ಬೀದರ್ (ಡಿ. 27): ಕ್ಷೇತ್ರ ಶಿಕ್ಷಣಾಧಿಕಾರಿ ವಸಂತಕುಮಾರ ಸಲಿಂಗಕಾಮ ಪ್ರಕರಣಕ್ಕೆ ಸಂಬಂಧಿಸಿದಂತೆ ಜಿಲ್ಲಾ ಪಂಚಾಯತ್ ಸಿಇಒ  ಸೇಲ್ವಮಣಿ ವರದಿ ಕೇಳಿದ್ದಾರೆ.

ಈ ಸಂಬಂಧ ಬಿಇಒಗೆ ಡಿಡಿಪಿಐ ಬಸವರಾಜ ಗುನ್ನಳ್ಳಿ ನೋಟಿಸ್ ಜಾರಿ ಮಾಡಿದ್ದಾರೆ. ಖಾಸಗಿ ಶಿಕ್ಷಣ ಸಂಸ್ಥೆಯ ಶಿಕ್ಷಕನನ್ನು ಸಲಿಂಗಕಾಮಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ವಸಂತಕುಮಾರ ಆಹ್ವಾನಿಸಿದ. ಈ ಬಗ್ಗೆ ಸುವರ್ಣ

ನ್ಯೂಸ್ ವಿಸ್ತೃತ ವರದಿ ಪ್ರಸಾರ ಮಾಡಿತ್ತು. ಇನ್ನೂ ಬೀದರ ಜಿಲ್ಲೆಯ ಔರಾದ್ ಬಿ.ಇಒ ಕಚೇರಿ ಮುಂದೆ ದಲಿತಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ವು. ಇಂತಹ ಕಾಮುಕ ಅಧಿಕಾರಿಯನ್ನು ಸೇವೆಯಿಂದ

ವಜಾಗೊಳಿಸಿ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.