನ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿ-ಅಂಶಗಳಲ್ಲಿ ಕರ್ನಾಟಕದ ಸಾಧನೆ ಉಲ್ಲೇಖವಾಗಿದೆ.

ಸಚಿವಾಲಯದ ಔದ್ಯೋಗಿಕ ಮುನ್ನೋಟ ವರದಿಯ ಪ್ರಕಾರ, 2017ರ ಸೆಪ್ಟೆಂಬರ್‌ನಿಂದ 2018ರ ಸೆಪ್ಟೆಂಬರ್‌ವರೆಗೆ 1.57 ಕೋಟಿ ಉದ್ಯೋಗಗಳು ದೇಶದಲ್ಲಿ ಸೃಷ್ಟಿಯಾಗಿವೆ. 

ಆ ಪಟ್ಟಿಯಲ್ಲಿ ಮಹಾರಾಷ್ಟ್ರ ಪ್ರಥಮ ಸ್ಥಾನದಲ್ಲಿದ್ದರೆ, ಕರ್ನಾಟಕ ಹಾಗೂ ತಮಿಳುನಾಡು ನಂತರದ ಸ್ಥಾನದಲ್ಲಿವೆ. ನೌಕರರ ಭವಿಷ್ಯ ನಿಧಿ (ಇಪಿಎಫ್‌) ಮಾಹಿತಿಯ ಅನುಸಾರ ಈ ವರದಿ ಸಿದ್ಧವಾಗಿದೆ.

 ಅಂದರೆ, ನೌಕರರ ಭವಿಷ್ಯ ನಿಧಿಗೆ ಹೊಸದಾಗಿ ಸೇರ್ಪಡೆಯಾದವರ ಅಂಕಿ-ಸಂಖ್ಯೆಯೇ ಈ ವರದಿಯ ತಿರುಳು. ಹಾಗೆ ಸೇರ್ಪಡೆಯಾದವರಲ್ಲಿ ಶೇ.82ರಷ್ಟುಮಂದಿ 35 ವರ್ಷದೊಳಗಿನವರಿದ್ದಾರೆ. ಹೀಗಾಗಿ ಯುವಕರಿಗೆ ಉದ್ಯೋಗ ಸಿಗುತ್ತಿಲ್ಲ ಎಂಬುದು ಸುಳ್ಳು ಎಂಬ ವಿಶ್ಲೇಷಣೆ ಕೇಳಿಬಂದಿದೆ.