'ಮೋದಿಯವರು ಪ್ರಧಾನಿಯಾಗುವ ಮೊದಲು ನಿರುದ್ಯೋಗ ಮತ್ತು ಕೃಷಿ ಸಮಸ್ಯೆಯನ್ನು ನಿವಾರಿಸುವ ಭರವಸೆ ನೀಡಿದ್ದರು. ಆದರೆ, ನಿರುದ್ಯೋಗಿ ಯುವಕರು ಗ್ರಾಮ ಬಿಟ್ಟು ಪಟ್ಟಣಕ್ಕೆ ಬರುತ್ತಿದ್ದಾರೆ. ದೇಶದ ಅಭಿವೃದ್ಧಿಗಾಗಿ ದುಡಿಯಲು ಯುವಕರು ಬಯಸುತ್ತಾರೆ. ಆದರೆ, ಅವಕಾಶಗಳು ಮಾತ್ರ ಸಿಕ್ತಿಲ್ಲ,' ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
ಹುಬ್ಬಳ್ಳಿ: 'ಮೋದಿಯವರು ಪ್ರಧಾನಿಯಾಗುವ ಮೊದಲು ನಿರುದ್ಯೋಗ ಮತ್ತು ಕೃಷಿ ಸಮಸ್ಯೆಯನ್ನು ನಿವಾರಿಸುವ ಭರವಸೆ ನೀಡಿದ್ದರು. ಆದರೆ, ನಿರುದ್ಯೋಗಿ ಯುವಕರು ಗ್ರಾಮ ಬಿಟ್ಟು ಪಟ್ಟಣಕ್ಕೆ ಬರುತ್ತಿದ್ದಾರೆ. ದೇಶದ ಅಭಿವೃದ್ಧಿಗಾಗಿ ದುಡಿಯಲು ಯುವಕರು ಬಯಸುತ್ತಾರೆ. ಆದರೆ, ಅವಕಾಶಗಳು ಮಾತ್ರ ಸಿಕ್ತಿಲ್ಲ,' ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಆರೋಪಿಸಿದ್ದಾರೆ.
'ರೈತರ ಬಗ್ಗೆ ಮೋದಿ ಮಾತನಾಡ್ತಾರೆ. ಆದರೆ, ಅನ್ನದಾತ ಸಾಲ ಮನ್ನಾ ಮಾಡೋ ಬದಲು, ಉದ್ಯಮಿಗಳ ಸಾಲ ಮನ್ನಾ ಮಾಡುತ್ತಾರೆ,' ಎಂದು ಆರೋಪಿಸಿದರು.
ಇಲ್ಲಿ ಜನಾಶೀರ್ವಾದ ಯಾತ್ರೆಯಲ್ಲಿ ಮಾತನಾಡಿದ ರಾಹುಲ್, 'ಜಗತ್ತಿನ ಎರಡು ಪ್ರಭಾವಶಾಲಿ ದೇಶಗಳು ಚೀನಾ ಮತ್ತು ಭಾರತ.
ಪ್ರತಿಯೊಬ್ಬರ ಟಿ ಶರ್ಟ್ ನೋಡಿದರೂ ಅದರ ಹಿಂದೆ ಮೇಡ್ ಇನ್ ಚೀನಾ ಎಂದು ಬರೆದಿರುತ್ತೆ. ಪ್ರತಿಯೊಂದು ವಸ್ತುವಿನ ಮೇಲೆ ಮೇಡ್ ಇನ್ ಇಂಡಿಯಾ, ಮೇಡ್ ಇನ್ ಕರ್ನಾಟಕ ಎಂದು ಬರೆಯಬೇಕು.
ಇಂಥ ಕೆಲಸ ಬಡಾಯಿ ಮಾತುಗಳಿಂದ ಸಾಧ್ಯವಿಲ್ಲ,' ಎಂದು ಮೋದಿಯನ್ನು ಟೀಕಿಸಿದರು.
'ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತೇವೆ ಎಂದು ಭರವಸೆ ನೀಡಿದ್ದ ಮೋದಿ, ದೇಶದ ಜನರನ್ನು ಬ್ಯಾಂಕ್ ಮುಂದೆ ಸಾಲಿನಲ್ಲಿ ನಿಲ್ಲಿಸುವ ಕೆಲಸ ಮಾಡಿದ್ರು. ಬ್ಯಾಂಕ್ ಹಿಂದೆ ದೇಶದ ಕಳ್ಳರು ಕಪ್ಪು ಹಣವನ್ನು ಬಿಳಿ ಮಾಡಿ ಕೊಂಡರು. ನೀರವ್ ಮೋದಿ, ವಿಜಯ ಮಲ್ಯ ದೇಶ ಬಿಟ್ಟು ಓಡಿ ಹೋಗಿದ್ದಾರೆ. ಅಮಿತ್ ಶಾ ಮಗ ಜಯ ಶಾ ಆಸ್ತಿ ದೊಡ್ಡ ಪ್ರಮಾಣದಲ್ಲಿ ವೃದ್ಧಿಸಿತು,' ಎಂದು ನೋಟು ನಿಷೇಧವನ್ನು ರಾಹುಲ್ ಟೀಕಿಸಿದರು.
'ಮೋದಿ ಎಲ್ಲಿ ಹೋದರೂ ದ್ವೇಷ ಹುಟ್ಟು ಹಾಕುತ್ತಾರೆ. ಗುಜರಾತ್‌ನಲ್ಲಿ ದಲಿತರ ಮೇಲೆ ಹಲ್ಲೆ ನಡೆಯುತ್ತೆ. ದೇಶವನ್ನು ವಿಭಜಿಸುವುದರಿಂದ ಗಟ್ಟಿಯಾಗುತ್ತಾ? ಜಮ್ಮು ಕಾಶ್ಮಿರದಲ್ಲಿ ಭಯೋತ್ಪಾದನೆಯನ್ನು ಮಟ್ಟ ಹಾಕಿದ್ದೆವು. ದೇಶದ ಸೈನಿಕರು ಸುರಕ್ಷಿತವಾಗಿದ್ದರು. ಬಿಜೆಪಿ ಅಧಿಕಾರಕ್ಕೆ ಬಂದ ನಂತರ ಸೈನಿಕರು ಮೃತಪಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ಎಲ್ಲ, ಸಮುದಾಯದ ಜನರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗುತ್ತೆ,' ಎಂದರು.
'ಬಸವಣ್ಣನವರು 'ನುಡಿದಂತೆ ನಡೆ ಎಂದು' ಎಂದಿದ್ದಾರೆ. ಮೋದಿಯವರು ಪ್ರತಿಯೊಬ್ಬರ ಅಕೌಂಟ್‌ಗೆ 15 ಲಕ್ಷ ರೂ. ಹಾಕುವುದಾಗಿ ಹೇಳಿದ್ರಿ. ಪ್ರತಿವರ್ಷ ಎರಡು ಕೋಟಿ ಯುವಕರಿಗೆ ಉದ್ಯೋಗ ಕೊಡುವುದಾಗಿ ಹೇಳಿದ್ದೀರಿ. ಪ್ರಧಾನಿಗಳೇ ಈಗ ನುಡಿದಂತೆ ನಡೆಯಿರಿ,' ಎಂದು ಸವಾಲು ಹಾಕಿದರು. ನರೇಂದ್ರ ಮೋದಿಯವರೆ ಭ್ರಷ್ಟಾಚಾರದ ವಿರುದ್ಧ ಹೋರಾಡುವುದಾಗಿ ಹೇಳಿದ್ರಿ. ನೀರವ್ ಮೋದಿ, ವಿಜಯ ಮಲ್ಯ ದೇಶ ಬಿಟ್ಟು ಓಡಿ ಹೋಗಿದ್ದಾರೆ.ಪ್ರಧಾನಿಗಳೇ ಈಗ ನುಡಿದಂತೆ ನಡೆಯಿರಿ.

Last Updated 11, Apr 2018, 12:40 PM IST