ಕಿರುತೆರೆ ನಟ ಸುನಾಮಿ ಕಿಟ್ಟಿ ಬಂಧನ

First Published 3, Mar 2018, 11:54 AM IST
Tsunami kitty arrested
Highlights

ನಗರದ ಜ್ಞಾನಭಾರತಿ ಪೊಲೀಸರು ಕಿರುತೆರೆ ನಟ, ರಿಯಾಲಿಟಿ ಶೋ ಸ್ಪರ್ಧಿ ಸುನಾಮಿ ಕಿಟ್ಟಿಯನ್ನು ಬಂಧಿಸಿದ್ದಾರೆ.

ಬೆಂಗಳೂರು: ನಗರದ ಜ್ಞಾನಭಾರತಿ ಪೊಲೀಸರು ಕಿರುತೆರೆ ನಟ, ಬಿಗಾ ಬಾಸ್ ಹಾಗೂ ಇತರೆ ರಿಯಾಲಿಟಿ ಶೋ ಸ್ಪರ್ಧಿ ಸುನಾಮಿ ಕಿಟ್ಟಿಯನ್ನು ಬಂಧಿಸಿದ್ದಾರೆ.

ಕಿಟ್ಟಿಯನ್ನು ಅಪಹರಣ, ಕೊಲೆ ಬೆದರಿಕೆ ಪ್ರಕರಣದಡಿ ಬಂಧಿಸಲಾಗಿದೆ.

ರೆಸ್ಟೋರೆಂಟ್‌ವೊಂದರಲ್ಲಿ ಸಪ್ಲೈಯರ್ ಗಿರೀಶ್ ಎಂಬುವವರಿಗೆ ಗನ್ ತೋರಿಸಿ, ಬೆದರಿಸಿರುವುದಾಗಿ ಪ್ರಕರಣವೊಂದು ದಾಖಲಾಗಿತ್ತು. ಹಲವು ದಿನಗಳ ಹಿಂದೆ ಈ ಘಟನೆ ನಡೆದಿದ್ದು, ದೂರು ದಾಖಲಾಗಿತ್ತು. ಇದೀಗ ಕಿಟ್ಟಿಯೊಂದಿಗೆ ಯೋಗೇಂದ್ರ, ಅರ್ಜುನ ಎಂಬುವವರನ್ನು ಬಂಧಿಸಲಾಗಿದೆ. 

ಜ್ಞಾನಭಾರತಿ ಪೊಲೀಸರು ತನಿಕೆ ಮುಂದುವರಿಸಿದ್ದಾರೆ.

loader