ಚಳ್ಳಕೆರೆ (ಅ.11): ಪಟ್ಟಣದ ಶಾಂತಿನಗರದ ಬಡಾವಣೆಯಲ್ಲಿ ಮಂಗಳವಾರ ಸಂಜೆ ಟ್ರಾನ್ಸ್‌ಫಾರ್ಮರ್‌ ಸಿಡಿದು ಬಡಾವಣೆಯ 60ಕ್ಕೂ ಹೆಚ್ಚು ಮನೆಗಳಲ್ಲಿ ಟಿವಿ, ಫ್ರೀಜ್‌, ಬಲ್ಪ್‌ ಹಾಗೂ ಇತರೆ ಎಲೆಕ್ಟ್ರಾನಿಕ್‌ ವಸ್ತುಗಳು ಸುಟ್ಟು ಹೋಗಿದ್ದು, ಲಕ್ಷಾಂತರ ನಷ್ಟ ಸಂಭವಿಸಿರುತ್ತದೆ.
ಚಳ್ಳಕೆರೆ (ಅ.11): ಪಟ್ಟಣದ ಶಾಂತಿನಗರದ ಬಡಾವಣೆಯಲ್ಲಿ ಮಂಗಳವಾರ ಸಂಜೆ ಟ್ರಾನ್ಸ್ಫಾರ್ಮರ್ ಸಿಡಿದು ಬಡಾವಣೆಯ 60ಕ್ಕೂ ಹೆಚ್ಚು ಮನೆಗಳಲ್ಲಿ ಟಿವಿ, ಫ್ರೀಜ್, ಬಲ್ಪ್ ಹಾಗೂ ಇತರೆ ಎಲೆಕ್ಟ್ರಾನಿಕ್ ವಸ್ತುಗಳು ಸುಟ್ಟು ಹೋಗಿದ್ದು, ಲಕ್ಷಾಂತರ ನಷ್ಟ ಸಂಭವಿಸಿರುತ್ತದೆ.
ಯಾವುದೇ ರೀತಿಯ ಗಾಳಿ ಮಳೆ ಇಲ್ಲದಿದ್ದರೂ ಸಹ ಶಾಂತಿ ನಗರದ ಟ್ರಾನ್ಸ್ಫಾರ್ಮರ್ನಲ್ಲಿ ಬೆಂಕಿ ಕಾಣಿಸಿಕೊಂಡು ಕೆಲವೇ ಕ್ಷಣಗಳಲ್ಲಿ ಟ್ರಾನ್ಸ್ಫಾಮ್ರ್ರ್ ಸಿಡಿದು ಹೋಗಿದೆ. ಯಾವು ದೇ ಪ್ರಾಣಾಪಾಯವಿಲ್ಲ. ಸುದ್ದಿ ತಿಳಿದ ಬೆಸ್ಕಾಂ ಇಲಾಖೆ ಅಧಿಕಾರಿ ಮತ್ತು ಸಿಬ್ಬಂದಿ ವರ್ಗ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ಚಳ್ಳಕೆರೆ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಟ್ರಾನ್ಸ್ಫಾಮ್ರ್ ಸುಟ್ಟು ಹೋಗಿ 60ಕ್ಕೂ ಹೆಚ್ಚು ಮನೆಗಳ ಎಲೆಕ್ಟ್ರಾನಿಕ್ ವಸ್ತುಗಳಿಗೆ ಹಾನಿಯಾಗಿದೆ. ಟ್ರಾನ್ಸ್ಫಾಮ್ರ್ ಹೊತ್ತಿ ಹುರಿಯಲು ಕಾರಣ ಏನು, ಇದಲ್ಲಿ ಇಲಾಖೆಯ ಬೇಜವಾಬ್ದಾರಿ ತನ ಅಡಗಿದೆಯೇ ಸಾರ್ವಜನಿಕರಿಗೆ ಹಾಗಿರುವ ಲಕ್ಷಾಂತರ ರುಪಾಯಿ ನಷ್ಟಕ್ಕೆ ಯಾರು ಹೊಣೆ ಎಂಬುದಕ್ಕೆ ಇಲಾಖೆ ಅಧಿಕಾರಿಗಳೇ ಉತ್ತರ ನೀಡಬೇಕಾಗಿದೆ.
