ನವದೆಹಲಿ, (ಜು.13): ಸಿಬಿಎಸ್‌ಇ 12ನೇ ತರಗತಿಯ ಫಲಿತಾಂಶವನ್ನು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ಇಂದು (ಸೋಮವಾರ) ಪ್ರಕಟಿಸಿದೆ. ವಿದ್ಯಾರ್ಥಿಗಳು cbseresults.nic.in, results.nic.in ಹಾಗೂ cbse.nic.in ನಲ್ಲಿ ಫಲಿತಾಂಶ ಪರೀಕ್ಷಿಸಬಹುದು

ಸುಮಾರು 12 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಯನ್ನು ಬರೆದಿದ್ದರು.  ಈ ವರ್ಷದ ಪರೀಕ್ಷೆಯಲ್ಲಿ ಒಟ್ಟು 88.78 ಶೇ. ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷಕ್ಕಿಂತ 5.38 ಶೇ. ಉತ್ತಮ ಫಲಿತಾಂಶ ಬಂದಿದೆ. 

ದ್ವಿತೀಯ ಪಿಯುಸಿ ರಿಸಲ್ಟ್‌ಗೆ‌ ಕೌಂಟ್‌ಡೌನ್ : ನಿರ್ಧಾರವಾಗಲಿದೆ 6.75 ಲಕ್ಷ ವಿದ್ಯಾರ್ಥಿಗಳ ಭವಿಷ್ಯ

ಕಳೆದ ವರ್ಷ 83.40 ಶೇ. ಫಲಿತಾಂಶ ಬಂದಿತ್ತು.ಈ ವರ್ಷ ಹುಡುಗಿಯರೇ ಮೇಲುಗೈ ಸಾಧಿಸಿದ್ದು, ಶೇ91.15ರಷ್ಟು ಫಲಿತಾಂಶ ಪಡೆದಿದ್ದಾರೆ

ಈ ವರ್ಷದ ಸಿಬಿಎಸ್‌ಇ ಫಲಿತಾಂಶ ತಯಾರಿಸಲು ಮಂಡಳಿಯು ತನ್ನ ಪರಿಷ್ಕತ ವೌಲ್ಯ ಮಾಪನ ಯೋಜನೆಯನ್ನು ಅನುಸರಿಸಿತ್ತು. ಕೆಲವು ಪತ್ರಿಕೆಗಳ ಪರೀಕ್ಷೆಗಳು ರದ್ದಾಗಿರುವ ಕಾರಣ ಮಂಡಳಿಯು ತನ್ನ ವೌಲ್ಯ ಮಾಪನ ಯೋಜನೆಯನ್ನು ಪರಿಷ್ಕರಿಸಿತ್ತು.

ರಿಸಲ್ಟ್ ನೋಡುವುದೇಗೆ..?
* ಸಿಬಿಎಸ್‌ಇ ವೆಬ್‌ಸೈಟ್‌ನಲ್ಲಿ ಲಾಗ್‌ಇನ್ ಆಗಿ ಅದರಲ್ಲಿ cbseresults.nic.in ಕ್ಲಿಕ್ ಮಾಡಿ ಫಲಿತಾಂಶ ವೀಕ್ಷಿಸಬಹುದು.
* ರಿಸಲ್ಟ್ 2020 ಲಿಂಕ್‌ ಮೇಲೆ ಕ್ಲಿಕ್ ಮಾಡಬೇಕು
* ಲಾಗ್‌ ಇನ್ ಆಗಲು ಕೆಲವು ಮಾಹಿತಿಯನ್ನು ತುಂಬಬೇಕು
* ಸಬ್ ಮಿಟ್ ಮಾಡಬೇಕು
* ಸ್ಕ್ರೀನ್‌ನಲ್ಲಿ ರಿಸಲ್ಟ್ ಕಾಣಿಸಲಿದೆ
* ಡೌನ್‌ಲೋಡ್ ಮಾಡಿ ಪ್ರಿಂಟ್ ಔಟ್ ತೆಗೆದುಕೊಳ್ಳಬಹುದು