ಸೋಶಿಯಲ್ ಮೀಡಿಯಾದಲ್ಲಿ ಸಿಬಿಎಸ್‌ಇ ಅಂಕಪಟ್ಟಿ ಹಂಚಿಕೊಂಡ ಐಎಎಸ್ ಅಧಿಕಾರಿ/ ನನಗೆ ಬಂದಿದ್ದು ಪಾಸಿಂಗ್ ಅಂಕಕ್ಕಿಂತ ಒಂದೇ ಒಂದು ಅಂಕ ಜಾಸ್ತಿ/ ಯಾರು ಧೈರ್ಯ ಕಳೆದುಕೊಳ್ಳಬೇಡಿ

ಅಹಮದಾಬಾದ್(ಜು. 14) ಎಲ್ಲ ಕಡೆ ದ್ವಿತೀಯ ಪಿಯು ಪರೀಕ್ಷೆ, ಸಿಬಿಎಸ್‌ಇ ಫಲಿತಾಂಶದ್ದೇ ಚರ್ಚೆ ಆಗುತ್ತಿದೆ. ಯಾರು ಫಸ್ಟ್, ಯಾರು ಲಾಸ್ಟ್, ಯಾರಿಗೆ ಎಷ್ಟು ಅಂಕ ಬಂತು?

ಇದೆಲ್ಲದರ ನಡುವೆ ಐಎಎಸ್ ಆಫೀಸರ್ ಒಬ್ಬರು ತಮ್ಮ ಸಿಬಿಎಸ್‌ಇ ಅಂಕಪಟ್ಟಿಯನ್ನು ಶೇರ್ ಮಾಡಿಕೊಂಡಿದ್ದಾರೆ. ಇದರಲ್ಲಿ ವಿಶೇಷ ಏನು ಅಂದುಕೊಳ್ಳಬೇಡಿ ಹೇಳ್ತೆವೆ ಕೇಳಿ..

ಐಎಎಸ್ ಅಧಿಕಾರಿ ನಿತಿನ್ ಸಂಗ್ವಾನ್ 2002ರ ತಮ್ಮ ಸಿಬಿಎಸ್‌ಇ ಅಂಕಪಟ್ಟಿ ಹಂಚಿಕೊಂಡಿದ್ದು ಅವರಿಗೆ ರಸಾಯನಶಾಸ್ತ್ರದಲ್ಲಿ ಸಿಕ್ಕಿದ್ದು ಕೇವಲ 24 ಅಂಕ!

600ಕ್ಕೆ 600 ಅಂಕ ಪಡೆದ ಜೈನ್ ಸಾಧನೆಯ ರಹಸ್ಯ

ಪರೀಕ್ಷೆ ಫೇಲ್ ಆದವರಿಗೆ ಹೊಸ ಧೈರ್ಯ ತುಂಬಲು ಅಧಿಕಾರಿ ಇದನ್ನು ಶೇರ್ ಮಾಡಿಕೊಂಡಿದ್ದೇನೆ ಎಂದು ಹೇಳಿದ್ದಾರೆ. ಅಹಮದಾಬಾದ್ ಸ್ಮಾರ್ಟ್ ಸಿಟಿ ಪ್ರಾಜೆಕ್ಟ್ ಸಿಇಒ ಆಗಿ ಕಾರ್ಯನಿರ್ವಹಿಸುತ್ತಿರುವ ನಿತಿನ್ ಪಾಸಿಂಗ್ ಅಂಕಕ್ಕಿಂತ ಒಂದೇ ಒಂದು ಅಂಕ ನನಗೆ ಜಾಸ್ತಿ ಬಂದಿತ್ತು. ಆದರೆ ನಾನು ಜೀವನದಲ್ಲಿ ಏನು ಆಗಬೇಕು ಅಂದುಕೊಂಡಿದ್ದೇನೋ ಅದರಿಂದ ಹಿಂದಕ್ಕೆ ಸರಿಯಲಿಲ್ಲ ಎಂದು ತಿಳಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಈ ಪೋಸ್ಟ್ ವೈರಲ್ ಆಗಿದೆ. ಅವರ ಸಾಧನೆಗೆ ಮೆಚ್ಚುಗೆಗಳು ಹರಿದು ಬಂದಿವೆ. 

Scroll to load tweet…