- 'ಜಾತ್ಯತೀತತೆ ಹಾಗೂ ಸಂವಿಧಾನದ ಹೇಳಿಕೆ ನೀಡಿದ್ದ ಕೇಂದ ಸಚಿವ- ಜಸ್ಟ್ ಆಸ್ಕಿಂಗ್ ಹ್ಯಾಷ್ ಟ್ಯಾಗ್ ಅಡಿಯಲ್ಲಿ ಅನಂತಕುಮಾರ್‌ಗೆ ತರಾಟೆ ತೆಗೆದುಕೊಂಡ ಪ್ರಕಾಶ್ ರೈ
ಬೆಂಗಳೂರು: ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರ 'ಜಾತ್ಯತೀತ ಮತ್ತು ಸಂವಿಧಾನ'ದ ಬಗೆಗಿನ ಹೇಳಿಕೆಯನ್ನು ಬಹುಭಾಷಾ ನಟ ಪ್ರಕಾಶ್ ರೈ ಖಂಡಿಸಿದ್ದಾರೆ.
ಅವರು ತಮ್ಮ ಟ್ವೀಟರ್ ಖಾತೆಯಲ್ಲಿ 'ಜಸ್ಟ್ ಆಸ್ಕಿಂಗ್' ಹ್ಯಾಷ್ಟ್ಯಾಗ್ನಡಿ ಟ್ವೀಟ್ ಮಾಡಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. 'ಜಾತ್ಯತೀತವಾದಿಗಳ ರಕ್ತ ಮತ್ತು ಹುಟ್ಟಿನ ಮೂಲದ
ಕುರಿತು ನೀವು ಕೀಳುಮಟ್ಟದ ಹೇಳಿಕೆಗಳನ್ನು ನೀಡಿದ್ದೀರಿ. ಮನುಷ್ಯನ ರಕ್ತ ಒಬ್ಬನ ಜಾತಿ ಮತ್ತು ನಂಬಿಕೆಯನ್ನು ನಿರ್ಧರಿಸುವುದಿಲ್ಲ,' ಎಂದು ಖಡಕ್ ಆಗಿ ಹೇಳಿದ್ದಾರೆ.
Scroll to load tweet…
ಅಲ್ಲದೆ, 'ಜಾತ್ಯತೀತವಾದಿ ಆಗುವುದೆಂದರೆ, ಯಾವುದೇ ಧರ್ಮ ಅಥವಾ ನಂಬಿಕೆಯೊಂದಿಗೆ ತಮ್ಮನ್ನು ತಾವು ಗುರುತಿಸಿಕೊಳ್ಳಬಾರದು ಅಂದೇನಲ್ಲ. ಜಾತ್ಯತೀತತೆ ಎಂದರೆ, ವೈವಿಧ್ಯಮಯ ಧರ್ಮಗಳನ್ನು ಗೌರವಿಸುವುದು ಮತ್ತು ಒಪ್ಪಿಕೊಳ್ಳುವುದು. ನೀವು ಈ ಕೀಳುಮಟ್ಟದ, ದ್ವೇಷಕಾರುವ ರಾಜಕೀಯದಿಂದ ಹೊರಬರುವುದು ಯಾವಾಗ?' ಎಂದು ಪ್ರಶ್ನಿಸಿದ್ದಾರೆ.
