ಗ್ರಾಮ ಪಂಚಾಯಿತಿ ಅಧ್ಯಕ್ಷರಾಗಿದ್ದ ಅಬ್ದುಲ್'ಸಾಬ್‌'ರವರು ಹಾರೋಹಳ್ಳಿಯಲ್ಲಿದ್ದ ಕಸಾಯಿಖಾನೆಯನ್ನು ಸಾರ್ವಜನಿಕರ ಹಿತದಿಂದ ಮುಚ್ಚಿಸಿದ್ದರು. ಈಗ ಕಸಾಯಿಖಾನೆ ತೆರೆಯಲು ನಾವು ವಿರೋಧಿಸುತ್ತೇವೆ. ಸೇವಾ ಮನೋಭಾವನೆ ಮುಖ್ಯವೇ ಹೊರತು ಸ್ವಾರ್ಥವಲ್ಲ. ಮುಸ್ಲಿಂ ಸಮುದಾಯವು ಹೋರಾಟದ ಜತೆಗಿರಲಿದೆ.- ಏಜಾಜ್‌ ಅಯಾಜ್‌, ಮುಸ್ಲಿಂ ಮುಖಂಡ

ಕನಕಪುರ(ಮಾ. 25): ಹಾರೋಹಳ್ಳಿಯಲ್ಲಿ ಗೋಮಾಳಕ್ಕೆ ಮೀಸಲಿಟ್ಟ ಭೂಮಿಯಲ್ಲಿ ಕಸಾಯಿಖಾನೆ ಸ್ಥಾಪನೆ ಮಾಡುವುದನ್ನು ವಿರೋಧಿಸಿ ಸಾಧು-ಸಂತರು, ಮಠಾಧೀಶರು ಹಾಗೂ ಗ್ರಾಮಸ್ಥರು ಉಪವಾಸ ಸತ್ಯಾಗ್ರಹ ನಡೆಸುವ ಮೂಲಕ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.
ಹಾರೋಹಳ್ಳಿಯ ವೃತ್ತದಲ್ಲಿ ನಡೆದ ಉಪ ವಾಸ ಸತ್ಯಾಗ್ರಹದಲ್ಲಿ ರಾಮಚಂದ್ರಾಪುರ ಮಠದ ರಾಘ ವೇಶ್ವರ ಭಾರತಿ ಸ್ವಾಮೀಜಿ, ಶ್ರೀರಾಮಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌, ಕೆ.ಎಸ್‌. ಈಶ್ವರಪ್ಪ , ಸಿ.ಟಿ.ರವಿ ಸೇರಿದಂತೆ ಅನೇಕರು ಪಾಲ್ಗೊಂಡಿದ್ದರು. 

ಜೈ ಗೋ ಮಾತೆ ಎಂದು ಜಯಘೋಷ ಗಳನ್ನು ಕೂಗುವ ಮೂಲಕ ಯಾವುದೇ ಕಾರಣಕ್ಕೂ ಕಸಾಯಿ ಖಾನೆ ತೆರೆಯಲು ಅವಕಾಶ ನೀಡುವುದಿಲ್ಲ. ರಕ್ಷಿಸಿ ರಕ್ಷಿಸಿ ಗೋ ಮಾತೆಯನ್ನು ರಕ್ಷಿಸಿ ಎಂದು ಕಸಾಯಿ ಖಾನೆ ಸ್ಥಾಪನೆಯಾಗುವುದನ್ನು ತೀವ್ರವಾಗಿ ವಿರೋ ಧಿಸಿದರು. ಈ ವೇಳೆ ಸತ್ಯಾಗ್ರಹ ನಿರತರನ್ನು ಉದ್ದೇ ಶಿಸಿ ಮಾತನಾಡಿದ ಶ್ರೀ ಸೇನೆ ಮುಖ್ಯಸ್ಥ ಪ್ರಮೋದ್‌ ಮುತಾಲಿಕ್‌, ಜನರ ಬೇಡಿಕೆಗೆ ಸ್ಪಂದಿಸದ ರಾಜ್ಯ ಸರ್ಕಾರ ಅಧಿಕಾರದ ದರ್ಪ ​ತೊ​ರು​ತ್ತಿ​ದೆ ಎಂದು ತರಾಟೆ ತೆಗೆದುಕೊಂಡರು. 

