ಶ್ರೀರಂಗಪಟ್ಟಣ: ಟಿಪ್ಪು ಕಾಲದ ನಿಧಿ ಪತ್ತೆ?

First Published 3, Mar 2018, 11:36 AM IST
Srirangapattana people searching for treasury
Highlights

ಶ್ರೀರಂಗಪಟ್ಟಣ ಕೋಟೆಯ ಸುತ್ತಮುತ್ತ ನಿಧಿ ಸಿಕ್ಕಿದೆ ಎನ್ನುವ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಎಲ್ಲೆಡೆ ಜನರು ಹುಡುಕಲು ಆರಂಭಿಸಿದ್ದಾರೆ.

ಶ್ರೀರಂಗಪಟ್ಟಣ: ಇಲ್ಲಿನ ಕೋಟೆಯ ಸುತ್ತಮುತ್ತ ನಿಧಿ ಸಿಕ್ಕಿದೆ ಎನ್ನುವ ವದಂತಿ ಹಬ್ಬಿದ ಹಿನ್ನೆಲೆಯಲ್ಲಿ ಎಲ್ಲೆಡೆ ಜನರು ಹುಡುಕಲು ಆರಂಭಿಸಿದ್ದಾರೆ.

ಚಿನ್ನದ ಕುಡಿಕೆ ಸಿಕ್ಕಿರುವ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಜನರಲ್ಲಿ ಕುತೂಹಲ ಹೆಚ್ಚುತ್ತಿದೆ.  ಈ ವದಂತಿ ಹಿನ್ನಲೆಯಲ್ಲಿ ಶ್ರೀರಂಗಪಟ್ಟಣದ ಕೋಟೆ ಸುತ್ತಮುತ್ತ  ನಿಧಿ ಜಾಗವನ್ನು ಸಾರ್ವಜನಿಕರು ಹುಡುಕುತ್ತಿದ್ದಾರೆ. 

ಸಾಮಾಜಿಕ ಜಾಲತಾಣದಲ್ಲಿ ಚಿನ್ನದ ನಾಣ್ಯದ ಕುಡಿಕೆ ಸಿಕ್ಕಿರೋ ಫೋಟೋಗಳು ಹರಿದಾಡುತ್ತಿವೆ. 

ಇತ್ತೀಚೆಗಷ್ಟೆ ಪಟ್ಟಣದಲ್ಲಿ ಖಾಸಗಿ ಬಸ್ ನಿಲ್ದಾಣದ ಕೋಟೆ ಬಳಿ ಕಾಮಗಾರಿ ನಡೆಸಲಾಗ್ತಿತ್ತು. ಆಗ, ಟಿಪ್ಪು ಕಾಲದ  ಚಿನ್ನದ ನಾಣ್ಯದ ಕುಡಿಕೆ ಸಿಕ್ಕಿದೆ ಅನ್ನೋ ಮಾತು ಹರಿದಾಡುತ್ತಿದ್ದು, ಜನರು ನಿಧಿ ಹುಡುಕಾಟಕ್ಕೆ ಮುಗಿ ಬಿದ್ದಿದ್ದಾರೆ.
 

loader