ಪರೀಕ್ಷೆ ಎಂದರೆ ಮಕ್ಕಳಿಗೆ ಎಲ್ಲಿಲ್ಲದ ಭಯ. ಆತಂಕ. ಪೋಷಕರೂ ಆತಂಕಗೊಂಡಿರುತ್ತಾರೆ. ಆದರೆ, ಸರಿಯಾಗಿ ಓದಿಕೊಂಡಿದ್ದರೆ, ಎಲ್ಲವೂ ಸರಿಹೋಗುತ್ತೆ. ಖುಷ್ ಖುಷಿಯಾಗಿ ಓದಲು ಇಲ್ಲಿವೆ ಟಿಪ್ಸ್....

ಸಮಯವಿಲ್ಲವೆಂಬ ನೆಪ ಹೇಳಿ, ಎಷ್ಟೊ ಮುಖ್ಯ ವಿಷಯಗಳನ್ನು ಓದದೇ ಮುಂದೊಡುತ್ತೇವೆ. ಪ್ರತಿ ದಿನ ಓದುವುದರಿಂದ ಎಲ್ಲವೂ ನೆನಪಿನಲ್ಲಿರುತ್ತೆ ಎಂಬುವುದು ಪೂರ್ಣ ಸತ್ಯವಲ್ಲ. ಆದರೆ, ಓದುವುದನ್ನು ಸೂಕ್ತ ರೀತಿಯಲ್ಲಿ ಓದಿದರೆ ನೆನಪಿನಲ್ಲಿ ಇರುವುದು ಗ್ಯಾರಂಟಿ. ಒಬ್ಬೊಬ್ಬರಿಗೆ ಒಂದೊಂದು ರೀತಿ ಓದಿದರೆ ನೆನಪಿನಲ್ಲಿರುತ್ತೆ. ನಿಮಗೆ ಯಾವುದು ಸೂಕ್ತವೋ, ಅಂಥ ವಿಧಾನವನ್ನು ನೀವೇ ಆಯ್ದುಕೊಳ್ಳಿ....

  • ನೋಡಿದ್ದು ನೆನಪಿನಲ್ಲಿ ಉಳಿಯುವುದಾದರೆ, ಗ್ಪಾಫಿಕ್ಸ್, ಚಿತ್ರ ಮತ್ತು ವಿಡಿಯೋ ನೋಡಿ ಕಲಿಯುವ ವಿಧಾನವನ್ನು ರೂಢಿಸಿಕೊಳ್ಳಿ.
  • ಕೇಳಿಸಿಕೊಂಡು ಕಲಿಯುವುದಾದರೆ, ಕೇಳಿಸಿಕೊಂಡರೆ ಎಲ್ಲವೂ ಜ್ಞಾಪಕದಲ್ಲಿಟ್ಟುಕೊಳ್ಳುತ್ತಾರೆ. 
  • ಬರೆದು ಓದುವರು - ಇವರು ಓದುವುದರಲ್ಲಿ ಮುಖ್ಯ ವಿಷಯವನ್ನು ಬರೆದುಕೊಂದು ಓದುತ್ತಾರೆ. ಆಗ ಮಾತ್ರ ಇವರಿಗೆ ಕಲಿತಿದ್ದು, ಮನಸ್ಸಿನಲ್ಲಿ ಉಳಿಯುತ್ತದೆ. 

ಯಾವ ರೀತಿ ಓದಿದರೆ ಬೆಸ್ಟ್?

  • ಯಾವ ವಿಚಾರ ಓದ ಬೇಕು, ಅದರಲ್ಲಿ ಯಾವುದನ್ನು ಪರೀಕ್ಷೆಯಲ್ಲಿ ಬರೆಯಬೇಕೆಂದು ನೋಟ್ ಮಾಡಿಟ್ಟುಕೊಳ್ಳಿ. 
  • ಬೈಹರ್ಟ್ ಮಾಡಿ ಯಾವತ್ತೂ ವಿಷಯವನ್ನು ನೆನಪಿನಲ್ಲಿಟ್ಟುಕೊಳ್ಳಲು ಯತ್ನಿಸಬೇಡಿ. ಬದಲಾಗಿ ವಿಷಯವನ್ನು ಅರ್ಥ ಮಾಡಿಟ್ಟುಕೊಂಡು, ಮನನ ಮಾಡಿಕೊಳ್ಳಿ.
  • ಹಳೆ ಪ್ರಶ್ನೆ ಪತ್ರಿಕೆಗಳನ್ನು ತಿರುವಿ ಹಾಕಿ.
  • ಓದುವ ಸ್ಥಳ ಶುದ್ಧವಾಗಿರಲಿ. ಅಗತ್ಯವಿರುವ ಪುಸ್ತಕ, ಪೆನ್, ಪೆನ್ಸಿಲ್‌ ಕೈ ಗೆಟಕುವಂತಿರಲಿ.
  • ಟೈಂ ಟೇಬಲ್ ಮಾಡಿಕೊಂಡು ಎಲ್ಲ ವಿಷಯವನ್ನೂ ಆ ಸಮಯದಲ್ಲಿ ಮುಗಿಸಲು ಯತ್ನಿಸಿ. 
  • ಓದುವ ನಡುವೆ ವಿರಾಮ/ ಬಿಡುವು ತೆಗೆದುಕೊಳ್ಳಿ, ಮೆದುಳಿಗೆ ಮತ್ತು ದೇಹಕ್ಕೆ ನೆಮ್ಮದಿ ಸಿಗುತ್ತದೆ. ಟವಿ, ಮೊಬೈಲ್‌ನಿಂದ ದೂರವಿದ್ದರೆ, ಕಣ್ಣಿನ ಒತ್ತಡ ಮೇಲೆ ಕಡಿಮೆಯಾಗುತ್ತದೆ.