ನವದೆಹಲಿ, (ಮೇ.06): ಈಶಾನ್ಯ ದೆಹಲಿಯನ್ನು ಹೊರತುಪಡಿಸಿ ದೇಶದೆಲ್ಲೆಡೆ CBSE 10ನೇ ತರಗತಿ ಬೋರ್ಡ್ ಪರೀಕ್ಷೆ ರದ್ದುಪಡಿಸಲಾಗಿದೆ.

ಸೆಂಟ್ರಲ್ ಬೋರ್ಡ್ ಆಫ್ ಸೆಕಂಡರಿ ಎಜುಕೇಷನ್ (ಸಿಬಿಎಸ್ ಇ)  ಪರೀಕ್ಷೆ ಸಂಬಂಧ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ. 

ಈಶಾನ್ಯ ದೆಹಲಿಯಲ್ಲಿ ಹೊರತುಪಡಿಸಿ ಉಳಿದ ಕಡೆ ಸಿಬಿಎಸ್‌ಇ 10ನೇ ತರಗತಿಯ ಪ್ರಮುಖ ಪತ್ರಿಕೆಗಳ ಪರೀಕ್ಷೆ ಮುಗಿದಿದ್ದು, ಒಂದೆರಡು ಪತ್ರಿಕೆಗಳ ಪರೀಕ್ಷೆ ಉಳಿದಿವೆಯಾದರೂ, ಅವುಗಳಿಗಾಗಿ ಪರೀಕ್ಷೆ ನಡೆಸುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಾಲ್ ನಿಶಾಂಕ್ ಸ್ಪಷ್ಟಪಡಿಸಿದರು.

ಜೂನ್ ತಿಂಗಳಲ್ಲಿ SSLC ಪರೀಕ್ಷೆ; ಶೀಘ್ರದಲ್ಲೇ ಟೈಂ ಟೇಬಲ್ ಅನೌನ್ಸ್ 

ವಿದೇಶದಲ್ಲಿರುವ ವಿದ್ಯಾರ್ಥಿಗಳು ಪರೀಕ್ಷೆ ತೆಗೆದುಕೊಳ್ಳಲು ನೋಂದಣಿಸಿದ್ದರು. ಈ ವಿದ್ಯಾರ್ಥಿಗಳಿಗೂ ಈ ಆದೇಶ ಅನ್ವಯವಾಗಲಿದೆ. ಕೊರೋನಾ ವೈರಸ್ ಸೋಂಕು ಹರಡದಂತೆ ಲಾಕ್‌ಡೌನ್ ಆರಂಭವಾಗುತ್ತಿದ್ದಂತೆ ಮಾರ್ಚ್ ತಿಂಗಳಿನಲ್ಲಿ ನಡೆಯಬೇಕಿದ್ದ ಎಲ್ಲಾ ಪರೀಕ್ಷೆಗಳನ್ನು ಸಿಬಿಎಸ್ಇ ಮುಂದೂಡಿತ್ತು.

ಆದ್ರೆ, ಕರ್ನಾಟಕದ ಎಸ್ಎಸ್ಎಲ್ ಸಿ ಪರೀಕ್ಷೆಗೂ ಇದಕ್ಕೂ ಸಂಬಂಧವಿಲ್ಲ, ಕರ್ನಾಟಕದ ರಾಜ್ಯ ಪಠ್ಯಕ್ರಮದಂತೆ ನಡೆಯುವ ಪರೀಕ್ಷೆ ಬಗ್ಗೆ ಜೂನ್ ತಿಂಗಳಿನಲ್ಲಿ ತಿಳಿಸಲಾಗುವುದು ಎಂದು ಕರ್ನಾಟಕದ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಸುರೇಶ್ ಕುಮಾರ್ ಹೇಳಿದ್ದಾರೆ.