ರಮ್ಯಾ ಟ್ವೀಟ್‌ಗೆ ಜಮೀರ್ ಅಹಮದ್ ಖಂಡನೆ

First Published 5, Feb 2018, 11:17 AM IST
Zameer Ahmed condemns Ramya tweet on PM Modi speech
Highlights

ಪ್ರಧಾನಿ ನರೇಂದ್ ಮೋದಿ ಬೆಂಗಳೂರಿಗೆ ಬಂದು, ಪರಿವರ್ತನಾ ಯಾತ್ರೆಯ ಸಮಾರೋಪ ಭಾಷಣ ಮುಗಿಸಿ ಹೋದ ನಂತರ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಮಾಡಿದ ಟ್ವೀಟಿಗೆ ಬಂಡಾಯ ಜೆಡಿಎಸ್ ನಾಯಕ ಜಮೀರ್ ಅಹ್ಮದ್ ವಿರೋಧ ವ್ಯಕ್ತಪಡಿಸಿದ್ದಾರೆ.

ಬೆಂಗಳೂರು: ಪ್ರಧಾನಿ ನರೇಂದ್ ಮೋದಿ ಬೆಂಗಳೂರಿಗೆ ಬಂದು, ಪರಿವರ್ತನಾ ಯಾತ್ರೆಯ ಸಮಾರೋಪ ಭಾಷಣ ಮುಗಿಸಿ ಹೋದ ನಂತರ ಕಾಂಗ್ರೆಸ್ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ಮಾಡಿದ ಟ್ವೀಟಿಗೆ ಬಂಡಾಯ ಜೆಡಿಎಸ್ ನಾಯಕ ಜಮೀರ್ ಅಹ್ಮದ್ ವಿರೋಧ ವ್ಯಕ್ತಪಡಿಸಿದ್ದಾರೆ.

 

 

 

'ನಶೆಯಲ್ಲಿದ್ದರೆ ಹೀಗೇ ಆಗೋದು,' ಎಂದು ಮೋದಿ ಭಾಷಣವನ್ನು ಟೀಕಿಸಿ ರಮ್ಯಾ ಟ್ವೀಟ್ ಮಾಡಿದ್ದರು. ಇದಕ್ಕೆ ಎಲ್ಲೆಡೆಯಿಂದ ವಿರೋಧ ವ್ಯಕ್ತವಾಗಿದ್ದು, ನಟ ಜಗ್ಗೇಶ್ ಸಹ ವಿರೋಧ ವ್ಯಕ್ತಪಡಿಸಿದ್ದಾರೆ.

'ಪ್ರಧಾನ ಮಂತ್ರಿ ಗಳಿಗೆ ಯಾರೇ ಆದರೂ ಗೌರವ ಕೊಡಬೇಕು,' ಎಂದು ಜಮೀರ್ ಆಹ್ಮದ್ ಸಹ ರಮ್ಯಾಗೆ ಕಿವಿಮಾತು ಹೇಳಿದ್ದಾರೆ.
 

loader