ಮೈಸೂರು (ಅ.12): ಆರ್​ಟಿಓ ಇನ್ಸ್​ಪೆಕ್ಟರ್​ ಒಬ್ಬರು ವಾಹನ ಚಾಲಕರಿಂದ ಹಣ ವಸೂಲಿ ಮಾಡುವ ವೇಳೆ ಎಸಿಬಿ ಬಲೆಗೆ ಸಿಕ್ಕಿ ಬಿದ್ದಿದ್ದಾರೆ.

ಪುಣಜನೂರು ಚೆಕ್ ಪೊಸ್ಟ್​ನಲ್ಲಿ ದಾಳಿ ನಡೆಸಿದ ಎಸಿಬಿ ಪೋಲಿಸರು ಆರ್​ಟಿಓ ಇನ್ಸ್​ಪೆಕ್ಟರ್ ಗಿರೀಶ್ ಬಾಬುರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಆರ್​ಟಿಓ ಇನ್ಸ್​ಪೆಕ್ಟರ್ ಗಿರೀಶ್ ಬಾಬು ವಾಹನ ಚಾಲಕರಿಂದ ಹಣ ವಸೂಲಿ ಮಾಡುತ್ತಿದ್ದರು ಎನ್ನಲಾಗಿದೆ. ವಾಹನ ಚಾಲಕರಿಂದ 2 ಸಾವಿರ  ವಸೂಲಿ  ಮಾಡುವ ವೇಳೆ ಎಸಿಬಿ ಡಿವೈಎಸ್ ಪಿ ಪ್ರಭಾಕರ್ ರಾವ್ ಶಿಂಧೆ, ಇನ್ಸ್​ಪೆಕ್ಟರ್ ಶ್ರೀಕಾಂತ್ ನೇತೃತ್ವದ ತಂಡ ದಾಳಿ ನಡೆಸಿದೆ.