- ಹೆತ್ತಮ್ಮನ ಮೇಲೆಯೇ ಅತ್ಯಾಚಾರವೆಸಗಿ, ಕೊಲೆ ಮಾಡಿದ ಕಾಮುಕ- ಮಗಳ ಮೇಲೂ ಕೊನೆ ಮಾಡಿದ್ದ ಎನ್ನುತ್ತಾರೆ ಗ್ರಾಮಸ್ಥರು- ಕುಡಿದ ಅಮಲಿನಲ್ಲಿ ಇಂಥ ದುಷ್ಕೃತ್ಯವೆಸಗಿದ ಕಾಮುಕ.
ಕೋಲಾರ: ಹೊಸ ವರ್ಷಾಚರಣೆ ವೇಳೆ ಕಂಠ ಪೂರ್ತಿ ಕುಡಿದ ಕಾಮುಕನೊಬ್ಬ ತನ್ನ ಹೆತ್ತಮ್ಮನ ಮೇಲೆಯೇ ಅತ್ಯಾಚಾರವೆಸಗಿ, ಕೊಲೆ ಮಾಡಿ ಪರಾರಿಯಾಗಿದ್ದ.
ಕೋಲಾರ ಜಿಲ್ಲೆಯ ಗಡಿ ಆಂಧ್ರದ ಚಿತ್ತೂರು ಜಿಲ್ಲೆಯ ವಿ ಕೋಟಾ ಬಳಿ ಇರುವ ಶಿವನಿ ಕುಪ್ಪಂ ಗ್ರಾಮದಲ್ಲಿ ಇಂಥದ್ದೊಂದು ಅಮಾನವೀಯ ಘಟನೆ ನಡೆದಿದೆ. ಸುಬ್ರಮಣ್ಯ (30) ಇಂಥ ಪೈಶಾಚಿಕ ಕೃತ್ಯವೆಸಗಿದ ಆರೋಪಿ. ವೆಲ್ಲಮ್ಮ (60) ಮೃತಳಾದ ದುರ್ದೈವಿ.
ಕುಡಿದ ಅಮಲಿನಲ್ಲಿ ತಾಯಯನ್ನೇ ನಗ್ನಗೊಳಿಸಿ ಆತ್ಯಾಚಾರವೆಸಗಿದ್ದ ಈ ಆರೋಪಿ, ಪರಾರಿಯಾಗಿದ್ದ. ಆದರೆ, ಗ್ರಾಮಸ್ಥರು ಈತನನ್ನು ಹಿಡಿದು, ಬೆತ್ತಲೆಯಾಗಿ ಕಂಬಕ್ಕೆ ಕಟ್ಟಿ ಥಳಿಸಿದ ಘಟನೆಯೂ ನಡೆದಿದೆ. ತಾಯಿಯಲ್ಲದೇ, ತನ್ನ 10 ವರ್ಷದ ಮಗಳ ಮೇಲೂ ಈ ಕಾಮುಕ ಅತ್ಯಾಚಾರವೆಸಗಿದ್ದನೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಘಟನೆ ಸ್ಥಳಕ್ಕೆ ವಿ.ಕೋಟಾ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
