ಬೆಂಗಳೂರು (ಮಾ. 05): ಸಮಜ ಸೇವೆಯಲ್ಲಿ ಸದಾ ಮುಂದಿರುವ ಡಾ. ರಾಜ್ ಕುಮಾರ್ ಕುಟುಂಬ ಶಿಕ್ಷಣ ಸೇವೆಗಾಗಿ ’ ಡಾ. ರಾಜ್ ಕುಮಾರ್ ಸಿವಿಲ್ ಸರ್ವಿಸ್ ಅಕಾಡೆಮಿ’ ಯನ್ನು ಹುಟ್ಟು ಹಾಕಿದೆ. ಐಎಎಸ್, ಕೆಎಎಸ್ ಮಾಡಬೇಕೆಂದಿರುವ ವಿದ್ಯಾರ್ಥಿಗಳ ಕನಸನ್ನು ನನಸು ಮಾಡಲು ಮುಂದಾಗಿದೆ.

ರೈಲ್ವೆ ಇಲಾಖೆಯಲ್ಲಿ ಭರ್ಜರಿ ನೇಮಕಾತಿ, 35,277 ಹುದ್ದೆಗಳಿಗೆ ಅರ್ಜಿ ಆಹ್ವಾನ

ಐಎಎಸ್, ಐಪಿಎಸ್ ಸೇರಿದಂತೆ ವಿವಿಧ ನಾಗರೀಕ ಸೇವೆಗಳನ್ನು ಮಾಡಬೇಕೆಂದವರಿಗೆ ಅಗತ್ಯ ತರಬೇತಿಗಳನ್ನು ನೀಡಲು ಕೋಚಿಂಗ್ ಸೆಂಟರ್ ಪ್ರಾರಂಭಿಸಿ ಸೇವೆ ಸಲ್ಲಿಸುತ್ತಾ ಬಂದಿದೆ. 

ಇದೀಗ ಕೆ‌ಎ‌ಎಸ್ ಹಾಗೂ ಐಎಎಸ್  ತರಬೇತಿಯ‌ ತರಗತಿಗಳಿಗೆ ಪ್ರವೇಶ ಪರೀಕ್ಷೆ ನಡೆಯಲಿದೆ.  ಆಸಕ್ತ ವಿದ್ಯಾರ್ಥಿಗಳು ನೋಂದಣಿ ಮಾಡಲು ಮಾರ್ಚ್ 31 ವರಗೆ ಅವಕಾಶವಿದೆ.  

100 ರಿಂದ 150 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲು ಡಾ. ರಾಜ್ ಅಕಾಡೆಮಿ ನಿರ್ಧರಿಸಿದೆ.  ವಿಶೇಷ ಚೇತನ ಮಕ್ಕಳಿಗೂ ವಿದ್ಯಾರ್ಥಿ ವೇತನ ನೀಡಲು ಮುಂದಾಗಿದೆ.