- ಪಾಳು ಬಿದ್ದ ಕೊಳವೆ ಬಾವಿಯಲ್ಲಿ ನೀರಿಗಾಗಿ ಶೋಧ ನಡೆಸುವಾಗ ಪತ್ತೆಯಾದ ಬಂಗಾರದ ಕಿರೀಟ- ಸ್ಕ್ಯಾನಿಂಗ್ ಮಾಡುವಾಗ ಕಂಡ ದೃಶ್ಯ-ಕುತೂಹಲಕ್ಕಾಗಿ ಸ್ಥಳಕ್ಕೆ ಆಗಮಿಸುತ್ತಿದ್ದಾರೆ ಜನರು.

ಕೋಲಾರ: ಹಾಳಾಗಿದ್ದ 900 ಅಡಿ ಆಳದ ಬೋರ್‌ವೆಲ್ ರಿಪೇರಿಗೆ ಜಲ ಶೋಧ ನಡೆಸುವಾಗ ದೇವರ ಕಿರೀಟ ಕಂಡು ಬಂದಿದ್ದು, ಜನರಲ್ಲಿ ಅಪಾರ ಕುತೂಹಲ ಹುಟ್ಟಿಸಿದೆ. 

ಎಷ್ಟು ಆಳದಲ್ಲಿ ನೀರಿದೆ ಎಂಬುದನ್ನು ಪತ್ತೆ ಹಚ್ಚಲು ಕೊಳವೆ ಬಾವಿಯ ಸ್ಕ್ಯಾನಿಂಗ್ ಮಾಡುವಾಗ, ಜಿಲ್ಲೆಯ ಮಾಲೂರು ತಾಲೂಕು ಟೇಕಲ್ ಹೋಬಳಿ ಹುಳದೇನಹಳ್ಳಿ ಗ್ರಾಮದ ಚಿಕ್ಕ ವೆಂಕಟರಮಣಪ್ಪ ಲೋಕೇಶ್ ಎಂಬುವವರ ತೋಟದ ಬೋರ್‌ವೆಲ್‌ನಲ್ಲಿ ಈ ಕಿರೀಟ ಕಾಣಿಸಿಕೊಂಡಿದೆ.

ನಿಧಿ ನಿಕ್ಷೇಪ ಎನ್ನಲಾಗುತ್ತಿರುವ ಈ ಘಟನೆಯನ್ನು ನೋಡಲು ಸ್ಥಳಕ್ಕೆ ಜನರು ಮುಗಿ ಬೀಳುತ್ತಿದ್ದಾರೆ. ಈ ಬಗ್ಗೆ ಭೂಗರ್ಭ ಇಲಾಖೆ ಗಮನಕ್ಕೂ ತರಲಾಗಿದೆ.