ಪೇಜಾವರ ಶ್ರೀಗಳು ತೆರಳುತ್ತಿದ್ದ ಕಾಪ್ಟರ್‌ನಲ್ಲಿ ದೋಷ

First Published 23, Mar 2018, 6:30 PM IST
pejawar swamiji escaped from helicopter accident
Highlights

ಇತ್ತೀಚೆಗೆ ಅಪಘಾತವೊಂದರಲ್ಲಿ ಅಪಾಯದಿಂದ ಪಾರಾಗಿದ್ದ ಪೇಜಾವರ ಶ್ರೀಗಳು ಇದೀಗ ಮತ್ತೊಂದು ಅನಾಹುತದಿಂದ ಪಾರಾಗಿದ್ದಾರೆ. ಶ್ರೀಗಳು ತೆರಳುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೈಲಟ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.

ಬಳ್ಳಾರಿ: ಇತ್ತೀಚೆಗೆ ಅಪಘಾತವೊಂದರಲ್ಲಿ ಅಪಾಯದಿಂದ ಪಾರಾಗಿದ್ದ ಪೇಜಾವರ ಶ್ರೀಗಳು ಇದೀಗ ಮತ್ತೊಂದು ಅನಾಹುತದಿಂದ ಪಾರಾಗಿದ್ದಾರೆ. ಶ್ರೀಗಳು ತೆರಳುತ್ತಿದ್ದ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಪೈಲಟ್ ಸಮಯ ಪ್ರಜ್ಞೆಯಿಂದ ಭಾರೀ ಅನಾಹುತವೊಂದು ತಪ್ಪಿದೆ.

ಹಡಗಲಿಯ ಹೊಳಲು ಬಳಿ ಸಾಧನಾ ಶಾಲಾ ಮೈದಾನದಲ್ಲಿ ತಾಂತ್ರಿಕ ದೋಷದಿಂದ ನೆಲಕ್ಕಿಳಿದೆದೆ ಕಾಪ್ಟರ್. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ.

ತಾಂತ್ರಿಕ ದೋಷವನ್ನು ಸರಿಪಡಿಸಿಕೊಂಡು, ಶ್ರೀಗಳು ತಮ್ಮ ಪ್ರಯಾಣವನ್ನು ಮುಂದುವರಿಸಿದ್ದಾರೆ. ಹೊಸಪೇಟೆಯಲ್ಲಿ ನಡೆದ ಸರ್ವಧರ್ಮ ರಥೋತ್ಸವಕ್ಕೆ ಶ್ರೀಗಳು ಆಗಮಿಸಿ, ಮರಳುವಾಗ ಈ ಅವಘಡ ಸಂಭವಿಸಿದೆ.
 

loader