ಹಲವ ಕನಸು, ಭರವಸೆಗಳೊಂದಿಗೆ ಕೆಪಿಜೆಪಿಗೆ ಸೇರಿ, ರಾಜಕೀಯಕ್ಕೆ ಧುಮುಕಿದ ನಟ ಉಪೇಂದ್ರ ಪಕ್ಷದಲ್ಲಿ ತರೆದೋರಿದ ಭಿನ್ನಭಿಪ್ರಾಯದಿಂದ, ಚುನಾವಣೆಗೂ ಮುನ್ನವೇ ಪಕ್ಷ ತೊರೆಯಲು ನಿರ್ಧರಿಸಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

ಬೆಂಗಳೂರು: ಹಲವು ಕನಸು, ಭರವಸೆಗಳೊಂದಿಗೆ ಕೆಪಿಜೆಪಿಗೆ ಸೇರಿ, ರಾಜಕೀಯಕ್ಕೆ ಧುಮುಕಿದ ನಟ ಉಪೇಂದ್ರ ಪಕ್ಷದಲ್ಲಿ ತರೆದೋರಿದ ಭಿನ್ನಭಿಪ್ರಾಯದಿಂದ, ಚುನಾವಣೆಗೂ ಮುನ್ನವೇ ಪಕ್ಷ ತೊರೆಯಲು ನಿರ್ಧರಿಸಿರುವುದಾಗಿ ಅಧಿಕೃತವಾಗಿ ಘೋಷಿಸಿದ್ದಾರೆ.

ಬೆಂಬಲಿಗರೊಂದಿಗೆ ಸಭೆ ನಡೆಸಿದ ನಂತರ, ಸುದ್ದಿಗೋಷ್ಠಿ ನಡೆಸಿದ ಉಪೇಂದ್ರ, ತಾವು ಹಾಗೂ ತಮ್ಮೊಡನೆ ಇನ್ನು ಐದಾರು ಮಂದಿ ಪಕ್ಷದಿಂದ ಹೊರ ಬರುತ್ತಿದ್ದು, ಪ್ರಜಾಕೀಯ ಪಕ್ಷ ಸ್ಥಾಪಿಸುವುದಾಗಿ ಹೇಳಿದರು. 

ಈ ಚುನಾವಣೆಯಲ್ಲಿಯೇ ಸ್ಪರ್ಧಿಸಲು ಸಕಲ ರೀತಿಯಲ್ಲಿಯೂ ಯತ್ನಿಸಲಾಗುವುದು. ಆಗಲಿಲ್ಲವೆಂದರೆ, ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸ್ಪರ್ಧಿಸಿ ಪಕ್ಷವನ್ನು ಕಟ್ಟುವುದಾಗಿ ಹೇಳಿದ ಉಪೇಂದ್ರ, ಬಿಜೆಪಿ ಸೇರಿ ಇತರೆ ಪಕ್ಷಗಳಿಗೆ ಸೇರುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.

ಸ್ವತಂತ್ರ ಅಭ್ಯರ್ಥಿಯಾಗಿಯೂ ಯಾವುದೇ ಕಾರಣಕ್ಕೂ ಸ್ಪರ್ಧಿಸುವುದಿಲ್ಲವೆಂಬುದನ್ನು ಉಪೇಂದ್ರ ಸ್ಪಷ್ಟಪಡಿಸಿದ್ದಾರೆ.