ಕೆರೆಗಳ ವಿಚಾರದಲ್ಲಿ ಏನೇ ಸಮಸ್ಯೆ ಇದ್ದರೂ ಅಧಿಕಾರಿಗಳ ಗಮನಕ್ಕೆ ತನ್ನಿರಿ. ನೀವು ಯಾರಾರನ್ನು ಸಂಪರ್ಕಿಸಬಹುದು ಎಂಬ ಮಾಹಿತಿ ಕೆಳಗಿರುವ ಲಿಂಕ್'ನಲ್ಲಿದೆ. ನಗರದಲ್ಲಿ ಅಳಿದುಳಿದಿರುವ ಪ್ರತಿಯೊಂದು ಕೆರೆ ವಿಷಯದಲ್ಲೂ ಪ್ರತ್ಯೇಕವಾದ ಶಾಸಕರು, ಸಂಸದರು, ಅಧಿಕಾರಿಗಳು ಮೊದಲಾದವರ ಸಂಪರ್ಕವನ್ನು ಯುನೈಟೆಡ್ ಬೆಂಗಳೂರು ಸಂಘಟನೆಯು ಕಲೆಹಾಕಿ ನೀಡಿದೆ.
ಬೆಂಗಳೂರು(ಮೇ 18): ಒಂದು ಕಾಲದಲ್ಲಿ ಕೆರೆ ಕಟ್ಟೆ, ಹಸಿರಿನಿಂದ ಸಮೃದ್ಧವಾಗಿದ್ದ ಬೆಂಗಳೂರು ನಗರ ಈಗ ಬೆಂಗಾಡೂರು ಆಗುತ್ತಿದೆ. ದಶಕಗಳಿಂದ ನಗರದಲ್ಲಿ ವಾಸವಿರುವ ನಾಗರಿಕರು ತಮ್ಮ ಕಣ್ಮುಂದೆಯೇ ಕೆರೆಗಳು ಬತ್ತುವುದನ್ನು ಮತ್ತು ಅತಿಕ್ರಮಣಗೊಳ್ಳುವುದನ್ನು ಕಾಣುತ್ತಿದ್ದಾರೆ. ಕೆರೆಗಳಿಲ್ಲದೇ ನಗರದ ಅಂತರ್ಜಲ ಮತ್ತು ಪರಿಸರ ಸಮತೋಲನಕ್ಕೆ ಧಕ್ಕೆಯಾಗಿದೆ. ಕೆರೆಗಳನ್ನು ಸಂರಕ್ಷಿಸಬೇಕಾದ್ದು ಸರಕಾರದಷ್ಟೇ ಅಲ್ಲ ನಮ್ಮೆಲ್ಲರ ಆದ್ಯ ಕರ್ತವ್ಯ. ಈ ಹಿನ್ನೆಲೆಯಲ್ಲಿ ನಿಮ್ಮ ಪ್ರದೇಶದಲ್ಲಿ ಕೆರೆಗಳಿದ್ದು, ಅಪಾಯದ ಪರಿಸ್ಥಿತಿಯಲ್ಲಿದ್ದರೆ ದಯವಿಟ್ಟು ಜಾಗೃತಗೊಳ್ಳಿರಿ. ಕೆರೆಗಳ ವಿಚಾರದಲ್ಲಿ ಏನೇ ಸಮಸ್ಯೆ ಇದ್ದರೂ ಅಧಿಕಾರಿಗಳ ಗಮನಕ್ಕೆ ತನ್ನಿರಿ. ನೀವು ಯಾರಾರನ್ನು ಸಂಪರ್ಕಿಸಬಹುದು ಎಂಬ ಮಾಹಿತಿ ಕೆಳಗಿರುವ ಲಿಂಕ್'ನಲ್ಲಿದೆ. ನಗರದಲ್ಲಿ ಅಳಿದುಳಿದಿರುವ ಪ್ರತಿಯೊಂದು ಕೆರೆ ವಿಷಯದಲ್ಲೂ ಪ್ರತ್ಯೇಕವಾದ ಶಾಸಕರು, ಸಂಸದರು, ಅಧಿಕಾರಿಗಳು ಮೊದಲಾದವರ ಸಂಪರ್ಕವನ್ನು ಯುನೈಟೆಡ್ ಬೆಂಗಳೂರು ಸಂಘಟನೆಯು ಕಲೆಹಾಕಿ ನೀಡಿದೆ. ನಮ್ಮ ಬೆಂಗಳೂರು ಫೌಂಡೇಶನ್, ಯುನೈಟೆಡ್ ಬೆಂಗಳೂರು ಮೊದಲಾದ ಸಂಸ್ಥೆಗಳು ಬೆಂಗಳೂರಿನ ಕೆರೆಗಳ ಸಂರಕ್ಷಣೆಗೆ ಪಣತೊಟ್ಟು ಹೋರಾಟ ನಡೆಸುತ್ತಿವೆ. ಬನ್ನಿ, ನೀವೂ ಈ ಕಾರ್ಯದಲ್ಲಿ ಕೈಜೋಡಿಸಿ. ಕೆಳಗಿರುವ ಉಪಯುಕ್ತ ಮಾಹಿತಿ ಮೂಲಕ ಕೆರೆ ಹೋರಾಟದಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಿ.

