ಕಡೂರು (ಅ.12): ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್‌ ಸರ್ಕಾರದ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ಭ್ರಷ್ಟಾಚಾರದಲ್ಲಿ ಸಿಕ್ಕಿಕೊಳ್ಳುವ ಭಯದಿಂದ ಲೋಕಾಯುಕ್ತಸಂಸ್ಥೆಯನ್ನು ನಾಶಗೊಳಿಸಿದ್ದಾರೆ ಎಂದು ಬಿಜೆಪಿ ಹಿಂದುಳಿದವ ವರ್ಗಗಳ ರಾಜ್ಯಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಆರೋಪಿಸಿದರು.
ಕಡೂರು (ಅ.12): ಭ್ರಷ್ಟಾಚಾರದಲ್ಲಿ ಮುಳುಗಿರುವ ರಾಜ್ಯ ಕಾಂಗ್ರೆಸ್ ಸರ್ಕಾರದ ಮುಖ್ಯಮಂತ್ರಿಗಳು ಮತ್ತು ಮಂತ್ರಿಗಳು ಭ್ರಷ್ಟಾಚಾರದಲ್ಲಿ ಸಿಕ್ಕಿಕೊಳ್ಳುವ ಭಯದಿಂದ ಲೋಕಾಯುಕ್ತಸಂಸ್ಥೆಯನ್ನು ನಾಶಗೊಳಿಸಿದ್ದಾರೆ ಎಂದು ಬಿಜೆಪಿ ಹಿಂದುಳಿದವ ವರ್ಗಗಳ ರಾಜ್ಯಾಧ್ಯಕ್ಷ ಬಿ.ಜೆ. ಪುಟ್ಟಸ್ವಾಮಿ ಆರೋಪಿಸಿದರು.
ಚಿಕ್ಕಮಗಳೂರಿಗೆ ತೆರಳುವಾಗ ಕಡೂರಿನಲ್ಲಿ ಮಾತನಾಡಿದ ಅವರು, ಆಡಳಿತ ನಡೆಸುತ್ತಿರುವ ರಾಜ್ಯ ಸರ್ಕಾರವು ಸಂಪೂರ್ಣವಾಗಿ ಹಿಂದುಳಿದ ವರ್ಗದ ವಿರೋಧಿ ಸರ್ಕಾರವಾಗಿದ್ದು, ಆ ವರ್ಗಗÜಳಿಗೆ ಬಜೆಟ್ನಲ್ಲಿ ಇಟ್ಟಿದ್ದ ಅನುದಾನದಲ್ಲಿ ಶೇ.30 ರಷ್ಟುಮಾತ್ರ ಖರ್ಚು ಮಾಡಿ ಉಳಿದ ಶೇ.60 ರಷ್ಟನ್ನು ಖರ್ಚು ಮಾಡಿಲ್ಲ. ಬಿ.ಎಸ್. ಯಡಿಯೂರಪ್ಪ ಅವರ ಕಾಲದಲ್ಲಿ ಆ ವರ್ಗಗಳ ಅಭಿವೃದ್ಧಿಗೆ ಜಾರಿಗೆ ತಂದಿದ್ದ ಹಲವಾರು ಯೋಜನೆಗಳನ್ನು ಸಿದ್ದರಾಮಯ್ಯನವರ ಸರ್ಕಾರವು ರದ್ದುಪಡಿಸಿದೆ ಎಂದರು.
ಈ ವರ್ಷ ಗಂಗಾ ಕಲ್ಯಾಣ, ಮೊರಾರ್ಜಿ ದೇಸಾಯಿ ವಸತಿ ಶಾಲೆ ಶಾಲೆ ಕೈ ಬಿಟ್ಟಿದ್ದು, ನರ್ಸಿಂಗ್ ವಿದ್ಯಾರ್ಥಿಗಳ ಸ್ಟೈಫಂಡ್ ನಿಲ್ಲಿಸಲಾಗಿದೆ. ವಿವಿಧ ಸಮುದಾಯಗಳಿಗೆ ನೀಡುತ್ತಿದ್ದ .100 ಕೋಟಿ ಅನುದಾನವನ್ನು .50 ಕೋಟಿಗೆ ಇಳಿಸಲಾಗಿದೆ. ಪಾರಂಪರಿಕವಾಗಿ ಉದ್ಯೋಗ ಮಾಡುತ್ತಿದ್ದ ಜನಾಂಗದ ಉದ್ಯೋಗ ಅವಕಾಶಕ್ಕಾಗಿ ಇಟ್ಟಿದ್ದ ಹಣ ತಪ್ಪಿಸಲಾಗಿದೆ ಎಂದು ಪುಟ್ಟಸ್ವಾಮಿ ಆರೋಪಿಸಿದರು.
