ಕೊರೋನಾ ಸಂಕಟದ ನಡುವೆ ಐಐಟಿ ಬಾಂಬೆ ಘಟಿಕೋತ್ಸವ| ವರ್ಚುವಲೀ ರಿಯಾಲಿಟಿ ಮೋಡ್‌ನಲ್ಲಿ ಪದವಿ ಪಡೆದ ವಿದ್ಯಾರ್ಥಿಗಳು| ಭಾರತ ಇಡೀ ವಿಶ್ವಕ್ಕೇ ಮಾದರಿ ಎಂದ ನೋಬಲ್ ಪ್ರಶಸ್ತಿ ಪುರಸ್ಕೃತ

ಮುಂಬೈ(ಆ.24): ಕೊರೋನಾ ಸಂಕಟದ ನಡುವೆ ಐಐಟಿ ಬಾಂಬೆ ಭಾನುವಾರದಂದು ಡಿಜಿಟಲ್ ತಂತ್ರಜ್ಞಾನದ ಮೂಲಕ 58ನೇ ಘಟಿಕೋತ್ಸವ ಆಚರಿಸಿದೆ. ಇಲ್ಲಿ ವಿದ್ಯಾರ್ಥಿಗಳು ವರ್ಚುವಲೀ ರಿಯಾಲಿಟಿ ಮೋಡ್‌ನಲ್ಲಿ ಪದವಿ ಪಡೆದಿದ್ದಾರೆ. ಇದಕ್ಕಾಗೇ ವರ್ಚುವಲ್ ವೇದಿಕೆಯನ್ನೂ ನಿರ್ಮಿಸಲಾಗಿದೆ. ಕೊರೋನಾ ಪ್ರಕೋಪದಿಂದಾಗಿ ವಿದ್ಯಾರ್ಥಿಗಳೆಲ್ಲಾ ಒಂದುಗೂಡಲು ಸಾಧ್ಯವಾಗಿಲ್ಲ, ಆದರೆ ಈ ವರ್ಚುವಲ್ ಕಾರ್ಯಕ್ರಮ ಅವರೆಲ್ಲರನ್ನೂ ಒಗ್ಗೂಡಿಸಿದೆ. ಈ ಕಾರ್ಯಕ್ರಮಕ್ಕೆ ನೋಬಲ್ ಪ್ರಶಸ್ತಿ ವಿಜೇತ ಡಂಕನ್ ಹಾಲ್ಡೆನ್‌ರನ್ನು ಆಹ್ವಾನಿಸಲಾಗಿತ್ತು.

ಸಂಸ್ಥೆಯ 62 ವರ್ಷಗಳ ಇತಿಹಾಸದಲ್ಲಿ ವಿದ್ಯಾರ್ಥಿಗಳ ಡಿಜಿಟಲ್ ರೂಪಕ್ಕೆ ಡಿಗ್ರಿ ಹಾಗೂ ಪದಕಗಳನ್ನು ನೀಡಿದ್ದು ಇದೇ ಮೊದಲು. ಇನ್ನು ಕಾರ್ಯಕ್ರಮದಲ್ಲಿ ಮಾತನಾಡಿದ ನೋಬಲ್ ಪ್ರಶಸ್ತಿ ವಿಜೇತ ಡಂಕನ್ ಬದಲಾದ ಪರಿಸ್ಥಿತಿಯಲ್ಲಿ ಭಾರತ ಹೊಸ ಪ್ರಯೋಗ ಮಾಡುವಲ್ಲಿ ಯಶಸ್ವಿಯಾಗಿದೆ. ಇದು ಜಗತ್ತಿಗೇ ಮಾರ್ಗದರ್ಶಕನಂತಿದೆ. ಈ ಕಾರ್ಯಕ್ರಮದಿಂದ ಇಡೀ ವಿಶ್ವವೇ ಪಾಠ ಕಲಿಯಬೇಕಿದೆ ಎಂದಿದ್ದಾರೆ.

Scroll to load tweet…

ಜೂನ್ ತಿಂಗಳಲ್ಲಿ ಐಐಟಿ ಬಾಂಬೆ ತನ್ನ ಎಲ್ಲಾ ವಿದ್ಯಾರ್ಥಿಗಳಿಗೆ ಸಂಪೂರ್ಣವಾಗಿ ಆನ್‌ಲೈನ್ ಕ್ಲಾಸ್‌ ನೀಡಿದ ಮೊದಲ ಸಂಸ್ಥೆಯಾಯಿತು. ಇನ್ನು ಇಲ್ಲಿನ ನಿರ್ದೇಶಕ ಸುಭಾಸಿತ್ ಚೌರಿ ತಮ್ಮ ಫೇಸ್ಬುಕ್‌ ಪೋಸ್ಟ್‌ನಲ್ಲಿ ನಮ್ಮ ಮೊದಲ ಆದ್ಯತೆ ನಮ್ಮ ವಿದ್ಯಾರ್ಥಿಗಳು. ಸದ್ಯದ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಮುಂದಿನ ಸೆಮಿಸ್ಟರ್ ಸಂಪೂರ್ಣವಾಗಿ ಆನ್‌ಲೈನ್ ಮೂಲಕ ನಡೆಸಲು ನಿರ್ಧರಿಸಲಾಗಿದೆ. ನಾವು ವಿದದ್ಯಾರ್ಥಿಗಳ ಆರೋಗ್ಯದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ತಯಾರಿಲ್ಲ ಎಂದು ಬರೆದಿದ್ದಾರೆ.