ಕಾನೂನು ಸುವ್ಯವಸ್ಥೆಯಲ್ಲಿ ನಾವೇ ಬೆಟರ್, ತಮ್ಮ ಬೆನ್ನು ತಾವೇ ತಟ್ಟಿಕೊಂಡ ರಾಮಲಿಂಗಾರೆಡ್ಡಿ

Ramalinga Reddy says law order is fine in his government
Highlights

'ಬಿಜೆಪಿ ಆಡಳಿತದಲ್ಲಿ ಶೇ.6ರಷ್ಟು ಅಪರಾಧ ಪ್ರಕರಣ ನಡೆದಿತ್ತು. ನಮ್ಮ ಆಡಳಿತದಲ್ಲಿ ಶೇ. 5ರಷ್ಟು ಅಪರಾಧ ಪ್ರಕರಣ ನಡೆದಿವೆ,' ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಆಡಳಿತಕ್ಕೆ ತಾವೇ ಬೆನ್ನು ತಟ್ಟಿಕೊಂಡಿದ್ದಾರೆ.


ಕಲಬುರಗಿ: 'ಬಿಜೆಪಿ ಆಡಳಿತದಲ್ಲಿ ಶೇ.6ರಷ್ಟು ಅಪರಾಧ ಪ್ರಕರಣ ನಡೆದಿತ್ತು. ನಮ್ಮ ಆಡಳಿತದಲ್ಲಿ ಶೇ. 5ರಷ್ಟು ಅಪರಾಧ ಪ್ರಕರಣ ನಡೆದಿವೆ,' ಎಂದು ಗೃಹ ಸಚಿವ ರಾಮಲಿಂಗಾರೆಡ್ಡಿ ಅವರು ತಮ್ಮ ಆಡಳಿತಕ್ಕೆ ತಾವೇ ಬೆನ್ನು ತಟ್ಟಿಕೊಂಡಿದ್ದಾರೆ.

'ಅಮಿತ್ ಶಾ ಬಂದು ಹೋದ ಮೇಲೆ ಬಿಜೆಪಿಯವರು ಕಾನೂನು ಸುವ್ಯವಸ್ಥೆ ಬಗ್ಗೆ ಮಾತನಾಡುತ್ತಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿಲ್ಲ. ಹತಾಶೆಯಿಂದ ಬಿಜೆಪಿಯವರು ಈ ಆರೋಪ ಮಾಡುತ್ತಿದ್ದಾರೆ. 
ಲೋಕಾಯುಕ್ತರ ಮೇಲೆ ಹಲ್ಲೆ ಪ್ರಕರಣದ ತನಿಖೆ ಹೊಣೆ ಕ್ರೈಂ ಜಂಟಿ ಆಯುಕ್ತ ಸತೀಶ್‌ಕುಮಾರ್‌ಗೆ ವಹಿಸಲಾಗಿದೆ. ಇಂದು ಸಂಜೆಯೊಳಗೆ ವರದಿ ನೀಡಲಿದ್ದಾರೆ.  ಭದ್ರತೆ ಲೋಪಕ್ಕೆ ಸಂಬಂಧಿಸಿದಂತೆ ವರದಿ ಬಂದ ನಂತರ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ,' ಎಂದು ಭರವಸೆ ನೀಡಿದರು.

loader