ರಾಹುಲ್ ಒಬ್ಬ ಅರೆಕಾಲಿಕ ರಾಜಕಾರಣಿ

Rahul gandhi is a part time politician says BJP MP
Highlights

'ಯಾವುದೇ ವಿಷಯದ ಬಗ್ಗೆ ಗಂಭೀರತರವಿಲ್ಲದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಒಬ್ಬ ಅರೆಕಾಲಿಕ ರಾಜಕಾರಣಿ,' ಎಂದು ಸಂಸದ ಪ್ರಹ್ಲಾದ್ ಜೋಷಿ ಲೇವಡಿ ಮಾಡಿದ್ದಾರೆ.

ಬಿಸಿ ರೋಡ್: 'ಯಾವುದೇ ವಿಷಯದ ಬಗ್ಗೆ ಗಂಭೀರತರವಿಲ್ಲದ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಒಬ್ಬ ಅರೆಕಾಲಿಕ ರಾಜಕಾರಣಿ,' ಎಂದು ಸಂಸದ ಪ್ರಹ್ಲಾದ್ ಜೋಷಿ ಲೇವಡಿ ಮಾಡಿದ್ದಾರೆ.

ಹಿಂದೂ ಕಾರ್ಯಕರ್ತರ ಹತ್ಯೆಯನ್ನು ಖಂಡಿಸಿ, ಕೊಡಗಿನ ಕುಶಾಲನಗರದಿಂದ ಆರಂಭವಾಗಿರುವ ಬಿಜೆಪಿಯ ಜನಸುರಕ್ಷಾ ಯಾತ್ರೆ ಸೋಮವಾರ ಬಂಟ್ವಾಳ ವಿಧಾನಸಭಾ ಕ್ಷೇತ್ರಕ್ಕೆ ಪ್ರವೇಶಿಸಿದ ಬಳಿಕ 
ಬಿ.ಸಿ.ರೋಡಿನ ಸ್ಪರ್ಶ ಕಲಾಮಂದಿರದಲ್ಲಿ ನಡೆದ ಕಾರ್ಯಕರ್ತರನ್ನು ಉದ್ದೇಶಿಸಿ ಅವರು ಮಾತನಾಡಿದರು.


'ರಾಹುಲ್ ಗಾಂಧಿ ಹೋದ ರಾಜ್ಯಗಳಲ್ಲಿ ಕಾಂಗ್ರೆಸ್ ನೆಲಕಚ್ಚಿದೆ. ಕರ್ನಾಟಕ ರಾಜ್ಯ ಹಾಗೂ ದ.ಕ. ಜಿಲ್ಲೆಗೂ ಅವರನ್ನು ಹೇಗಾದರೂ ಮಾಡಿ ಕರೆಸಿಕೊಳ್ಳಬೇಕು,' ಎಂದರು. 

'ಕಾಂಗ್ರೆಸ್‌ನ ತುಷ್ಟೀಕರಣ ನೀತಿಯಿಂದ ದೇಶದಲ್ಲಿ ಅಲ್ಪಸಂಖ್ಯಾತರು ಬಡವರಾಗಿಯೇ ಉಳಿಯುವಂತಾಗಿದೆ. ಕೇವಲ ಓಟ್ ಬ್ಯಾಂಕಿಗೋಸ್ಕರ ಓಲೈಕೆ ರಾಜಕಾರಣದಲ್ಲಿ ಮಾಡುವ ಮೂಲಕ ಇಸ್ಲಾಂ ಉಗ್ರಾವಾದವನ್ನು ಸೃಷ್ಠಿಸಿದ್ದು, ಇದಕ್ಕೆ ಬಾಹ್ಯ ಬೆಂಬಲಿಸುತ್ತಿದೆ,' ಎಂದು ಆರೋಪಿಸಿದರು.
 

loader