ಹನಿಟ್ರ್ಯಾಪ್: ಆರೋಪಿಗಳನ್ನು ಬಂಧಿಸಿದ ಸಿಸಿಬಿ ಪೊಲೀಸರು

First Published 23, Mar 2018, 3:22 PM IST
three accused of honeytrap arrested in Mangalore
Highlights

ಮಸಾಜ್ ನೆಪದಲ್ಲಿ ನಂಬಿಸಿ ಮಂಗಳೂರಿನಲ್ಲಿ ಹನಿಟ್ರ್ಯಾಪ್ ನಡೆಸಿ, 3 ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಮಂಗಳೂರು: ಮಸಾಜ್ ನೆಪದಲ್ಲಿ ನಂಬಿಸಿ ಮಂಗಳೂರಿನಲ್ಲಿ ಹನಿಟ್ರ್ಯಾಪ್ ನಡೆಸಿ, 3 ಲಕ್ಷ ರೂ. ಸುಲಿಗೆ ಮಾಡಿದ್ದ ಆರೋಪಿಗಳನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ನಿವೃತ್ತ ಸರಕಾರಿ ಉದ್ಯೋಗಿಯಿಂದ 3 ಲಕ್ಷ ರೂ. ಸುಲಿಗೆ ಮಾಡಿದ್ದರು ಈ ಆರೋಪಿಗಳು. ಈ ಪ್ರಕರಣ ಭೇದಿಸುವಲ್ಲಿ ಮಂಗಳೂರು ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದು, ಮೂವರು ಯುವತಿಯರ ಸಹಿತ ಆರು ಮಂದಿಯನ್ನು ಬಂಧಿಸಿದ್ದಾರೆ.

ಜೈಲ್ ರೋಡ್ ನಿವಾಸಿ ಪ್ರೀತೇಶ್ (36), ಕಳಸ ನಿವಾಸಿ ರವಿ(35), ಶಕ್ತಿನಗರ ನಿವಾಸಿ ರಮೇಶ್(35) ಬಂಧಿತ ಆರೋಪಿಗಳು.

ಹನಿಟ್ರ್ಯಾಪ್ ಮೂಲಕ ಬ್ಲಾಕ್ ಮೇಲ್ ಮಾಡಿ ಹಣಕ್ಕೆ ಬೇಡಿಕೆಯಿಡುತ್ತಿದ್ದ ಆರೋಪಿಗಳು . ಮಂಗಳೂರಿನ ಕಾವೂರು ಠಾಣೆಗೆ ಪ್ರಕರಣ ಹಸ್ತಾಂತರ.
 

loader