Asianet Suvarna News Asianet Suvarna News

ಮಾಸ್ ಕಮ್ಯೂನಿಕೇಷನ್ ಮುಗಿದ ನಂತ್ರ ಮುಂದೆ ಏನೆಲ್ಲ ಮಾಡಬಹುದು?

ಮಾಸ್ ಕಮ್ಯೂನಿಕೇಷನ್ ಮುಗಿದ ನಂತರ ಮುಂದೆ ಏನೇನು ಮಾಡಬಹುದು? ಯಾವೆಲ್ಲ ಉದ್ಯೋಗ ಮಾಡಬಹುದು..? ಎನ್ನುವುದಕ್ಕೆ ಮುಂದೆ ಓದಿ.. 

career guidelines after Mass Communication what next
Author
Bengaluru, First Published May 9, 2019, 10:22 PM IST

ಇಂದಿನ ವಿದ್ಯಮಾನದಲ್ಲಿ ವಿದ್ಯಾರ್ಥಿಗಳನ್ನು ಹೆಚ್ಚು ಸೆಳೆಯುವ ಮತ್ತು ಸೆಳೆದ ಕ್ಷೇತ್ರ ಎಂದರೆ ಅದು ಪತ್ರಿಕೋದ್ಯಮ. ಡಿಗ್ರಿ ನಂತರ ಹೆಚ್ಚಿನ ಜನ ಮಾಸ್ ಕಮ್ಯುನಿಕೇಶನ್ ಆಯ್ಕೆ ಮಾಡುತ್ತಾರೆ. ಈ ಕ್ಷೇತ್ರ ಆಯ್ಕೆ ಮಾಡಿದ ಮೇಲೆ ಕೇವಲ ಪತ್ರಿಕೋದ್ಯಮ ಕ್ಷೇತ್ರವನ್ನು ಮಾತ್ರ ಆಯ್ಕೆ ಮಾಡಿಕೊಳ್ಳಬಹುದು ಎಂದು ನೀವು ಅಂದುಕೊಂಡರೆ ಅದು ತಪ್ಪು. 

ಸ್ಕೈಪ್ ಇಂಟರ್‌‌ವ್ಯೂ ಇದೆಯಾ? ಹಾಗಿದ್ರೆ ಹೀಗೆ ತಯಾರಾಗಿ...

ಹೌದು ಮಾಸ್ ಕಮ್ಯೂನಿಕೇಷನ್ ಮಾಡಿದ ನಂತರ ನೀವು ಬೇರೆ ಬೇರೆ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಆ ಕ್ಷೇತ್ರಗಳು ಯಾವವು?

career guidelines after Mass Communication what nextಪತ್ರಿಕೋದ್ಯಮ:  ಮಾಸ್ ಕಮ್ಯೂನಿಕೇಷನ್  ಮಾಡಿದ ನಂತರ ಮೊದಲ ಆಯ್ಕೆ ಇರುವುದು ಪತ್ರಿಕೋದ್ಯಮ. ಹೆಚ್ಚಿನ ವಿದ್ಯಾರ್ಥಿಗಳು ಆಯ್ಕೆ ಮಾಡುವಂತಹ ಕ್ಷೇತ್ರ ಇದಾಗಿದೆ. ಯಾಕೆಂದರೆ ಈ ಕ್ಷೇತ್ರದಲ್ಲಿ ಸುಲಭವಾಗಿ ಹೆಸರು, ಜನಪ್ರಿಯತೆ ಪಡೆಯಬಹುದು ನಂಬಿಕೆ ಇರುತ್ತದೆ. ಪತ್ರಿಕೋದ್ಯಮದಲ್ಲೂ ಎಲೆಕ್ಟ್ರಾನಿಕ್ ಮೀಡಿಯಾ, ಪ್ರಿಂಟ್ ಮೀಡಿಯಾ ಮತ್ತು ಡಿಜಿಟಲ್ ಮೀಡಿಯಾಗಳಿವೆ. ಇವುಗಳಲ್ಲೂ ಕೆಲಸ ಮಾಡಬಹುದು ಅಥವಾ ಮ್ಯಾಗಝಿನ್, ಟ್ಯಾಬ್ಲಾಯ್ಡ್ ಗಳಲ್ಲೂ ಕೆಲಸ ಮಾಡಬಹುದು. 

ಕರಿಯರ್ ಆಯ್ಕೆ ಮಾಡುವಾಗ ಅಪ್ಪಿತಪ್ಪಿಯೂ ಈ 9 ತಪ್ಪುಗಳನ್ನು ಮಾಡ್ಬೇಡಿ..!

