ನವದೆಹಲಿ, (ಜುಲೈ.15): ಕೇಂದ್ರೀಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯು (ಸಿಬಿಎಸ್‍ಇ) 10ನೇ ತರಗತಿ ಫಲಿತಾಂಶವನ್ನು ಬುಧವಾರ ಪ್ರಕಟಿಸಿದೆ. 

ಈ ಬಗ್ಗೆ ಟ್ವೀಟ್ ಮಾಡಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ನಿಶಾಂಕ ಪೋಖ್ರಿಯಲ್, ಫಲಿತಾಂಶ ಪ್ರಕಟಿಸಿರುವ  ಬಗ್ಗೆ ಖಚಿತಪಡಿಸಿದ್ದಾರೆ.

ಅಂದು CBSE ಕೆಮೆಸ್ಟ್ರಿಯಲ್ಲಿ 24  ಅಂಕ, ಇಂದು ಐಎಎಸ್ ಅಧಿಕಾರಿ!

ಫೆ.15ರಿಂದ 20ರ ವರಗೆ ನಡೆದ ಪರೀಕ್ಷೆಗಳ ರಿಸಲ್ಟ್ ಇಂದು (ಬುಧವಾರ) ಅನೌನ್ಸ್ ಆಗಿದ್ದು, cbseresults.nic.in ವೆಬ್‌ಸೈಟ್‌ನಲ್ಲಿ ಫಲಿತಾಂಶ ನೋಡಬಹುದಾಗಿದೆ.
 
ಈ ಬಾರಿ 18,85,885 ವಿದ್ಯಾರ್ಥಿಗಳು ರಿಜಿಸ್ಟರ್ ಮಾಡಿದ್ದರು. ಆದ್ರೆ, 18,73,015 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು,ಈ ಪೈಕಿ 17,13,121 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಇದರಲ್ಲಿ ಬಾಲಕಿಯರು ಶೇ.93.31 ಬಾಲಕರು ಶೇ.90.14ರಷ್ಟು ಪಾಸ್ ಆಗಿದ್ದಾರೆ. ಈ ಮೂಲಕ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ.

ಒಟ್ಟಾರೆ ಶೇ.91.46ರಷ್ಟು ವಿದ್ಯಾರ್ಥಿಗಳು ಪಾಸ್ ಆಗಿದ್ದಾರೆ. ಕಳೆದ ವರ್ಷ 91.10ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು.

CBSE 10ನೇ ತರಗತಿ ಫಲಿತಾಂಶ ನೋಡುವುದೇಗೆ..?
ಹಂತ 1: ಅಧಿಕೃತ ವೆಬ್‌ಸೈಟ್ cbse.nic.in ಅಥವಾ cbseresults.nic.in ಗೆ ಹೋಗಿ.
ಹಂತ 2: ವೆಬ್‌ಸೈಟ್‌ನ ಮುಖಪುಟದಲ್ಲಿ ನೀಡಲಾದ ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: ಹೊಸ ಪುಟ ತೆರೆಯುತ್ತದೆ. ಇಲ್ಲಿ ಬರೆಯುವ ಮೂಲಕ ನಿಮ್ಮ ರಿಜಿಸ್ಟರ್ ನಂಬರ್ ಹಾಕಿ.
ಹಂತ 4: ನಿಮ್ಮ ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ.
ಹಂತ 5: ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಅದರಿಂದ ಮುದ್ರಣವನ್ನು ತೆಗೆದುಕೊಳ್ಳಿ.