ಬೆಂಗಳೂರು, [ಜ.10]: ಇದೇ 13ರಿಂದ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹುದ್ದೆಗೆ ಪರೀಕ್ಷೆ ನಡೆಯುವ ಹಿನ್ನೆಲೆಯಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ  ಪರೀಕ್ಷೆಗಳನ್ನು ಮುಂದೂಡಲಾಗಿದೆ.

ಸೋಮವಾರದಿಂದ ಪ್ರಾರಂಭವಾಗುವ ಎಲ್ಲಾ ಸ್ನಾತಕೋತ್ತರ ಪರೀಕ್ಷೆಗಳು ಮುಂದೂಡಿಕೆ ಮಾಡಲಾಗಿದೆ ಎಂದು ಬೆಂಗಳೂರು ವಿವಿ ಪರೀಕ್ಷಾ ಮೌಲ್ಯಮಾಪನ ಕುಲಸಚಿವ ಪ್ರೊ.ಸಿ.ಶಿವರಾಜ್ ಮಾಹಿತಿ ನೀಡಿದರು.

ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ: ನಿಯಮ ಬದಲಿಸಿದ ಸರ್ಕಾರ

ರದ್ದು ಪಡಿಸಿರುವ ಪರೀಕ್ಷೆಗಳ ವೇಳಾಪಟ್ಟಿ ಶೀಘ್ರದಲ್ಲಿಯೇ ಪ್ರಕಟಿಸಲಾಗುವುದು ಎಂದು ಸುವರ್ಣ ನ್ಯೂಸ್ ಗೆ ಕುಲಸಚಿವ ಪ್ರೊ.ಸಿ.ಶಿವರಾಜ್ ತಿಳಿಸಿದರು.

ಇನ್ನು ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯ ವೇಳೆ ನಡೆಸುತ್ತಿದ್ದ ಮೌಖಿಕ ಸಂದರ್ಶನವನ್ನು ರಾಜ್ಯ ಸರ್ಕಾರ ರದ್ದು ಮಾಡಿದ್ದು, ಈಗ ಕೇವಲ ಲಿಖಿತ್ ಪರೀಕ್ಷೆ ಮಾತ್ರ ಇರಲಿದೆ. 

10 ಅಂಕಗಳಿಗೆ ನಡೆಯುತ್ತಿದ್ದ ಮೌಖಿಕ ಪರೀಕ್ಷೆ (ಸಂದರ್ಶನ) ಇನ್ನು ಮುಂದೆ ಇರುವುದಿಲ್ಲ. ಗ್ರೂಪ್ 'ಸಿ' ನಾಗರಿಕ ಸೇವಾ ಹುದ್ದೆಗಳಿಗೆ ನೇಮಕಾತಿ ಮಾಡುವಾಗ ಮೌಖಿಕ ಪರೀಕ್ಷೆ ನಡೆಸಬಾರದು ಎಂದು ನಿಯಮವನ್ನು ತಿದ್ದುಪಡಿ ಮಾಡಲಾಗಿದೆ.  ಆದ್ದರಿದ, ಎಸ್ಐ ನೇಮಕಾತಿ ಮಾಡುವಾಗ ಇನ್ನು ಮುಂದೆ ಮೌಖಿಕ ಪರೀಕ್ಷೆ ನಡೆಸಲಾಗುವುದಿಲ್ಲ.