ಚುನಾವಣಾ ನೆಪ ಹೇಳಿ ಪರೀಕ್ಷಾ ಕೇಂದ್ರ ಬದಲಾವಣೆ..! ‘ನೀಟ್’ ಗೊಂದಲದಿಂದಾಗಿ ಪರೀಕ್ಷಾರ್ಥಿಗಳ ಪರದಾಟ|ವಿದ್ಯಾರ್ಥಿಗಳಿಗೆ ಮತ್ತೆ ಅವಕಾಶ ನೀಡುವಂತೆ CM ಮನವಿ| ಮತ್ತೊಂದೆಡೆ ನೀಟ್ ಪರೀಕ್ಷೆಯಿಂದ ವಂಚಿತರಾದ ನೂರಾರು ವಿದ್ಯಾರ್ಥಿಗಳಿಗೆ ಮತ್ತೆ ಅವಕಾಶ ನೀಡುವಂತೆ ಮೋದಿಗೆ ಕುಟುಕಿದ ಸಿದ್ದು..!
ಬೆಂಗಳೂರು, [ಮೇ.05]: ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಪ್ರವೇಶ ಬಯಸುವ ಅಭ್ಯರ್ಥಿಗಳ ಪ್ರವೇಶಕ್ಕೆ ಇಂದು ನೀಟ್ ಪರೀಕ್ಷೆ ನಡೆದಿದೆ. ಆದ್ರೆ ಪರೀಕ್ಷೆಗೂ ಮುನ್ನ ಕಟ್ಟು ನಿಟ್ಟಿನ ಕ್ರಮ ಜರುಗಿಸಿದ್ದ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ, ಪರೀಕ್ಷೆ ವೇಳೆ ಸಾಕಷ್ಟು ಗೊಂದಲಗಳನ್ನ ಸೃಷ್ಟಿ ಮಾಡಿದೆ.
ಚುಣಾವಣಾ ಕಾರಣ ಕೊಟ್ಟು ಯಲಹಂಕದ ಪ್ರೆಸೆಡೆನ್ಸಿ ಕಾಲೇಜ್ ನಲ್ಲಿ ನಡೆಯಬೇಕಿದ್ದ ಪರೀಕ್ಷೆಯನ್ನ, ವಿದ್ಯಾರ್ಥಿಗಳಿಗೆ ಮಾಹಿತಿ ನೀಡಿದೆ ಹೊಸೂರು ರಸ್ತೆಯ ಕೂಡ್ಲುಗೇಟ್ ಬಳಿಯ ದಯಾನಂದ ಸಾಗರ್ ಕಾಲೇಜ್ ಸ್ಥಳಾಂತರ ಮಾಡಿದ್ದಾರೆ. ಇದ್ರಿಂದ ವಿದ್ಯಾರ್ಥಿಗಳು ಪರದಾಡಿದ್ರೆ, ಪೋಷಕರು, ಪೊಲೀಸರ ನಡುವೆ ವಾಗ್ವಾದವೇ ನಡೆದಿದೆ.
ಕೈಕೊಟ್ಟ ರೈಲು..!
ಪರೀಕ್ಷೆ ಬರೆಯಲು ಬರುವ ವಿದ್ಯಾರ್ಥಿಗಳಿಗೆ ರೈಲು ಕೈಕೊಟ್ಟಿದೆ. ಬಳ್ಳಾರಿಗೆ ರಾತ್ರಿ 8ಕ್ಕೆ ಬರಬೇಕಿದ್ದ ಹಂಪಿ ಎಕ್ಸ್ ಪ್ರೆಸ್ ರೈಲು, ಮಧ್ಯರಾತ್ರಿ 2 ಗಂಟೆಗೆ ಆಗಮಿಸಿ, ಬೆಂಗಳೂರಿಗೆ ಮಧ್ಯಾಹ್ನ 2.45ಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಾಕಷ್ಟು ವಿದ್ಯಾರ್ಥಿಗಳು ನೀಟ್ ಪರೀಕ್ಷೆಯನ್ನ ಮಿಸ್ ಮಾಡಿಕೊಂಡಿದ್ದಾರೆ.
ಹಾಗೇಯೇ ಚಿಕ್ಕಮಗಳೂರಿನಿಂದ ಬರುವ ವಿದ್ಯಾರ್ಥಿಗಳಿಗೆ ರೈಲು ಸಂಚಾರ ಅವ್ಯವಸ್ಥೇ ಬಿಸಿ ಮುಟ್ಟಿಸಿದೆ. ಇದ್ರಿಂದ ನೂರಾರು ವಿದ್ಯಾರ್ಥಿಗಳು ಪರೀಕ್ಷೆಯಿಂದ ವಂಚಿತರಾಗಿ ನಿರಾಸೆಯಾಗಿದ್ದಾರೆ.
ಮೋದಿಗೆ ಸಿಎಂ ಮನವಿ-ಸಿದ್ದು ಗುಟುರು
ವಿದ್ಯಾರ್ಥಿಗಳ ಪರದಾಟ ಕಂಡು ಸಿಎಂ ಕುಮಾರಸ್ವಮಿ ಅವರು ಈ ಬಗ್ಗೆ ಟ್ವಿಟ್ ಮಾಡಿ, ಮತ್ತೊಮ್ಮೆ ಪರೀಕ್ಷೆಗೆ ಅವಕಾಶ ನೀಡಬೇಕೆಂದು ಪ್ರಧಾನಿ ನರೇಂದ್ರ ಮೋದಿ ಹಾಗೂ ಸಚಿವ ಪ್ರಕಾಶ ಜಾವಡೇಕರ್ ಅವರಿಗೆ ಮನವಿ ಮಾಡಿದ್ದಾರೆ. ಮತ್ತೊಂದೆಡೆ ಮಾಜಿ ಸಿಎಂ ಸಿದ್ದರಾಮಯ್ಯ ಸಹ ಮತ್ತೊಮ್ಮೆ ಅವಕಾಶ ನೀಡಬೇಕೆಂದು ಮೋದಿಗೆ ಕುಟುಕಿದ್ದಾರೆ.
