ಧನ್ಯಶ್ರೀ ಆತ್ಮಹತ್ಯೆ : ಶೋಭಾ ಮೌನ ತಾಳಿದ್ದೇಕೆ?

First Published 10, Jan 2018, 12:23 PM IST
Shobha keeps mums on Dhanyasthri suicide
Highlights

ಎಲ್ಲಿಯೇ ಆತ್ಮಹತ್ಯೆ ಹಾಗೂ ಕೊಲೆ ಪ್ರಕರಣಗಳಾದರೂ, ಧ್ವನಿ ಎತ್ತುವ ಚಿಕ್ಕಮಗಳೂರು, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ತಮ್ಮದೇ ಕ್ಷೇತ್ರದಲ್ಲಿ ನಡೆದ ಧನ್ಯಶ್ರಿ ಆತ್ಮಹತ್ಯೆ ವಿಷಯದಲ್ಲಿ ಮಾತ್ರ ಮೌನ ವಹಿಸಿದ್ದಾರೆ. ಇದಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.

ಚಿಕ್ಕಮಗಳೂರು: ಎಲ್ಲಿಯೇ ಆತ್ಮಹತ್ಯೆ ಹಾಗೂ ಕೊಲೆ ಪ್ರಕರಣಗಳಾದರೂ, ಧ್ವನಿ ಎತ್ತುವ ಚಿಕ್ಕಮಗಳೂರು, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ತಮ್ಮದೇ ಕ್ಷೇತ್ರದಲ್ಲಿ ನಡೆದ ಧನ್ಯಶ್ರಿ ಆತ್ಮಹತ್ಯೆ ವಿಷಯದಲ್ಲಿ ಮಾತ್ರ ಮೌನ ವಹಿಸಿದ್ದಾರೆ. ಇದಕ್ಕೆ ಸಾರ್ವಜನಿಕರ ಆಕ್ರೋಶ ವ್ಯಕ್ತವಾಗಿದೆ.

ಹಿಂದೂ ಸಂಘಟನೆಗಳ ನೈತಿಕ ಪೊಲೀಸ್‌ಗಿರಿಗೆ ಬೆದರಿ, ಆತ್ಮಹತ್ಯೆ ಮಾಡಿಕೊಂಡಿರುವ ಧನ್ಯಶ್ರೀ ಸಾವಿಗೆ ಬೆದರಿಕೆ ಕರೆಗಳೇ ಕಾರಣವೆನ್ನಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಶೋಭಾ ಸೇರಿ ಹಲವು ಬಿಜೆಪಿ ಮುಖಂಡರು ಉತ್ತರಿಸಬೇಕೆಂದು ನಾಗರಿಕರು ಹಾಗೂ ಪ್ರತಿಪಕ್ಷಗಳ ಸ್ಥಳೀಯ ಮುಖಂಡರು ಆಗ್ರಹಿಸುತ್ತಿದ್ದಾರೆ. ಆದರೆ, ಶೋಭಾ ಮಾತ್ರ ಈ ಘಟನೆಗೂ, ತಮಗೂ ಯಾವುದೇ ಸಂಬಂಧವಿಲ್ಲವೆಂದು ಮೌನಕ್ಕೆ ಶರಣಾಗಿದ್ದಾರೆ.

ಈ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಈಗಾಗಲೇ ಬಿಜೆಪಿ ಕಾರ್ಯಕರ್ತ ಅನಿಲ್‌ನನ್ನು ಬಂಧಿಸಿಲಾಗಿದೆ. ಈ ನಡುವೆ ಆಕೆ ಸಾವಿಗೆ ಬಿಜೆಪಿ ಯುವಮೋರ್ಚಾ ನಗರಾಧ್ಯಕ್ಷ ಹಾಗೂ ಹಿಂದೂ ಸಂಘಟನೆಗಳ ನೈತಿಕ ಪೊಲೀಸ್ ಗಿರಿಯೇ ಕಾರಣ ಎನ್ನಲಾಗುತ್ತಿದ್ದು, ತಲೆಮರೆಯಿಸಿಕೊಂಡಿರುವ ಆರೋಪಿಗಳಿಗಾಗಿ ಶೋಧ ಕಾರ್ಯ ಮುಂದುವರಿದಿದೆ.

loader