SSLC ಫಲಿತಾಂಶ ಪ್ರಕಟವಾಗಿ ಕೆಲ ದಿನಗಳು ಕಳೆದಿವೆ. ಇದೀಗ ಮತ್ತೋರ್ವ ವಿದ್ಯಾರ್ಥಿನಿ ಮರು ಎಣಿಕೆಯಲ್ಲಿ ಟಾಪರ್ ಆಗಿ ಹೊರಹೊಮ್ಮಿದ್ದಾಳೆ.
ಹಾಸನ : SSLC ಫಲಿತಾಂಶ ಪ್ರಕಟವಾಗಿ ಕೆಲ ದಿನಗಳು ಕಳೆದಿದ್ದು, ಮರು ಎಣಿಕೆಯಲ್ಲಿ ಹಾಸನದ ವಿದ್ಯಾರ್ಥಿನಿಯೋರ್ವಳು ರಾಜ್ಯಕ್ಕೆ ಮೊದಲಿಗಳಾಗಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
625 ಕ್ಕೆ 624 ಅಂಕ ಪಡೆದಿದ್ದ ಪ್ರಗತಿ ಗೌಡ ಮತ್ತೆ ಮರು ಎಣಿಕೆ ಮಾಡಿದ್ದು, ಇದೀಗ 625 ಅಂಕಗಳಿಸಿದ್ದಾರೆ. ಈ ಮೂಲಕ ರಾಜ್ಯಕ್ಕೆ ಟಾಪರ್ ಆಗಿದ್ದಾರೆ.
ಹಾಸನದ ವಿಜಯ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, 625 ಅಂಕ ಪಡೆಯುವ ನಿರೀಕ್ಷೆಯಲ್ಲಿದ್ದ ಪ್ರಗತಿಗೆ 1 ಅಂಗ ಕಡಿಮೆ ಬಂದ ಕಾರಣ ಪೋಷಕರು ಮತ್ತೆ ಮರು ಎಣಿಕಗೆ ಅರ್ಜಿ ಹಾಕಿದ್ದರು.
ಇದೀಗ ನಿರೀಕ್ಷೆಯಂಯೆ ಪ್ರಗತಿ ಮೊದಲ ಶ್ರೇಣಿಯಲ್ಲಿ ತೇರ್ಗಡೆಯಾದ ಇಬ್ಬರೊಂದಿಗೆ ಪ್ರತಿಯೂ ಸೇರ್ಪಡೆಯಾಗಿದ್ದಾರೆ.
