ಅರಣ್ಯಕ್ಕೆ ಬೆಂಕಿ ಬಿದ್ದಿದೆ ಎಂಬ ಮಾಹಿತಿ ಮೇರೆಗೆ ಪರಿಶೀಲನೆಗೆ ತೆರಳಿದ್ದ ಅರಣ್ಯಾಧಿಕಾರಿ ಮೇಲೆ ಆನೆ ದಾಳಿ ನಡೆದು, ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಮೈಸೂರು: ಅರಣ್ಯಕ್ಕೆ ಬೆಂಕಿ ಬಿದ್ದಿದೆ ಎಂಬ ಮಾಹಿತಿ ಮೇರೆಗೆ ಪರಿಶೀಲನೆಗೆ ತೆರಳಿದ್ದ ಅರಣ್ಯಾಧಿಕಾರಿ ಮೇಲೆ ಆನೆ ದಾಳಿ ನಡೆದು, ಸ್ಥಳದಲ್ಲಿಯೇ ಕೊನೆಯುಸಿರೆಳೆದಿದ್ದಾರೆ.
ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿ
ನಾಗರಹೊಳೆ ನಿರ್ದೇಶಕ ಮಣಿಕಂಠನ್ ಆನೆ ದಾಳಿಗೆ ಬಲಿಯಾದ ಅಧಿಕಾರಿ. ಕಬಿನಿ ಮುಖ್ಯ ಅರಣ್ಯಾಧಿಕಾರಿ ಹಾಗೂ ನಾಗರಹೊಳೆ ನಿರ್ದೇಶಕರಾಗಿ ಣಿಕಂಠನ್ ಕಾರ್ಯನಿರ್ವಹಿಸುತ್ತಿದ್ದರು.
ಕಬಿನಿಯ ಬಿಡಿಕುಪ್ಪೆ ಬಳಿ ಏಕಾಏಕಿ ಕಾಡಾನೆ ದಾಳಿ ನಡೆಸಿದ್ದು, ಈ ಅವಘಡ ಸಂಭವಿಸಿದೆ. ಇವರು ಬೆಂಕಿ ಬಿದ್ದಿದೆ ಎಂಬ ಮಾಹಿತಿ ಮೇರೆಗೆ ಸ್ಥಳಕ್ಕೆ ತೆರಳಿದ್ದರು. ಜೀಪ್‌ನಿಂದ ಇಳಿದು ಹೋಗುತ್ತಿದ್ದಂತೆ ಮಣಿಕಂಠನ್ ಮೇಲೆ ಹಠಾತ್ ಆನೆ ದಾಳಿ ನಡೆಸಿದೆ.
ಕಳೆದ ವರ್ಷದ ಬಂಡೀಪುರದ ಕಾಡಿನ ಬೆಂಕಿಗೆ ಉಪವಲಯ ಅರಣ್ಯಾಧಿಕಾರಿ ಮುರಿಗೆಪ್ಪ ಬಲಿಯಾಗಿದ್ದರು. ಈ ವರ್ಷ ಬೆಂಕಿ ಬಿದ್ದಿರುವುದನ್ನು ನೋಡಲು ಹೋದ ಅಧಿಕಾರಿ ಬಲಿಯಾಗಿದ್ದಾರೆ.
