ಬೆಂಗಳೂರು, ನ.08 : ಎಲೆಕ್ಟ್ರಾನಿಕ್ಸ್ ಕಾರ್ಪೊರೇಷನ್ ಆಫ್ ಇಂಡಿಯಾ (ಇಸಿಐಎಲ್) ಲಿಮಿಟೆಡ್ 400 ವಿವಿಧ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಲಾಗಿದೆ. 

ಇಸಿಐಎಲ್ ಜ್ಯೂನಿಯರ್ ಟೆಕ್ನಿಕಲ್ ಆಫೀಸರ್, ಜ್ಯೂನಿಯರ್ ಕನ್ಸಲ್ಟೆಂಟ್ ಫೀಲ್ಡ್ ಆಪರೇಷನ್ ಸೇರಿದಂತೆ 400 ಹುದ್ದೆಗಳನ್ನು ಭರ್ತಿ ಮಾಡುತ್ತಿದೆ. ಆಸಕ್ತ ಅಭ್ಯರ್ಥಿಗಳು ಇದೇ ನವೆಂಬರ್ 6 ರಿಂದ 10ರ ತನಕ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬಹುದಾಗಿದೆ. 

 ಕೆನರಾ ಬ್ಯಾಂಕ್‌ನಲ್ಲಿ 800 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ

ವಿದ್ಯಾರ್ಹತೆ: ಜ್ಯೂನಿಯರ್ ಟೆಕ್ನಿಕಲ್ ಆಫೀಸರ್ ಹುದ್ದೆಗೆ ಎಲೆಕ್ಟ್ರಾನಿಕ್ಸ್ & ಕಮ್ಯುನಿಕೇಷನ್/ಮೆಕಾನಿಕಲ್/ಎಲೆಕ್ಟ್ರಾನಿಕ್ಸ್/ Instrumentation/ಎಲೆಕ್ಟ್ರಿಕಲ್ & ಎಲೆಕ್ಟ್ರಾನಿಕ್ಸ್/ಕಂಪ್ಯೂಟರ್ ಸೈನ್ಸ್,/ Information Technology ಯಲ್ಲಿ ಶೇ 60ಕ್ಕಿಂತ ಹೆಚ್ಚಿನ ಅಂಕಗಳೊಂದಿಗೆ ಮಾನ್ಯತೆ ಪಡೆದ ಸಂಸ್ಥೆಯಲ್ಲಿ ಉತ್ತೀರ್ಣರಾಗಿರಬೇಕು.

ಜ್ಯೂನಿಯರ್ ಕನ್ಸಲ್ಟೆಂಟ್ ಫೀಲ್ಡ್ ಆಪರೇಷನ್ ಹುದ್ದೆಗೆ ಅರ್ಜಿ ಸಲ್ಲಿಸುವವರು ಎರಡು ವರ್ಷದ ಐಟಿಐ ಪೂರ್ಣಗೊಳಿಸಿರಬೇಕು. (ಎಲೆಕ್ಟ್ರಾನಿಕ್ಸ್‌ ಮೆಷಿನ್/ಆರ್&ಟಿವಿ/ಎಲೆಕ್ಟ್ರಿಕಲ್&ಫಿಟ್ಟರ್).

ವಯೋಮಿತಿ : ಜ್ಯೂನಿಯರ್ ಟೆಕ್ನಿಕಲ್ ಆಫೀಸರ್ ಹುದ್ದೆಗೆ 30 ವರ್ಷಗಳ ವಯೋಮಿತಿ, ಜ್ಯೂನಿಯರ್ ಕನ್ಸಲ್ಟೆಂಟ್ ಫೀಲ್ಡ್ ಆಪರೇಷನ್ ಹುದ್ದೆಗೆ 28 ವರ್ಷಗಳ ವಯೋಮಿತಿ ನಿಗದಿ ಮಾಡಲಾಗಿದೆ. ಸೆಪ್ಟೆಂಬರ್ 30 2018ಕ್ಕೆ ಅನ್ವಯವಾಗುವಂತೆ.

ವೇತನ ಶ್ರೇಣಿ: ಜ್ಯೂನಿಯರ್ ಟೆಕ್ನಿಕಲ್ ಆಫೀಸರ್ ಹುದ್ದೆಗೆ 19,188 ರು. ತಿಂಗಳಿಗೆ. ಇನ್ನು ಜ್ಯೂನಿಯರ್ ಕನ್ಸಲ್ಟೆಂಟ್ ಫೀಲ್ಡ್ ಆಪರೇಷನ್ ಹುದ್ದೆಗೆ 16,042 ರು. ತಿಂಗಳಿಗೆ.

ಅರ್ಜಿ ಶುಲ್ಕ: ಜ್ಯೂನಿಯರ್ ಟೆಕ್ನಿಕಲ್ ಆಫೀಸರ್ ಹುದ್ದೆಗೆ 19188 ರೂ. ವೇತನ, ಜ್ಯೂನಿಯರ್ ಕನ್ಸಲ್ಟೆಂಟ್ ಫೀಲ್ಡ್ ಆಪರೇಷನ್ ಹುದ್ದೆಗೆ 16042 ರೂ. ಪ್ರತಿ ತಿಂಗಳ ವೇತನ ನಿಗದಿ ಮಾಡಲಾಗಿದೆ. 
ನೇರ ಸಂದರ್ಶನದ ಮೂಲಕ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಇಲ್ಲಿ ಕ್ಲಿಕ್ ಮಾಡಿ.