ಬೆಂಗಳೂರು, (ಜುಲೈ.14):  ಸದ್ಯ ಪರೀಕ್ಷೆ ರಿಸಲ್ಟ್‌ನ ಸುಗ್ಗಿ ಅಂತಾನೇ ಹೇಳಬಹುದು. ಯಾಕಂದ್ರೆ ನಿನ್ನೆ (ಸೋಮವಾರ) ಅಷ್ಟೇ ಸಿಬಿಎಸ್ಇ 12 ತರಗತಿ ಫಲಿತಾಂಶ ಪ್ರಕಟವಾಗಿತ್ತು. ಇದರ ಬೆನ್ನಲ್ಲೇ ಇದೀಗ ಇಂದು (ಮಂಗಳವಾರ) ಕರ್ನಾಟಕದ ದ್ವಿತೀಯ ಪಿಯುಸಿ ಪರೀಕ್ಷೆ ರಿಸಲ್ಟ್ ಅನೌನ್ಸ್ ಆಗಿದೆ.

ಮತ್ತೆ ನಾಳೆ ಅಂದ್ರೆ ಜುಲೈ 14ಕ್ಕೆ ಬುಧವಾರ ಕೇಂದ್ರೀಯ ಪ್ರೌಢಶಿಕ್ಷಣ ಮಂಡಳಿ (ಸಿಬಿಎಸ್ಇ)  10ನೇ ಪರೀಕ್ಷೆ ಫಲಿತಾಂಶ ಜುಲೈ 15ರಂದು ಬುಧವಾರ ಪ್ರಕಟವಾಗಲಿದೆ. 

ಸಿಬಿಎಸ್‌ಇ 12ನೇ ತರಗತಿ ಪರೀಕ್ಷೆ ಫಲಿತಾಂಶ ಪ್ರಕಟ: ರಿಸಲ್ಟ್ ಚೆಕ್ ಮಾಡುವುದೇಗೆ...?

ಹೌದು  ಈ ಕುರಿತು ಮಾಹಿತಿ ನೀಡಿರುವ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಡಾ.ರಮೇಶ್ ಪೋಕರಿಯಲ್ ನಿಶಾಂಕ್ ಟ್ವೀಟ್ ಮಾಡಿದ್ದು, ಪ್ರೀತಿಯ ಮಕ್ಕಳೇ ಹಾಗೂ ಪೋಷಕರೇ ನಾಳೆ (ಜುಲೈ 15) ಸಿಬಿಎಸ್‌ಇ 10 ನೇ ತರಗತಿ ಫಲಿತಾಂಶ ಪ್ರಕಟವಾಗಲಿದೆ ಎಂದು ಖಚಿತ ಪಡಿಸಿದ್ದಾರೆ.

ಸಿಬಿಎಸ್‌ಇ 10 ನೇ ತರಗತಿ ಫಲಿತಾಂಶ ಸಿಬಿಎಸ್‌ಇ ಅಧಿಕೃತ ವೆಬ್ ಸೈಟ್ www.cbse.nic.in ಗೆ ಭೇಟಿ ನೀಡಿ ವಿದ್ಯಾರ್ಥಿಗಳು ಫಲಿತಾಂಶವನ್ನು ನೋಡಬಹುದು.

ದಿವ್ಯಾಂಶಿ ಜೈನ್‌ಗೆ 600ಕ್ಕೆ 600 ಅಂಕ!

ನಿನ್ನೆ (ಸೋಮವಾರ) ಅಷ್ಟೇ ಸಿಬಿಎಸ್‌ಇ 12 ತರಗತಿ ರಿಸಲ್ಟ್ ಪ್ರಕಟವಾಗಿತ್ತು.  ಇಂದು (ಮಂಗಳವಾರ) ಕರ್ನಾಟಕದಲ್ಲಿ ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ, ಬಹುನಿರೀಕ್ಷಿತ ಸಿಬಿಎಸ್‌ಇ 10 ನೇ ತರಗತಿ ಫಲಿತಾಂಶ ಪ್ರಕಟಣೆಗೆ ಅಧಿಕೃತ ಘೋಷಣೆಯಾಗಿದ್ದು, ಕೌಂಟ್‌ಡೌನ್ ಶುರುವಾಗಿದೆ. ಮತ್ತೊಂದೆಡೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಸಹ ತಮ್ಮ ಫಲಿತಾಂಶಕ್ಕಾಗಿ ಎದುರು ನೋಡುತ್ತಿದ್ದಾರೆ.

CBSE 10ನೇ ತರಗತಿ ಫಲಿತಾಂಶ ನೋಡುವುದೇಗೆ..?
ಹಂತ 1: ಅಧಿಕೃತ ವೆಬ್‌ಸೈಟ್ cbse.nic.in ಅಥವಾ cbseresults.nic.in ಗೆ ಹೋಗಿ.
ಹಂತ 2: ವೆಬ್‌ಸೈಟ್‌ನ ಮುಖಪುಟದಲ್ಲಿ ನೀಡಲಾದ ಫಲಿತಾಂಶದ ಲಿಂಕ್ ಅನ್ನು ಕ್ಲಿಕ್ ಮಾಡಿ.
ಹಂತ 3: ಹೊಸ ಪುಟ ತೆರೆಯುತ್ತದೆ. ಇಲ್ಲಿ ಬರೆಯುವ ಮೂಲಕ ನಿಮ್ಮ ರಿಜಿಸ್ಟರ್ ನಂಬರ್ ಹಾಕಿ.
ಹಂತ 4: ನಿಮ್ಮ ಫಲಿತಾಂಶವು ಪರದೆಯ ಮೇಲೆ ಕಾಣಿಸುತ್ತದೆ.
ಹಂತ 5: ಫಲಿತಾಂಶವನ್ನು ಡೌನ್‌ಲೋಡ್ ಮಾಡಿ ಮತ್ತು ಅದರಿಂದ ಮುದ್ರಣವನ್ನು ತೆಗೆದುಕೊಳ್ಳಿ.