Asianet Suvarna News Asianet Suvarna News

ಗಂಡ ನಾಪತ್ತೆ ಯಾಗಿ 6 ತಿಂಗಳಾದರು ಚಿಂತಿಸದ ಹೆಂಡತಿ: ಗಂಡ ಬೇಡ, ಗಂಡನ ಮನೆ ಬೇಕು ಅಂತಾಳೆ ಈ ಸತಿ

ಗಂಡ ನಾಪತ್ತೆಯಾಗಿದ್ದರೂ, ಗಂಡನ ಚಿಂತೆ ಬಿಟ್ಟ ಹೆಂಡತಿ ಆಸ್ತಿಗೆ ದಂಬಾಲು ಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ ಗ್ರಾಮದ ಗಾರೆ ಕೆಲಸದ ಮಂಜುನಾಥ ನಿಗೂಢವಾಗಿ ನಾಪತ್ತೆಯಾಗಿ 6 ತಿಂಗಳು ಕಳೆದಿವೆ. ಆದ್ರೆ ಅವನ ಹೆಂಡತಿ ಮಾತ್ರ ಗಂಡನ ಚಿಂತೆ ಬಿಟ್ಟು, ಅವನ ಮನೆ ಚಿಂತೆ ಮಾಡುತ್ತಿದ್ದಾಳೆ. ಗಂಡನ ಆಸ್ತಿ ನೀಡಿ ಎಂದು ಅತ್ತೆ ಮಾವನಿಗೆ ಬೆದರಿಕೆ ಕೂಡ ಹಾಕ್ತಿದ್ದಾಳೆ.

Wife Who Doesnt Need Husband But Need Only His Property
  • Facebook
  • Twitter
  • Whatsapp

ಶಿವಮೊಗ್ಗ(ಮೇ.11): ಗಂಡ ನಾಪತ್ತೆಯಾಗಿದ್ದರೂ, ಗಂಡನ ಚಿಂತೆ ಬಿಟ್ಟ ಹೆಂಡತಿ ಆಸ್ತಿಗೆ ದಂಬಾಲು ಬಿದ್ದಿರುವ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಹೊಸನಗರ ತಾಲ್ಲೂಕಿನ ಮಾಸ್ತಿಕಟ್ಟೆ ಗ್ರಾಮದ ಗಾರೆ ಕೆಲಸದ ಮಂಜುನಾಥ ನಿಗೂಢವಾಗಿ ನಾಪತ್ತೆಯಾಗಿ 6 ತಿಂಗಳು ಕಳೆದಿವೆ. ಆದ್ರೆ ಅವನ ಹೆಂಡತಿ ಮಾತ್ರ ಗಂಡನ ಚಿಂತೆ ಬಿಟ್ಟು, ಅವನ ಮನೆ ಚಿಂತೆ ಮಾಡುತ್ತಿದ್ದಾಳೆ. ಗಂಡನ ಆಸ್ತಿ ನೀಡಿ ಎಂದು ಅತ್ತೆ ಮಾವನಿಗೆ ಬೆದರಿಕೆ ಕೂಡ ಹಾಕ್ತಿದ್ದಾಳೆ.

ಇತ್ತ ಆಸರೆಗಿದ್ದ ಮಗನೂ ಇಲ್ಲ, ಸೇವೆ ಮಾಡಬೇಕಾದ ಸೊಸೆಯೂ ಕಿರುಕುಳ ನೀಡುತ್ತಿದ್ದಾಳೆ. ನಮ್ಮ ಮಗನನ್ನ ಹುಡುಕಿಕೊಡಿ ಅಂತಾ ಮಂಜುನಾಥನ ಪೋಷಕರು ಪೊಲೀಸರಿಗೆ ದೂರು ನೀಡಿದ್ದರು ಏನು ಪ್ರಯೋಜನವಾಗಿಲ್ಲ. ಅಷ್ಟೇ ಅಲ್ಲ ಮಂಜುನಾಥ್ ನಾಪತ್ತೆಯಾಗುವುದಕ್ಕೆ ಮೊದಲು 2016 ರ ನವೆಂಬರ್ 20ರಂದು ಡೆತ್ ನೋಟ್ ಬರೆದಿದ್ದು, ಅದರಲ್ಲಿ ತನ್ನ ಸಾವಿಗೆ ಪತ್ನಿ ಕವಿತಾ ಮತ್ತು ಮಾವ ಏಳುಮಲೈ ಕಾರಣ. ಅವಳು ನನ್ನ ಮನೆಗಾಗಿ ಹೊಂಚು ಹಾಕಿದ್ದು, ಬೇರೊಂದು ಮದುವೆಗೆ ಮುಂದಾಗಿದ್ದಾಳೆ.

ದಯಮಾಡಿ ನನ್ನ ಕುಟುಂಬಕ್ಕೆ ನ್ಯಾಯ ಕೊಡಿಸಿ ಎಂದು ಪತ್ರ ಬರೆದಿಟ್ಟು ನಿಗೂಡವಾಗಿ ಕಣ್ಮರೆಯಾಗಿದ್ದಾನೆ. ಆತನ ಮೊಬೈಲ್ ಕೂಡ ಸ್ವಿಚ್ ಆಫ್ ಆಗಿದ್ದು, ಮಂಜುನಾಥನ ಸುಳಿವಿಲ್ಲದೇ ಪೋಷಕರು ಕಂಗಾಲಾಗಿದ್ದಾರೆ. 

ತಮ್ಮ ಮಗನ ನಾಪತ್ತೆಗೆ ಸೊಸೊಯೇ ಕಾರಣ, ಅವಳೇ ಅವನನ್ನು ಕೊಲೆ ಮಾಡಿರಬೇಕೆಂದು ಆರೋಪಿಸಿದ್ದಾರೆ. ಈ ನಿಗೂಡ ಪ್ರಕರಣವನ್ನು ಭೇದಿಸಬೇಕಾಗಿದ್ದ ಪೋಲಿಸರು ಮಾತ್ರ ಗೊತ್ತಿದ್ದು, ಗೊತ್ತಿಲ್ಲದಂತಿದ್ದಾರೆ.

Follow Us:
Download App:
  • android
  • ios