ಪಬ್ಲಿಕ್ ರಿಲೇಷನ್: ಪಬ್ಲಿಕ್ ರಿಲೇಷನ್ ಕ್ಷೇತ್ರಕ್ಕೆ ಹೆಚ್ಚಿನ ಮಹತ್ವವಿದೆ. ಅಂದರೆ ಒಂದು ಸಂಸ್ಥೆಯ ಬಗ್ಗೆ ವಿವಿಧ ಮಾರ್ಗಗಳ ಮೂಲಕ ಧನಾತ್ಮಕವಾಗಿ ಬಿಂಬಿಸುವುದು. ಅಂದರೆ ಶಾಲೆ, ಕಾಲೇಜು, ಯುನಿವರ್ಸಿಟಿ, ಆಸ್ಪತ್ರೆ, ಸರ್ಕಾರಿ ಸಂಸ್ಥೆಗಳ ಬಗ್ಗೆ ಎಲ್ಲೆಡೆ ಸಾರ್ವಜನಿಕವಾಗಿ ಮಾಹಿತಿ ನೀಡುವುದು. 

ಫೋಟೋ ಜರ್ನಲಿಸ್ಟ್ : ಪ್ರಿಂಟ್ ಮೀಡಿಯಾ ಮತ್ತು ಎಲೆಕ್ಟ್ರಾನಿಕ್ ಮೀಡಿಯಾದಲ್ಲಿ ಫೋಟೋ ಜರ್ನಲಿಸ್ಟ್‌ಗೆ ಉತ್ತಮ ಅವಕಾಶಗಳಿವೆ. ಒಂದು ಉತ್ತಮ ಫೋಟೋ ಸಾವಿರ ಪದಗಳಿಗಿಂತ ಹೆಚ್ಚು ಶಕ್ತಿಶಾಲಿಯಾಗಿರುತ್ತದೆ. ಫೋಟೋ ಜರ್ನಲಿಸ್ಟ್ ಸ್ಪೋರ್ಟ್ಸ್ ಮ್ಯಾಗಝಿನ್, ಬ್ಯೂಟಿ ಮ್ಯಾಗಝಿನ್, ಪತ್ರಿಕೆ ಅಲ್ಲದೆ ಇತರ ಪ್ರಿಂಟ್ ಮೀಡಿಯಾದಲ್ಲಿ ಕೆಲಸ ಮಾಡಬಹುದು. ಇದೆಲ್ಲದರ ಜೊತೆಗೆ ಫೋಟೋ ಜರ್ನಲಿಸ್ಟ್ ಗೆ ಉತ್ತಮ ವೇತನವೂ ಇದೆ. 

ಜಾಹಿರಾತು : ಒಂದು ವಸ್ತು, ಯೋಜನೆ, ಯೋಚನೆ, ಸೇವೆ ಮೊದಲಾದವುಗಳನ್ನು ಜನರಿಗೆ ತಲುಪುವ ರೀತಿಯಲ್ಲಿ ಆಕರ್ಷಕವಾಗಿ ತಿಳಿಸುವುದೇ ಜಾಹಿರಾತು. ಪತ್ರಿಕೆ, ಮ್ಯಾಗಝಿನ್, ಪೋಸ್ಟರ್, ಬಿಲ್ ಬೋರ್ಡ್, ರೇಡಿಯೋ, ಟಿವಿ ಮತ್ತು ಇಂಟರ್ನೆಟ್ ಎಲ್ಲಾ ಮಾಧ್ಯಮಗಳಲ್ಲೂ ಜಾಹಿರಾತು ವಿಭಾಗಗಳಿವೆ. ಜೊತೆಗೆ ಬ್ಯುಸಿನೆಸ್, ರಾಜಕೀಯ, ಸಾಮಾಜಿಕ ಸಂಸ್ಥೆಗಳೂ ಉತ್ತಮ ಜಾಹಿರಾತು ನೀಡುವವರ ಹುಡುಕಾಟದಲ್ಲಿರುತ್ತಾರೆ. ನೀವು ಕ್ರಿಯೇಟಿವ್ ವ್ಯಕ್ತಿ ಆಗಿದ್ದರೆ ಇದು ನಿಮಗೆ ಹೇಳಿ ಮಾಡಿಸಿದ ಕೆಲಸ. 

Follow Us:
Download App:
  • android
  • ios