- ಬೇರೆಯವರು ಯಾರೂ ಕಾಂಗ್ರೆಸ್ ಅಧ್ಯಕ್ಷರಾಗಲು ಅರ್ಹರಲ್ಲವೇ?- ರಾಹುಲ್ ಮದುವೆಯಾಗೋದೂ ಡೌಟ್, ಎಂದ ಆಯನೂರು

ಕೊಪ್ಪ: 'ಸೋನಿಯಾ ಗಾಂಧಿ 19 ವರ್ಷಗಳ ಕಾಲ ಕಾಂಗ್ರೆಸ್ ಅಧ್ಯಕ್ಷರಾಗಿದ್ದರು. ಇದೀಗ ಅವರ ಮಗನಿಗೆ ಕುರ್ಚಿ ಬಿಟ್ಟುಕೊಟ್ಟಿದ್ದಾರೆ. ಇನ್ನಿಪ್ಪತ್ತು ವರ್ಷ ಅವರು ಆ ಸ್ಥಾನವನ್ನು ಯಾರಿಗೂ ಬಿಟ್ಟು ಕೊಡೋಲ್ಲ,' ಎಂದು ರಾಹುಲ್ ಗಾಂಧಿ ವಿರುದ್ಧ ಬಿಜೆಪಿ ಮುಖಂಡ ಆಯನೂರು ಮಂಜುನಾಥ್ ಲೇವಡಿ ಮಾಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

'ಐತಿಹಾಸಿಕ ಪಕ್ಷವೊಂದಕ್ಕೆ ಅದ್ಯಕ್ಷರಾಗಿ ಚುಕ್ಕಾಣಿ ಹಿಡಿಯೋರು ಯಾರೂ ಇಲ್ಲವೇ?,' ಎಂದು ಪ್ರಶ್ನಿಸಿದ್ದಾರೆ ಮಂಜುನಾಥ್.

'ಇನ್ನು ರಾಹುಲ್ ಮದುವೆಯಾಗಿ, ಮಕ್ಕಳಾಗುವವರೆಗೂ ಈ ಕುರ್ಚಿಯನ್ನು ಬಿಡೋಲ್ಲ,' ಎಂದ ಮಂಜುನಾಥ್, 'ಆದರೆ, ರಾಹುಲ್ ಮದುವೆ ಆಗ್ತಾನೆ ಅನ್ನೋದೇ ಡೌಟ್,' ಎಂದು ಕುಟುಕಿದ್ದಾರೆ.

ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆಯುತ್ತಿರುವ ಬಿಜೆಪಿ ಪರಿವರ್ತನಾ ರ‍್ಯಾಲಿ ವೇಳೆ ಮಂಜುನಾಥ್ ಈ ಹೇಳಿಕೆ ನೀಡಿದ್ದಾರೆ.