Asianet Suvarna News Asianet Suvarna News

ಮಂಗಳೂರಲ್ಲಿ ಕೊಲೆಯಾದ ಇಲಿಯಾಸ್ ಕಾಂಗ್ರೆಸ್ ಮುಖಂಡನೇ?

ಸಚಿವ ಖಾದರ್ ಅವರೊಂದಿಗೆ ಇಲಿಯಾಸ್ ಇದ್ದ ಫೋಟೋವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದು, ಕಾಂಗ್ರೆಸ್ ಮುಖಂಡನೆಂದೇ ಕೊಲೆಯಾದ ರೌಡಿ ಶೀಟರ್‌ನನ್ನು ಗುರುತಿಸಲಾಗುತ್ತಿದೆ.

was rowdy sheeter Iliyas a congress leader

ಧಾರವಾಡ: ಮಂಗಳೂರಲ್ಲಿ ಶನಿವಾರ ಬೆಳಗ್ಗೆಯೇ ಕೊಲೆಯಾದ ಇಲಿಯಾಸ್ ಕಾಂಗ್ರೆಸ್ ಸದಸ್ಯನಾಗಿದ್ದ. ಅಲ್ಲದೇ ಇತ್ತೀಚೆಗೆ ನಡೆದ ಎನ್‌ಎಸ್‌ಯುಐ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೂ ಸ್ಪರ್ಧಿಸಿ ಸೋತಿದ್ದ.

'ಆನ್‌ಲೈನ್‌ನಲ್ಲಿ ಇಲಿಯಾಸ್ ಕಾಂಗ್ರೆಸ್ ಸದಸ್ಯತ್ವ ಪಡೆದಿದ್ದು ಹೌದು. ಆದರೆ, ಆತನ ರೋಲ್‌ಕಾಲ್ ದಂಧೆ ಬಗ್ಗೆ ಗೊತ್ತಿತ್ತು. ಹೆದರಿಸಿ, ಬೆದರಿಸಿ ಹಣ  ವಸೂಲಿ ಮಾಡುತ್ತಿದ್ದ. ಆತನ ಹಿನ್ನಲೆ ಎಲ್ಲರಿಗೂ ಗೊತ್ತಿದ್ದು, ಈ ಬಗ್ಗೆ ಪಕ್ಷದ ಅಧ್ಯಕ್ಷರ ಗಮನಕ್ಕೂ ತಂದಿದ್ದೆ,' ಎಂದು ಆಹಾರ ಹಾಗೂ ಸಾರ್ವಜನಿಕ ವಿತರಣೆ ಸಚಿವ ಯು.ಟಿ.ಖಾದರ್ ಹೇಳಿಕೆ ನೀಡಿದ್ದಾರೆ.

ಯಾರೇ ಕೊಲೆಯಾದರೂ, ಮೃತರನ್ನು ಕಾಂಗ್ರೆಸ್‌ ಪಕ್ಷದೊಂದಿದೆ ತಳಕು ಹಾಕಲಾಗುತ್ತದೆ. ಯಾರು ಬೇಕಾದರೂ ಪಕ್ಷದ ಸದಸ್ಯತ್ವ ಪಡೆಯಬಹುದು. ಅಂಥದ್ರಲ್ಲಿ, ಎಲ್ಲರೊಂದಿಗೆ ಪಕ್ಷದೊಂದಿಗೆ ಲಿಂಕ್ ಕಲ್ಪಿಸುವ ಅಗತ್ಯವೇನು, ಎಂದು ಖಾದರ್ ಪ್ರಶ್ನಿಸಿದ್ದಾರೆ.

ಇತ್ತೀಚೆಗೆ ಮಂಗಳೂರಿನಲ್ಲಿ ನಡೆದ ದೀಪಕ್ ರಾವ್ ಹಾಗೂ ಬಶೀರ್ ಹತ್ಯೆ ವೇಳೆ, ಈ ರೌಡಿ ಶೀಟರ್ ಇಲಿಯಾಸ್‌ನೊಂದಿಗೆ ಸಚಿವ ಯು.ಟಿ.ಖಾದರ್ ಇದ್ದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. 'ರೌಡಿ ಶೀಟರ್‌'ನೊಂದಿಗೆ ರಾಜ್ಯ ಸಚಿವ ಎಂದು ಟ್ರಾಲ್ ಮಾಡಲಾಗಿತ್ತು. ಇದೀಗ ಇದೇ ಇಲಿಯಾಸ್ ವೈರಿ ಗುಂಪಿಗೆ ಕೊಲೆಯಾಗಿದ್ದಾನೆಂದು ಹೇಳಲಾಗುತ್ತಿದೆ.

ಇಲಿಯಾಸ್ ಹಿಸ್ಟರಿ ಏನು?

-18ನೇ ವಯಸ್ಸಿಗೆ ಅಪರಾಧ ಲೋಕಕ್ಕೆ ಎಂಟ್ರಿ ಕೊಟ್ಟಿದ್ದ ಉಳ್ಳಾಲದ ಇಲಿಯಾಸ್ 

- 2012ರಲ್ಲಿ ಉಳ್ಳಾಲ ನಿವಾಸಿ ಕಮಲಾಕ್ಷಗೆ ಚೂರಿ ಇರಿತ ಪ್ರಕರಣದಲ್ಲಿ ಜೈಲು ಸೇರಿದ್ದ

- 2013ರಲ್ಲಿ ತೊಕ್ಕೊಟ್ಟುವಿನಲ್ಲಿ 20 ಕಾರುಗಳನ್ನಿಟ್ಟುಕೊಂಡು ಬಾಡಿಗೆಗೆ ನೀಡುತ್ತಿದ್ದ 

- ಬಾಡಿಗೆ ನೀಡುತ್ತಿದ್ದ ವ್ಯಕ್ತಿ ಜತೆ ಸೇರಿ ಜತೆಗೆ ಸೇರಿಕೊಂಡು ಟ್ರಾವೆಲ್ಸ್ ಉದ್ಯಮ ಆರಂಭಿಸಿದ್ದ

