ಕನ್ನಡದ ಮೇಲಿನ ಅಭಿಮಾನ, ಪ್ರಚಾರ ಕಲೆಯಲ್ಲೇ ಜೀವನ, ಡಿಜಿಟಲ್ ಯುಗದಲ್ಲಿ ಸಾಗುತ್ತಿದೆ ಬದುಕಿನ ಬಂಡಿ..! -ಇದು ಮೈಸೂರಿನಲ್ಲಿ ‘ಮೈಕ್’ ಚಂದ್ರು ಎಂದೇ ಹೆಸರಾಗಿರುವ ಎನ್. ಚಂದ್ರಶೇಖರ್ ಅವರ ಜೀವನಗಾಥೆ. ಎನ್. ಚಂದ್ರಶೇಖರ್ ಎಂದರೇ ಯಾರಿಗೂ ಗೊತ್ತಾಗದು. ಮೈಕ್ ಚಂದ್ರು ಎಂದರೇ ಊರಿಗೆಲ್ಲಾ ಗೊತ್ತು!

ಮೈಸೂರು (ನ.01): ಕನ್ನಡದ ಮೇಲಿನ ಅಭಿಮಾನ, ಪ್ರಚಾರ ಕಲೆಯಲ್ಲೇ ಜೀವನ, ಡಿಜಿಟಲ್ ಯುಗದಲ್ಲಿ ಸಾಗುತ್ತಿದೆ ಬದುಕಿನ ಬಂಡಿ..! -ಇದು ಮೈಸೂರಿನಲ್ಲಿ ‘ಮೈಕ್’ ಚಂದ್ರು ಎಂದೇ ಹೆಸರಾಗಿರುವ ಎನ್. ಚಂದ್ರಶೇಖರ್ ಅವರ ಜೀವನಗಾಥೆ. ಎನ್. ಚಂದ್ರಶೇಖರ್ ಎಂದರೇ ಯಾರಿಗೂ ಗೊತ್ತಾಗದು. ಮೈಕ್ ಚಂದ್ರು ಎಂದರೇ ಊರಿಗೆಲ್ಲಾ ಗೊತ್ತು!

