Asianet Suvarna News Asianet Suvarna News

ಡಿಗ್ರಿ + ಬಿಎಡ್‌ ಇನ್ನು ನಾಲ್ಕೇ ವರ್ಷದಲ್ಲಿ ಪೂರ್ಣ

ಕೇಂದ್ರ ಸರ್ಕಾರ ಹೊಸ ಬಿ.ಇಡಿ ಕೋರ್ಸ್‌ಗೆ ಅಧಿಸೂಚನೆ ಹೊರಡಿಸಿದೆ. ಇದರಿಂದ ಇನ್ನು ನಾಲ್ಕೇ ವರ್ಷದಲ್ಲಿ ಪದವಿ ಹಾಗೂ ಬಿಎಡ್ ಮುಗಿಸಬಹುದಾಗಿದೆ. 

Degree and BEd can be finished withing four years
Author
Bengaluru, First Published Jul 26, 2019, 11:15 AM IST
  • Facebook
  • Twitter
  • Whatsapp

ನವದೆಹಲಿ [ಜು.26] :  ಸಮರ್ಥ ಶಿಕ್ಷಕರನ್ನು ರೂಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಕೇಂದ್ರ ಸರ್ಕಾರ ಹೊಸ ಬಿ.ಇಡಿ ಕೋರ್ಸ್‌ಗೆ ಅಧಿಸೂಚನೆ ಹೊರಡಿಸಿದೆ. ಈ ವರ್ಷದಿಂದಲೇ ನೂತನ ಕೋರ್ಸ್‌ ಆರಂಭವಾಗಲಿದೆ.

ಸದ್ಯ ವಿದ್ಯಾರ್ಥಿಗಳು ಮೂರು ವರ್ಷದ ಪದವಿ ಪೂರ್ಣಗೊಳಿಸಿ, ಬಳಿಕ ಎರಡು ವರ್ಷದ ಬಿ.ಇಡಿ ಕೋರ್ಸ್‌ಗೆ ಪ್ರವೇಶ ಪಡೆಯುತ್ತಿದ್ದಾರೆ. ಆದರೆ ಹೊಸ ಕೋರ್ಸಿನಡಿ ಪಿಯುಸಿ ಅಥವಾ 12ನೇ ತರಗತಿ ಮುಗಿಸಿದ ಕೂಡಲೇ ಬಿಎ-ಬಿಇಡಿ, ಬಿಎಸ್ಸಿ- ಬಿಇಡಿ ಅಥವಾ ಬಿಕಾಂ- ಬಿಇಡಿಗೆ ಪ್ರವೇಶ ಪಡೆಯಬಹುದು. ಇದರಿಂದ 5 ವರ್ಷಗಳ ಬದಲಿಗೆ ನಾಲ್ಕೇ ವರ್ಷದಲ್ಲಿ ಪದವಿ ಮತ್ತು ಬಿಇಡಿ ಶಿಕ್ಷಣ ಎರಡೂ ಪೂರ್ಣಗೊಳ್ಳಲಿದೆ.

‘ನಾಲ್ಕು ವರ್ಷಗಳ ಏಕೀಕೃತ ಬಿ.ಇಡಿ ಕೋರ್ಸ್‌ ಅನ್ನು ರೂಪಿಸಲಾಗಿದೆ. ಈ ವರ್ಷದಿಂದಲೇ ಕೋರ್ಸ್‌ ಪ್ರಾರಂಭವಾಗಲಿದ್ದು, ಅದಕ್ಕಾಗಿ ಅಧಿಸೂಚನೆಯನ್ನೂ ಹೊರಡಿಸಲಾಗಿದೆ. ಹೊಸ ಏಕೀಕೃಕ ಕೋರ್ಸ್‌ನಿಂದಾಗಿ ವಿದ್ಯಾರ್ಥಿಗಳಿಗೆ ಒಂದು ವರ್ಷ ಉಳಿತಾಯವಾಗಲಿದೆ. ಹೊಸ ಕೋರ್ಸ್‌ಗೆ ಅಗತ್ಯವಿರುವ ಪಠ್ಯವನ್ನು ಅಂತಿಮಗೊಳಿಸಲಾಗಿದೆ. ನೂತನ ಕೋರ್ಸ್‌ ಅಳವಡಿಸಿಕೊಳ್ಳಬಯಸುವ ಶಿಕ್ಷಣ ಸಂಸ್ಥೆಗಳು ಅದನ್ನು ಮಾಡಬಹುದು’ ಎಂದು ರಾಜ್ಯಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಮಾನವ ಸಂಪನ್ಮೂಲ ಖಾತೆ ಸಚಿವ ರಮೇಶ್‌ ಪೋಖ್ರಿಯಾಲ್‌ ನಿಶಾಂಕ್‌ ಅವರು ಗುರುವಾರ ಉತ್ತರ ನೀಡಿದ್ದಾರೆ.

ಮೂರು ವಿಧದಲ್ಲಿ ಕೋರ್ಸ್‌ ಲಭ್ಯವಿರಲಿದೆ. ಬಿಎ-ಬಿಇಡಿ, ಬಿಎಸ್ಸಿ-ಬಿಇಡಿ ಅಥವಾ ಬಿಕಾಂ-ಬಿಇಡಿ ಕೋರ್ಸ್‌ಗಳನ್ನು ಆಯ್ಕೆ ಮಾಡಿಕೊಳ್ಳಬಹುದಾಗಿದೆ ಎಂದು ಅವರು ತಿಳಿಸಿದ್ದಾರೆ.

Follow Us:
Download App:
  • android
  • ios