ನಮ್ಮ ಒತ್ತಡದಿಂದಲೇ ರಾಜ್ಯ ಸರಕಾರ ಸಾಲ ಮನ್ನಾ ಮಾಡಿದ್ದು: ಎಚ್ಡಿಕೆ

First Published 7, Feb 2018, 4:02 PM IST
State government waive off loan due the pressure of JDS says HDK
Highlights

'ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಮನಸ್ಸೇ ಇಲ್ಲ. ನಮ್ಮ ಒತ್ತಡಕ್ಕೆ ಮಣಿದು, ರಾಜ್ಯ ಸರಕಾರ ಸ್ವಲ್ಪ ಸಾಲ ಮನ್ನಾ ಮಡಿದೆ,' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ: 'ರಾಜ್ಯ ಹಾಗೂ ಕೇಂದ್ರ ಸರಕಾರಗಳಿಗೆ ರೈತರ ಸಂಕಷ್ಟಗಳಿಗೆ ಸ್ಪಂದಿಸುವ ಮನಸ್ಸೇ ಇಲ್ಲ. ನಮ್ಮ ಒತ್ತಡಕ್ಕೆ ಮಣಿದು, ರಾಜ್ಯ ಸರಕಾರ ಸ್ವಲ್ಪ ಸಾಲ ಮನ್ನಾ ಮಡಿದೆ,' ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.

ಜಿಲ್ಲೆಯ ಹಲಗೂರಿನಲ್ಲಿ ಪ್ರವಾಸ ಕೈಗೊಂಡಿರುವ ಕುಮಾರಸ್ವಾಮಿ, ಪತ್ರಕರ್ತರೊಂದಿಗೆ ಮಾತನಾಡಿ, ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

'ನನ್ನ ಆರೋಗ್ಯ ಈಗಲೂ ಸರಿ ಇಲ್ಲ . ನಾನು ಪುನರ್‌ಜನ್ಮವೆತ್ತಿ ನಿಮ್ಮ ಮುಂದೆ ಬಂದಿದ್ದೇನೆ.  ನನಗೆ ಒಂದೇ ಒಂದು ಅವಕಾಶ ನೀಡಿ, ನಿಮ್ಮ ಋಣ ತೀರಿಸುವೆ'. ಎಂದಿದ್ದಾರೆ.
 

loader