ಪ್ರತ್ಯೇಕ ಲಿಂಗಯಾತ ಧರ್ಮ ಸಮರ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಇಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಫೈನಲ್ ರಿಸಲ್ಟ್ ಹೊರ ಬೀಳುವ ಸಾಧ್ಯತೆ ಇದೆ.
ಬೆಂಗಳೂರು : ಪ್ರತ್ಯೇಕ ಲಿಂಗಯಾತ ಧರ್ಮ ಸಮರ ಕ್ಲೈಮ್ಯಾಕ್ಸ್ ಹಂತಕ್ಕೆ ಬಂದು ನಿಂತಿದೆ. ಇಂದು ರಾಜ್ಯ ಸಚಿವ ಸಂಪುಟ ಸಭೆಯಲ್ಲಿ ಫೈನಲ್ ರಿಸಲ್ಟ್ ಹೊರ ಬೀಳುವ ಸಾಧ್ಯತೆ ಇದೆ.
Add Asianetnews Kannada as a Preferred Source

ಈ ಮಧ್ಯೆ ಇಂದು ಬಸವ ಪೀಠದ ಮಾತೆ ಮಹಾದೇವಿ , ಬೇಲಿಮಠದ ಶ್ರೀ ಸೇರಿದಂತೆ ಮಠಾಧೀಶರು ನಿನ್ನೆ ಟೌನ್ ಹಾಲ್ ಮುಂಭಾಗ ಲಿಂಗಾಯಿತ ಸ್ವತಂತ್ರಧರ್ಮಕ್ಕಾಗಿ ಪ್ರತಿಭಟನೆ ನಡೆಸಿದ್ದರು.
ಇದಾದ ಬಳಿಕ 100ಕ್ಕೂ ಹೆಚ್ಚು ಮಠಾಧೀಶರು ಗೃಹ ಕಚೇರಿ ಕೃಷ್ಣದಲ್ಲಿ ಸಿಎಂ ಭೇಟಿ ಮಾಡಿ ಇಂದು ನಡೆಯುವ ಕ್ಯಾಬಿನೆಟ್ ಮೀಟಿಂಗ್ನಲ್ಲಿ ನ್ಯಾ.ನಾಗಮೋಹನ್ ದಾಸ್ ವರದಿ ಜಾರಿ ಮಾಡಿ, ಪ್ರತ್ಯೇಕ ಧರ್ಮಕ್ಕಾಗಿ ಕೇಂದ್ರಕ್ಕೆ ಶಿಫಾರಸು ಮಾಡುವಂತೆ ಮನವಿ ಮಾಡಿದ್ದರು.
ಒಟ್ಟಾರೆ ಪ್ರತ್ಯೇಕ ಲಿಂಗಾಯತ ಪರ-ವಿರೋಧ ಮಧ್ಯೆ ಇಂದಿನ ಕ್ಯಾಬಿನೆಟ್ ಮೀಟಿಂಗ್ನಲ್ಲಿ ಏನು ನಿರ್ಧಾರ ಹೊರ ಬೀಳುತ್ತೆ ಅನ್ನೋದು ಸದ್ಯ ಕೂತೂಹಲ ಕೆರಳಿಸಿದೆ.
