ರೇವಣ್ಣ ವಿರುದ್ಧ ಸ್ಪರ್ಧೆಗೆ ಮಂಜೇಗೌಡಗೆ ಸಿಎಂ ಸೂಚನೆ?

First Published 20, Mar 2018, 8:07 AM IST
Who Is The Opposite Candidate Of HD Revanna
Highlights

ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನಿಗದಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಮೋಟಾರು ವಾಹನ ತನಿಖಾ ಅಧಿಕಾರಿ ಬಾಗೂರು ಮಂಜೇಗೌಡ ಎಂಬುವರ ಜತೆ ನಡೆಸಿದ್ದಾರೆ ಎನ್ನಲಾದ ಫೋನ್‌ ಸಂಭಾಷಣೆ ತುಣುಕು ಜಿಲ್ಲಾದ್ಯಂತ ವೈರಲ್‌ ಆಗಿದೆ.

ಹೊಳೆನರಸೀಪುರ: ರಾಜ್ಯದ ಪ್ರತಿಷ್ಠಿತ ಕ್ಷೇತ್ರಗಳಲ್ಲಿ ಒಂದಾಗಿರುವ ಹೊಳೆನರಸೀಪುರ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ನಿಗದಿ ಕುರಿತಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿರಿಯ ಮೋಟಾರು ವಾಹನ ತನಿಖಾ ಅಧಿಕಾರಿ ಬಾಗೂರು ಮಂಜೇಗೌಡ ಎಂಬುವರ ಜತೆ ನಡೆಸಿದ್ದಾರೆ ಎನ್ನಲಾದ ಫೋನ್‌ ಸಂಭಾಷಣೆ ತುಣುಕು ಜಿಲ್ಲಾದ್ಯಂತ ವೈರಲ್‌ ಆಗಿದೆ.

ಜೆಡಿಎಸ್‌ನಿಂದ ಹಾಲಿ ಶಾಸಕ ಎಚ್‌.ಡಿ.ರೇವಣ್ಣ ಸ್ಪರ್ಧಿಸುವುದು ಈಗಾಗಲೇ ಖಚಿತವಾಗಿದ್ದು, ಕಾಂಗ್ರೆಸ್‌ನಿಂದ ಯಾರು ಸ್ಪರ್ಧಿಸುತ್ತಾರೆ ಎಂಬುದು ಭಾರೀ ಕುತೂಹಲ ಮೂಡಿಸಿದೆ. ಈ ನಡುವೆ ಮಾಜಿ ಸಂಸದ ದಿ

ಜಿ.ಪುಟ್ಟಸ್ವಾಮಿ ಗೌಡರ ಸೊಸೆ ಅನುಪಮಾ ಹಾಗೂ ಬಾಗೂರು ಮಂಜೇಗೌಡರ ಹೆಸರು ಬಲವಾಗಿ ಕೇಳಿ ಬರುತ್ತಿದೆ. ಈ ಸಂದರ್ಭದಲ್ಲಿ ಮಂಜೇಗೌಡ ಜತೆ ಸಿದ್ದರಾಮಯ್ಯ ನಡೆಸಿರುವ ಸಂಭಾಷಣೆ ಆಡಿಯೋ ಎಲ್ಲೆಡೆ ಸದ್ದು ಮಾಡುತ್ತಿದೆ. ಆದರೆ, ಇದರಲ್ಲಿರುವ ಧ್ವನಿ ಸಿದ್ದರಾಮಯ್ಯ ಅವರದ್ದೇ ಹೌದೇ ಎಂಬುದು ಇನ್ನು ಖಚಿತವಾಗಿಲ್ಲ.

ಆಡಿಯೋದಲ್ಲಿ ಏನಿದೆ?:

ಮಂಜೇಗೌಡ ಎಂಬುವರಿಗೆ ಫೋನ್‌ ಮಾಡಿರುವ ಸಿದ್ದರಾಮಯ್ಯ, ‘ಏಯ್‌ ಮಂಜೇಗೌಡ ಎಲ್ಲಿದ್ದೀಯ, ಇನ್ನು ಏಕೆ ನಿನ್ನ ಹುದ್ದೆಗೆ ರಾಜೀನಾಮೆ ನೀಡಿಲ್ಲ, ತಕ್ಷಣ ರಾಜೀನಾಮೆ ನೀಡಿ ಹೊಳೆನರಸೀಪುರಕ್ಕೆ ಹೋಗು. ಈ ಬಾರಿ ನೀನೆ ಅಭ್ಯರ್ಥಿ. ಇಷ್ಟುವರ್ಷ ದೇವೇಗೌಡರ ಮಕ್ಕಳು ಗೆದ್ದದ್ದು ಸಾಕು’ ಎಂದಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿರುವ ಮಂಜೇಗೌಡರ ಕೆಲ ಬೆಂಬಲಿಗರು, ಈ ಮೊದಲೆಲ್ಲ ನೀವೆ ಅವರ ಮಕ್ಕಳನ್ನು ಬೆಂಬಲಿಸುತ್ತಿದ್ದೀರಿ. ಇದೇಕೆ ಈ ಬಾರಿ ಉಲ್ಟಾಹೊಡೆಯುತ್ತೀರುವೀರಿ. ಅವರಿಗೆ ನೀವು ಸಹಕಾರ ನೀಡದಿದ್ದಾರೆ ಸಾಕಾಗಿತ್ತು. ನಾವೇ ಅವರನ್ನು ಸೋಲಿಸುತ್ತಿದ್ದೇವು ಎಂದಿದ್ದಾರೆ. ಇದಕ್ಕೆ ಸಿದ್ದರಾಮಯ್ಯ, ಮೊದಲು ಅವರ ಜತೆಗಿದ್ದಾಗ ಹೇಳಿದ್ದೇ. ಇವಾಗ ಎಲ್ಲಿ ಹೇಳಿದ್ದೇನೆ ಎಂದಿದ್ದಾರೆ.

loader