ಜೀವದ ಹಂಗು ತೊರೆದು ದೇಶದ ಗಡಿ ಕಾಯುವ ಸೈನಿಕರ ನಿಧಿಗಾಗಿ ಪ್ರತಿನಿತ್ಯ ನೂರು ರು. ನಂತೆ ಉಳಿಸಿ ಸಂಗ್ರಹಿಸಿದ ರೂ.36 ಸಾವಿರದ ಐದು ನೂರುಗಳನ್ನು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಜಿ.ಎಸ್. ಶಿವಣ್ಣ ಕುರುಬರಹಳ್ಳಿ ಸೋಮವಾರ ಜಿಲ್ಲಾಧಿಕಾರಿಗೆ ಅರ್ಪಿಸಿದರು.
ಚಿತ್ರದುರ್ಗ (ನ.21): ಜೀವದ ಹಂಗು ತೊರೆದು ದೇಶದ ಗಡಿ ಕಾಯುವ ಸೈನಿಕರ ನಿಧಿಗಾಗಿ ಪ್ರತಿನಿತ್ಯ ನೂರು ರು. ನಂತೆ ಉಳಿಸಿ ಸಂಗ್ರಹಿಸಿದ ರೂ.36 ಸಾವಿರದ ಐದು ನೂರುಗಳನ್ನು ಅಖಂಡ ಕರ್ನಾಟಕ ರೈತ ಸಂಘದ ಜಿಲ್ಲಾಧ್ಯಕ್ಷ ಜಿ.ಎಸ್. ಶಿವಣ್ಣ ಕುರುಬರಹಳ್ಳಿ ಸೋಮವಾರ ಜಿಲ್ಲಾಧಿಕಾರಿಗೆ ಅರ್ಪಿಸಿದರು.
ಚಳಿ, ಮಳೆ, ಗಾಳಿ ಎನ್ನದೆ ಹಗಲುರಾತ್ರಿ ದೇಶ ಕಾಯುವ ಯೋಧರಿಗೆ ಏನಾದರೂ ಕೈಲಾದಷ್ಟು ಸಹಾಯ ಮಾಡಬೇಕೆನ್ನುವ ಚಿಂತನೆ ಹೊಳೆದಾಗ ದಿನನಿತ್ಯದ ಖರ್ಚಿನಲ್ಲಿ ಸ್ವಲ್ಪ ಭಾಗವನ್ನು ಕಡಿಮೆ ಮಾಡಿ ದಿನಕ್ಕೆ ನೂರು ರು. ನಂತೆ ಉಳಿತಾಯ ಮಾಡಿದ ರೂ. 36500 ಗಳನ್ನು ಸೈನಿಕರ ನಿಧಿಗೆ ನೀಡಿದ್ದೇನೆ. ಸಾರ್ವಜನಿಕರು ದುಂದು ವೆಚ್ಚಕ್ಕೆ ಕಡಿವಾಣ ಹಾಕಿಕೊಂಡು ಕೈಲಾದಷ್ಟು ಹಣ ಸಂಗ್ರಹಿಸಿ ಯೋಧರಿಗೆ ನೀಡುವ ಮೂಲಕ ದೇಶಭಕ್ತಿ ಮೆರೆಯುವಂತೆ ಜಿ.ಎಸ್. ಶಿವಣ್ಣ ಕುರುಬರಹಳ್ಳಿ ಈ ಸಂದರ್ಭದಲ್ಲಿ ವಿನಂತಿಸಿದರು.
ಸೈನಿಕರ ನಿಧಿಗೆ ಹಣ ನೀಡಿದ ಶಿವಣ್ಣ ಕುರುಬರಹಳ್ಳಿಗೆ ಜಿಲ್ಲಾಧಿಕಾರಿ ಅಭಿನಂದಿಸಿದರು. ಪ್ರತಿಯೊಬ್ಬರು ಈ ರೀತಿ ಸೈನಿಕರ ನೆರವಿಗೆ ಮುಂದಾಗಬೇಕು ಎಂದು ಹೇಳಿದರು.
