ಆ ಗ್ರಾಮದ  ದಲಿತರ ಮನೆಯಲ್ಲಿ ಮದುವೆ, ಸಾವು ಏನೇ ಆದರೂ ಕೂಡ ಆ ಗ್ರಾಮದ  ಹೊಟೇಲ್​, ಕ್ಷೌರದ ಅಂಗಡಿಗಳು  ಬಂದ್​ ಆಗುತ್ತವೆ. ದಲಿತರ ಮನೆಯಲ್ಲಿನ ಕಾರ್ಯಕ್ರಮಗಳಿಗೂ ಹೊಟೇಲ್​, ಕ್ಷೌರದ ಅಂಗಡಿಗಳು ಬಂದ್ ಆಗುವುದಕ್ಕೂ ಏನು ಸಂಬಂಧ ಅಂತೀರಾ ?ಹಾಗಾದ್ರೆ ಈ ಸ್ಟೋರಿ ಓದಿ.

ಕೊಪ್ಪಳ(ಮೇ.11): ಆ ಗ್ರಾಮದ ದಲಿತರ ಮನೆಯಲ್ಲಿ ಮದುವೆ, ಸಾವು ಏನೇ ಆದರೂ ಕೂಡ ಆ ಗ್ರಾಮದ ಹೊಟೇಲ್​, ಕ್ಷೌರದ ಅಂಗಡಿಗಳು ಬಂದ್​ ಆಗುತ್ತವೆ. ದಲಿತರ ಮನೆಯಲ್ಲಿನ ಕಾರ್ಯಕ್ರಮಗಳಿಗೂ ಹೊಟೇಲ್​, ಕ್ಷೌರದ ಅಂಗಡಿಗಳು ಬಂದ್ ಆಗುವುದಕ್ಕೂ ಏನು ಸಂಬಂಧ ಅಂತೀರಾ ?ಹಾಗಾದ್ರೆ ಈ ಸ್ಟೋರಿ ಓದಿ.

ಅಸ್ಪೃಶ್ಯತೆ ಜೀವಂತ!: ಕಣ್ಣಿದ್ದು ಕುರುಡರಾಗಿದ್ದಾರೆ ಜನಪ್ರತಿನಿಧಿಗಳು

ಕೊಪ್ಪಳ ತಾಲೂಕಿನ ಹಿರೇಬಗನಾಳ ಗ್ರಾಮದಲ್ಲಿ ದಲಿತರ ಮದುವೆ ಅಥವಾ ಸಾವು ಸಂಭವಿಸಿದರೆ, ಅಂದು ಗ್ರಾಮಕ್ಕೆ ಬರುವ ದಲಿತರು, ಹೋಟೆಲ್'ಗಳಿಗೆ ಬರುತ್ತಾರೆ ಹೋಟೆಲ್ ಹಾಗೂ ಕ್ಷೌರ ಅಂಗಡಿಗಳನ್ನು ಮುಚ್ಚಲಾಗುತ್ತದೆ. ನಿನ್ನೆ ದಲಿತ ಸಮುದಾಯದ ಪೂಜಾರ ಎಂಬುವವರ ಮನೆಯಲ್ಲಿ ಎರಡು ಮದುವೆಗಳು ನಡೆದಿದ್ದವು. ಹೀಗಾಗಿ ನಿನ್ನೆ ಗ್ರಾಮದ 7 ಹೊಟೇಲ್​​ ಹಾಗೂ ಕ್ಷೌರದಂಗಡಿಗಳನ್ನ ಬಂದ್ ಮಾಡಲಾಗಿತ್ತು. ಇದು ದಲಿತರ ಆಕ್ರೋಶಕ್ಕೆ ಕಾರಣವಾಗಿದೆ. 

ಇನ್ನು ಈ ಗ್ರಾಮದ ಹೋಟೇಲ್‌'ಗಳಲ್ಲಿ ದಲಿತರಿಗೆ ಪ್ರವೇಶವಿಲ್ಲ. ಹೊರಗಡೆ ಇಟ್ಟಿರುವ ಗ್ಲಾಸ್'ಗಳಲ್ಲಿ ಟೀ ಕೊಡುತ್ತಾರಂತೆ. ಪೇಪರ್'‌ನಲ್ಲಿ ತಿಂಡಿ ಕೊಡುತ್ತಾರಂತೆ. ಇದನ್ನು ಪ್ರಶ್ನಿಸಿದರೆ, ಸ್ಥಳೀಯರ ಹೊಂದಾಣಿಕೆ ಹಾಳಾಗುತ್ತದೆ ಎಂದು ಸಬೂಬು ಹೇಳುತ್ತಾರಂತೆ.

ಒಟ್ಟಿನಲ್ಲಿ ಈ ಗ್ರಾಮದಲ್ಲಿರುವ ಅಸ್ಪೃಶ್ಯತೆ ನೋಡಿದರೆ, ಇನ್ನೂ ನಾವು ಯಾವ ಶತಮಾನದಲ್ಲಿದ್ದೀವೆ ಎಂಬ ಪ್ರಶ್ನೆ ಕಾಡತೊಡಗಿದೆ. ಇಷ್ಟೆಲ್ಲಾ ಕಣ್ಣೆದುರು ನಡೆಯುತ್ತಿದ್ದರೂ ಜನಪ್ರತಿನಿಧಿಗಳು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.