- ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ಡಿನೋಟಿಫೈ ಮಾಡಿದ ಸಿಎಂ- ಬಿಜೆಪಿ ಮುಖಂಡನಿಂದ ಸಿಎಂ ವಿರುದ್ಧ ಆರೋಪ

ಬೆಂಗಳೂರು: ಹಿಂದೆ ಮೈಸೂರು ಅರಸರು ಉದ್ಯಾನವನಕ್ಕೆ ಮೀಸಲಿಟ್ಟ ಜಾಗವನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಡಿನೋಟಿಫೈ ಮಾಡಿದ್ದಾರೆ, ಎಂದು ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ ಅವರು ಆರೋಪಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮೂರು ಎಕರೆ 39 ಗುಂಟೆ ಜಾಗವನ್ನು ಮುಖ್ಯಮಂತ್ರಿ ಡಿನೋಟಿಫೈ ಮಾಡಿದ್ದಾರೆ, ಎಂದರು. 

ಜಗದೀಶ್ ಶೆಟ್ಟರ್ ಅವರ ಸರ್ಕಾರ ಇದ್ದಾಗಲೂ ಈ ಜಾಗವನ್ನು ಡಿನೋಟಿಫೈ ಮಾಡಲು ಆಗ್ರಹಿಸಿ ಅರ್ಜಿ ಬಂದಿತ್ತು, ಆದರೆ, ಶೆಟ್ಟರ್ ಅವರು ಅದನ್ನು ಒಪ್ಪಲಿಲ್ಲ. ಇದೀಗ ಸಿಎಂ ಸಿದ್ದರಾಮಯ್ಯ ಅವರು ಉದ್ಯಾನವನ, ಸಾರ್ವಜನಿಕ ಅನುಕೂಲಕ್ಕೆ ಮೀಸಲಿಟ್ಟು ಜಾಗವನ್ನು ಡಿನೋಟಿಫಿಕೇಶನ್ ಮಾಡಿದ್ದು, ಕೋಟ್ಯಾಂತರ ರುಪಾಯಿ ಅವ್ಯವಹಾರ ನಡೆದಿದೆ, ಎಂದು ಆರೋಪಿಸಿದ್ದಾರೆ.