ಬೆಂಗಳೂರು (ಜೂ. 01): ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಜೂ.7ರಂದು ನಡೆಸಲು ನಿರ್ಧರಿಸಿದ್ದ 2019ನೇ ಸಾಲಿನ ಡಿಪ್ಲೊಮಾ ಸಿಇಟಿ ಪರೀಕ್ಷೆಯನ್ನು ಜೂ.14ಕ್ಕೆ ಮುಂದೂಡಿದೆ.

ಜೂ.7ರಂದು ವಾಸ್ತುಶಿಲ್ಪ ಕೋರ್ಸಿನ ಪ್ರವೇಶಕ್ಕಾಗಿ ಆರ್ಕಿಟೆಕ್ಚರ್‌ ಕೌನ್ಸಿಲ್‌ ವತಿಯಿಂದ ‘ನಾಟಾ’ ಪರೀಕ್ಷೆ ನಡೆಸುತ್ತಿರುವುದರಿಂದ ಡಿಸಿಇಟಿ-2019 ಪರೀಕ್ಷೆಯನ್ನು ಮುಂದೂಡಲಾಗಿದೆ.

ಜೂ.14ರಂದು ಬೆಳಗ್ಗೆ 10ರಿಂದ 1 ಗಂಟೆವರೆಗೆ ಪರೀಕ್ಷೆ ನಡೆಯಲಿದೆ. ಹೊರನಾಡು ಮತ್ತು ಗಡಿನಾಡು ಕನ್ನಡಿಗರಿಗೆ ಅಂದು ಮಧ್ಯಾಹ್ನ 3ರಿಂದ 4 ಗಂಟೆವರೆಗೆ ಪರೀಕ್ಷೆ ನಡೆಸಲಾಗುತ್ತದೆ ಎಂದು ಕೆಇಎ ತಿಳಿಸಿದೆ.