ಶಾಸಕ ಸಿ.ಟಿ. ರವಿ ಮಾತನಾಡಿ, ರೈತ​ರ​ನ್ನು ಉಳಿ​ಸ​ಬೇ​​ಕಾದ ಸರ್ಕಾ​ರ ​ರೈ​ತ​ರ ಒಡ​ನಾ​ಡಿ​ಯಾ​ದ ಗೋ​ವು​ಗ​ಳ​ನ್ನು ಹತ್ಯೆ ಮಾಡ​ಲು ಮುಂದಾ​ಗಿ​ದೆ. ಇಂತ​ಹ ಗೋವುಗಳನ್ನು ಉಳಿಸದೇ ನಮ್ಮ ಕೃಷಿ ಸಂಸ್ಕೃತಿ ಉಳಿಯದು. ಗೋಹತ್ಯೆಯು ನಮ್ಮ ಸಂಸ್ಕೃತಿ ಸಂವಿಧಾನಕ್ಕೆ ಮಾಡುವ ಅಪಮಾನ. ಸರ್ಕಾ​ರ ​ಇ​ನ್ನಾದರೂ ​ಎ​​ಚ್ಚೆತ್ತು ಗೋವು​ಗ​ಳ ಸಂರ​ಕ್ಷ​ಣೆ​​​ಗೆ ಮುಂದಾ​ಗ​ಬೇ​​ಕು ಎಂದರು.

ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪಧ್ಮನಾಭ ರೆಡ್ಡಿ ಮಾತನಾಡಿ, ಕಸಾಯಿಖಾನೆ ನಿರ್ಮಾಣ ಮಾಡಲು ಟೆಂಡರ್‌'ದಾರನ ತಾಂತ್ರಿಕ ಸಮಸ್ಯೆಯನ್ನು ಗಮನಿಸಿ ಕೇಂದ್ರ ಸರ್ಕಾರ ಮತ್ತು ಬಿಬಿಎಂಪಿ, ಟೆಂಡರ್‌ ರದ್ದು ಪಡಿಸಲು ತಿಳಿಸಿದೆ. ಆದರೆ, ಅಧಿಕಾರಿಗಳು ಅವನಿಗೆ ಸಹಕಾರ ನೀಡಲು ಮುಂದಾಗಿದ್ದು ಇದರ ವಿರುದ್ಧ ಕಾನೂನು ಹೋರಾಟ ನಡೆಸಬೇಕಿದೆ ಎಂದರು. 

ಹಿಂದೂ ಜಾಗರಣ ವೇದಿಕೆಯ ಜಗದೀಶ್‌ ಕಾರಂತ್‌, ಚಕ್ರವರ್ತಿ ಸೂಲಿಬೆಲೆ ಮಾತನಾಡಿದರು. ಉಪವಾಸ ಸತ್ಯಾಗ್ರಹದಲ್ಲಿ ಸಿದ್ದಾರೂಢಮಠದ ಆರೂಢಭಾರತಿ ಸ್ವಾಮಿ, ಆನಂದ ಗುರೂಜಿ, ವಿಶ್ವಒಕ್ಕಲಿಗರ ಮಠದ ಚಂದ್ರ ಶೇಖರ ಸ್ವಾಮೀಜಿ, ಬಿಜೆಪಿ ಮುಖಂಡ ನಾಗರಾಜ್‌, ನಾಗರಾಜ್‌, ಹಾರೋಹಳ್ಳಿ ಮಲ್ಲಪ್ಪ, ಸಂಪತ್‌ ಕುಮಾರ್‌ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಕನ್ನಡಪ್ರಭ ವಾರ್ತೆ
epaper.kannadaprabha.in