ಮೈಸೂರಿನ ಹಳೇ ಪ್ರದೇಶಗಳಲ್ಲಿ ಒಂದಾದ ಅಗ್ರಹಾರದ ಚಾವಡಿ ಬೀದಿಯ ನಿವಾಸಿಯಾಗಿದ್ದ(ಈಗ ಜೆ.ಪಿ. ನಗರ ವಾಸಿ) ಚಂದ್ರು(68) ಗಾಡಿ ಚೌಕದ ಸರ್ಕಾರಿ ಶಾಲೆಯಲ್ಲಿ ಪ್ರಾಥಮಿಕ, ಡಿ. ಬನುಮಯ್ಯ ಶಾಲೆಯಲ್ಲಿ ಪ್ರೌಢ ಮತ್ತು ಪಿಯುಸಿ ಕಲಿತವರು. ಬನುಮಯ್ಯ ಕಾಲೇಜಿನಲ್ಲಿಯೇ ಬಿಕಾಂ ಓದುತ್ತಿದ್ದರು. ಆದರೆ ಪ್ರೌಢಶಾಲಾ ಹಂತದಿಂದಲೇ ಬೆಳೆಸಿಕೊಂಡಿದ್ದ ನಾಟಕದ ಮೇಲಿನ ಗೀಳು ಹಾಗೂ ಕನ್ನಡದ ಮೇಲಿನ ಅಭಿಮಾನದಿಂದಾಗಿ ಪದವಿ ಓದನ್ನು ಅರ್ಧಕ್ಕೆ ನಿಲ್ಲಿಸಿದರು. ಆಗೆಲ್ಲಾ ಕಂಪನಿ ನಾಟಕಗಳ ಕಾಲ. ಈಗಿನಿಂದಲೇ ಮನರಂಜನೆಗೆ ಟಿವಿ ಮತ್ತೊಂದು ಇರಲಿಲ್ಲ. ಹೊಸ ಸಿನಿಮಾ, ಹೊಸ ನಾಟಕಗಳ ಬಂತು ಎಂದರೇ ಸೈಕಲ್ ಮೇಲೆ ಸಾಗುತ್ತಾ ಪ್ರಚಾರ ಮಾಡುತ್ತಿದ್ದರು. ಆರಂಭದಲ್ಲಿ ನಾಟಕಗಳಲ್ಲಿ ಅಭಿನಯಿಸುತ್ತಿದ್ದ ಚಂದ್ರು ಪ್ರಚಾರಕರ್ತರು ಬಳಸುತ್ತಿದ್ದ ಕನ್ನಡದ ಮೇಲೆ ಆಕರ್ಷಿತರಾದರು. ನಾನು ಕೂಡ ಅದೇ ರೀತಿ ಪ್ರಚಾರ ಮಾಡಬೇಕು ಎಂದು ಕೂಡ ಭಾಷೆ ಶುದ್ಧಿ ಮಾಡಿಕೊಂಡರು. ಅಂದಿನಿಂದ ಅವರ ಬೇಡಿಕೆ ಏರತೊಡಗಿತು. ಮೈಸೂರಿಗೆ ಗುಬ್ಬಿ ನಾಟಕ ಕಂಪನಿ ಬಂತು ಎಂದರೇ ಮೈಕ್ ಚಂದ್ರುದೇ ಪ್ರಚಾರ. ನಾಟಕ ಕಂಪನಿ ಬೇರೆ ಊರಿಗೆ ಹೋಯ್ತು ಎಂದರೆ ಸಿನಿಮಾ ಪ್ರಚಾರ, ವಿವಿಧ ವಸ್ತುಗಳ ಪ್ರಚಾರ, ವಸ್ತು ಪ್ರದರ್ಶನ ಪ್ರಚಾರದಲ್ಲೂ ಚಂದ್ರು ಮಿಂಚತೊಡಗಿದರು. ನಾನು ಪ್ರಚಾರ ಕಲೆಗಿಳಿದು ಐವತ್ತು ವರ್ಷಗಳೇ ಕಳೆದು ಹೋಗಿವೆ. ಆರಂಭದಲ್ಲಿ ರಟ್ಟಿನ ಕೊಳವೆ, ಕಾಗದ ಸುರಳಿ ಸುತ್ತಿಕೊಂಡು ಪ್ರಚಾರ ಮಾಡಬೇಕಿತ್ತು. ಏಕೆಂದರೆ ಆಗಿನ್ನೂ ಧ್ವನಿವರ್ಧಕ ಯಂತ್ರಗಳು ಅಷ್ಟಾಗಿ ಬಂದಿರಲಿಲ್ಲ. ಇದ್ದರೂ ಒಂದೇ ಮೈಕ್. ನಾಟಕದ ಎಲ್ಲಾ ಕಲಾವಿದರು ಅದೊಂದೆ ಮೈಕ್ ಬಳಸಿ ಮಾತನಾಡಬೇಕಿತ್ತು. ಆರಂಭದಲ್ಲಿ ನಡೆದುಕೊಂಡು, ನಂತರ ಸೈಕಲ್‌ನಲ್ಲಿ, ಟಾಂಗಾ ಗಾಡಿಗಳಲ್ಲಿ ಪ್ರಚಾರ ಮಾಡುತ್ತಿದ್ದೆವು. ನಂತರ ಆಟೋರಿಕ್ಷಾ ಬಂದವು. ಈಗ ಪ್ರಚಾರ ಯುಗ ಎಂದು ಹೇಳುತ್ತಾರೆ. ಇಷ್ಟೆಲ್ಲಾ ಆದರೂ ಚಂದ್ರು ಬೇಡಿಕೆ ಕುಂದಿಲ್ಲ. ಈಗಲೂ ದಸರಾ ವಸ್ತು ಪ್ರದರ್ಶನ, ದೊಡ್ಡ ದೊಡ್ಡ ಸಾಂಸ್ಕೃತಿಕ ಕಾರ್ಯಕ್ರಮಗಳು, ಚುನಾವಣೆ ಪ್ರಚಾರಕ್ಕೂ ಮೈಕ್ ಚಂದ್ರು ಬೇಕೆ ಬೇಕು. ಕನ್ನಡದ ಮೇಲಿನ ಅಭಿಮಾನ ನನ್ನ ಜೀವನಕ್ಕೆ ಯಾವತ್ತೂ ಮೋಸ ಮಾಡಿಲ್ಲ. ಅನ್ನ ನೀಡಿದೆ. ಈಗಲೂ ಅನ್ನ ನೀಡುತ್ತಿದೆ. ಮೈಸೂರು ಮಾತ್ರವಲ್ಲದೇ ಬೆಂಗಳೂರು, ಶಿವಮೊಗ್ಗ, ಕಲಬುರಗಿ, ಹುಬ್ಬಳ್ಳಿ ಮೊದಲಾದ ಕಡೆ ಕಾರ್ಯಕ್ರಮಗಳಿಗೆ ಕರೆಯು ತ್ತಿರುತ್ತಾರೆ ಎನ್ನುತ್ತಾರೆ ಚಂದ್ರು. ಅವರ ಪತ್ನಿ ಸುಲೋಚನಾ ಶಿಕ್ಷಕಿಯಾಗಿ ನಿವೃತ್ತಿಯಾಗಿದ್ದಾರೆ. ಚಂದ್ರು ಅವರ ಕನ್ನಡ ಮೇಲಿನ ಅಭಿಮಾನ ಗುರುತಿಸಿ, ರಾಜೀವ್‌ಗಾಂಧಿ ಸದ್ಭಾವನಾ ಪ್ರಶಸ್ತಿ, ಹೊಯ್ಸಳ ಪ್ರಶಸ್ತಿ, ರಂಗಾಯಣದಿಂದ ಬಿ.ವಿ. ಕಾರಂತ ನಾಡಹಬ್ಬ ಪ್ರಶಸ್ತಿ ನೀಡಲಾಗಿದೆ. ಹಲವಾರು ಸಂಘ, ಸಂಸ್ಥೆಗಳು ಸನ್ಮಾನಿಸಿವೆ. ತಮ್ಮ ವೃತ್ತಿ ಜೀವನ ಐವತ್ತು ತುಂಬಿದಾಗ ವಿವಿ‘ ಕ್ಷೇತ್ರಗಳ ಸಾ‘ಡಿಡಿಕರನ್ನು ಕರೆಸಿ, ಗೌರವಿಸಿದ್ದು ಚಂದ್ರು ಅವರ ದೊಡ್ಡ ಗುಣಕ್ಕೆ ನಿದರ್ಶನ. ಮೈಕ್ ಚಂದ್ರು ಸಂಪರ್ಕ- ಮೊ. 9901241725

ವರದಿ: ಅಂಶಿ ಪ್ರಸನ್ನಕುಮಾರ್