- 2013ರಲ್ಲಿ ಉಳ್ಳಾಲದ ಮಾಸ್ತಿಕಟ್ಟೆ ಸಮೀಪ ‘ಟಾರ್ಗೆಟ್' ಹೆಸರಿನಲ್ಲಿ ಕಚೇರಿ ತೆರೆದಿದ್ದ

- ಇಲಿಯಾಸ್ ಜೊತೆಗೆ 35 ಮಂದಿ ಯುವಕರ ತಂಡವೂ ಕೆಲಸ ಮಾಡುತ್ತಿತ್ತು 

 - ಟಾರ್ಗೆಟ್ ಕಚೇರಿಯಲ್ಲೇ ಉದ್ಯಮಿ, ಬಿಲ್ಡರ್ಗಳನ್ನು ಟಾರ್ಗೆಟ್ ಮಾಡುವ ದಂಧೆ 

- ಉಳ್ಳಾಲದಲ್ಲಿ ಉದ್ಯಮಿಗಳಿಗೆ ಹನಿಟ್ರ್ಯಾಪ್ ಮೂಲಕ ವಸೂಲಿ ಮಾಡಿದ ಆರೋಪ

- ಸಲಿಂಗರತಿ ವಿಡಿಯೋ ಚಿತ್ರೀಕರಿಸಿಕೊಂಡ ತಂಡ 35 ಲಕ್ಷ ಹಣದ ಬೇಡಿಕೆ ಮುಂದಿಟ್ಟಿತ್ತು

- ಇಬ್ಬರು ಯುವತಿಯರನ್ನು ಇಟ್ಟುಕೊಂಡು ಹನಿಟ್ರ್ಯಾಪ್ ಮಾಡಿದ್ದ ಟಾರ್ಗೆಟ್ ಗ್ರೂಪ್

- ಬೇಕರಿ ಮಾಲೀಕರ ಪುತ್ರ ತಾಹೀರ್ ಎಂಬಾತನನ್ನು ಅಪಹರಿಸಿದ್ದ ಟಾರ್ಗೆಟ್ ಗ್ರೂಪ್

- ಉದ್ಯಮಿಗಳಿಂದ ಕೋಟ್ಯಂತರ ರೂಪಾಯಿ ಸಂಪಾದಿಸಿದ್ದ ಟಾರ್ಗೆಟ್ ಗ್ರೂಪ್

- ಜಾಮೀನು ಸಿಕ್ಕ ಬಳಿಕ ಬಳಿಕ ಇಲಿಯಾಸ್ ಉಳ್ಳಾಲದಲ್ಲಿ ದ್ವೇಷ ಕಟ್ಟಿಕೊಂಡಿದ್ದ

- ಹಲವು ಕೊಲೆ ಯತ್ನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ರೌಡಿ ಇಲಿಯಾಸ್

- ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಉಪಾಧ್ಯಕ್ಷನಾಗಿ ಆಯ್ಕೆ

- ರಾಜಕೀಯ ಪ್ರಭಾವದಿಂದ ವಾರೆಂಟ್ ಇದ್ದರೂ ಇಲಿಯಾಸ್ ಅರೆಸ್ಟ್ ಆಗಿರಲಿಲ್ಲ

 -ನಾಯಕರ ಪ್ರಭಾವದಿಂದ ಇಲಿಯಾಸ್ನನ್ನು ಪೊಲೀಸರು ಬಂಧಿಸಿರಲಿಲ್ಲ

- ಗಾಂಜಾ ವಿರುದ್ಧ ಹೋರಾಡಿದ ಜುಬೇರ್ ಹತ್ಯೆ ಪ್ರಕರಣದಲ್ಲಿ ಇಲಿಯಾಸ್ ಬಂಧನವಾಗಿತ್ತು

- ದೀಪಕ್ ಹತ್ಯೆ ಆರೋಪಿ ನೌಷಾದ್ ಕೂಡಾ ಟಾರ್ಗೆಟ್ ತಂಡದಲ್ಲಿ ಗುರುತಿಸಿಕೊಂಡಿದ್ದ

- ಇಲಿಯಾಸ್ ವಿರುದ್ಧ ಗೂಂಡಾಕಾಯ್ದೆ ಬಳಿಕ ಉಳ್ಳಾಲ ಬಿಟ್ಟು ಸುರತ್ಕಲ್ನಲ್ಲಿ ನೆಲೆಸಿದ್ದ

 - ಯುವ ಕಾಂಗ್ರೆಸ್ ಮುಖಂಡ ಮಿಥುನ್ ರೈ ಜತೆ ಹೆಚ್ಚಿನ ಒಡನಾಟವಿದ್ದ ಇಲಿಯಾಸ್

- ಸುರತ್ಕಲ್‌ನ ಕೃಷ್ಣಾಪುರದಲ್ಲಿ ನೆಲೆಸಿದ್ದ. ಬಳಿಕ ಜೆಪ್ಪುವಿನ ಅಪಾರ್ಟ್ಮೆಂಟ್ನಲ್ಲಿ ವಾಸವಿದ್ದ

- ರಮಾನಾಥ ರೈ, ಪ್ರಕಾಶ್ ಶೆಟ್ಟಿ ಅವರ ಜತೆಗೂ ಉತ್ತಮ ಒಡನಾಟ ಇಟ್ಟುಕೊಂಡಿದ್ದ. 

Follow Us:
Download App:
  • android
  • ios