- ಚಳಿ ಹೆಚ್ಚಾಗಿ, ಉಸಿರಾಟದ ಸಮಸ್ಯೆ ಎದುರಿಸಿದ ಮಗು- ಕಂದಹಾರ ಗ್ರಾಮದಲ್ಲಿ ನಡೆದ ದುರ್ಘಟನೆ.

ಚಿಕ್ಕಬಳ್ಳಾಪುರ: ಇಲ್ಲಿನ ಹೊರವಲಯ ಕಂದವಾರ ನಿರಾಶ್ರಿತರ ಪುನರ್ವಸತಿ ಕೇಂದ್ರದಲ್ಲಿ ಚಳಿಗೆ ತತ್ತರಿಸಿದ ವರ್ಷದ ಮಗುವೊಂದು ಕೊನೆಯುಸಿರೆಳೆದಿದೆ.

ಸಯ್ಯದಾನಿ, ಖಾರ್ದ ಪಾಷಾ ದಂಪತಿಯ ಪುತ್ರಿ ಬಾನು ಮೃತಪಟ್ಟ ಮಗು. ಅತಿಯಾದ ಚಳಿಯಿಂದ ಉಸಿರಾಟದ ಸಮಸ್ಯೆಯನ್ನು ಅನುಭವಿಸುತ್ತಿದ್ದಳು ಬಾನು.

ನಗರಸಭೆ ನಿರ್ಮಿಸಿದ ಕಂದವಾರದ ಕಬ್ಬಿಣದ ಶೀಟ್‌ಗಳ ಶೆಡ್‌ನಲ್ಲಿ ಮಗುವಿನ ಕುಟುಂಬ ವಾಸಿಸುತ್ತಿತ್ತು.